ಕೇಂದ್ರ ಸರ್ಕಾರಿ ನೌಕರರಿಗೆ (Govt Employees) ಸದ್ಯದಲ್ಲೇ ಖುಷಿ ಕೊಡುವಂತಹ ಸುದ್ದಿ ಒಂದು ಹರಿದಾಡುತ್ತಿದೆ. 8ನೇ ವೇತನ ಆಯೋಗದ (8th Pay Commission) ಅಧಿಕೃತ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು (Central Govt Servant) ಕಾಯುತ್ತಿರುವಾಗಲೇ, ಕೇಂದ್ರ ಸರ್ಕಾರಿ ನೌಕರರು ತಮ್ಮ ಕನಿಷ್ಠ ಮೂಲ ವೇತನದಲ್ಲಿ (minimum wage) ಶೇ.186ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ಬಹುತೇಕ ಮೂರು ಪಟ್ಟು ಹೆಚ್ಚಾಗಬಹುದು ವರದಿಗಳು ತಿಳಿಸಿವೆ.
8th pay commission updates 8ನೇ ವೇತನ ಆಯೋಗದ ವಿಶೇಷತೆ ಏನು?:
8ನೇ ವೇತನ ಆಯೋಗದ ಮೂಲ ವೇತನ
ಇದೀಗ ಬಂದಿರುವ ವರದಿಗಳ ಮೂಲಗಳ ಪ್ರಕಾರ ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ (ಜೆಸಿಎಂ) ನ ಕಾರ್ಯದರ್ಶಿ (ಸಿಬ್ಬಂದಿ ಭಾಗ) ಶಿವ ಗೋಪಾಲ್ ಮಿಶ್ರಾ ಅವರು, ಮೂಲ ವೇತನದಲ್ಲಿ ಕನಿಷ್ಠ 2.86 ಫಿಟ್‌ಮೆಂಟ್ ಅಂಶವನ್ನು ನಿರೀಕ್ಷಿಸುತ್ತಿದ್ದಾರೆ. ಏಳನೇ ವೇತನ ಆಯೋಗ ದಡಿಯಲ್ಲಿ 2.57 ಫಿಟ್‌ಮೆಂಟ್ ಫ್ಯಾಕ್ಟರ್ ಗೆ ಹೋಲಿಸಿದರೆ ಇದು 29 ಬೇಸಿಸ್ ಪಾಯಿಂಟ್‌ಗಳು (bps) ಹೆಚ್ಚಾಗುತ್ತದೆ. 2.86 ರ ಫಿಟ್‌ಮೆಂಟ್ ಅಂಶವನ್ನು ಕೆಂದ್ರ ಸರ್ಕಾರ ಅನುಮೋದಿಸಿದರೆ, ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಸರ್ಕಾರಿ ನೌಕರರ ಕನಿಷ್ಠ ವೇತನವು 18,000 ರೂ. ಇದ ವೇತನ ಮೂರು ಪಟ್ಟು ಏರಿಕೆಯಾಗುತ್ತದೆ. 7ನೇ ವೇತನ ಆಯೋಗದ ಮೂಲ ವೇತನಕ್ಕೆ ಹೋಲಿಸಿದರೆ 186 ಪ್ರತಿಶತದಷ್ಟು ಏರಿಕೆಯಾಗಿದೆ. ಅಂದರೆ ಬರೋಬ್ಬರಿ 51,480 ರೂ. ಹೆಚ್ಚಾಗುತ್ತದೆ.
8ನೇ ವೇತನ ಆಯೋಗದ ಪಿಂಚುಣಿ:
ಇನ್ನು 8 ನೇ ವೇತನ ಆಯೋಗದಲ್ಲಿ ಪಿಂಚುಣಿಯು ಏರಿಕೆಯಾಗಲ್ಲಿದೆ. ಫಿಟ್‌ಮೆಂಟ್ ಅಂಶದ ಹೆಚ್ಚಳವು ಕೇಂದ್ರ ಸರ್ಕಾರಿ ಉದ್ಯೋಗಿಗಳ ಪಿಂಚಣಿಯನ್ನು ಹೆಚ್ಚಿಸುತ್ತದೆ. 8ನೇ ವೇತನ ಆಯೋಗದ ಅಡಿಯಲ್ಲಿ ಪಿಂಚುಣಿಯು ಸಹ ಶೇಕಡಾ 186 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈಗಿರುವ ಇರುವ 9,000 ರೂ.ಗೆ ಹೋಲಿಸಿದರೆ ಪಿಂಚಣಿಗಳು 25,740 ರೂ.ಗೆ ಏರಿಕೆಯಾಗುತ್ತದೆ.
8ನೇ ವೇತನ ಆಯೋಗ ಯಾವಾಗ ರಚನೆ?
8ನೇ ವೇತನ ಆಯೋಗದ (8th pay commission updates) ರಚನೆಯ ನಿರೀಕ್ಷಿತ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲವಾದರೂ, ಕೇಂದ್ರ ಸರ್ಕಾರವು ಮುಂಬರುವ 2025-26 ರ ಬಜೆಟ್ನಲ್ಲಿ ಘೋಷಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ, ಕಳೆದ ಬಜೆಟ್ 2024-25 ರಲ್ಲಿ ನೌಕರರ ಸಂಘಗಳು ತಮ್ಮ ಬೇಡಿಕೆಗಳೊಂದಿಗೆ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ಮತ್ತು ಹಣಕಾಸು ಸಚಿವಾಲಯಕ್ಕೆ ಭೇಟಿ ನೀಡಿವೆ. ಇನ್ನು ಜಂಟಿ ಸಲಹಾ ಯಂತ್ರೋಪಕರಣಗಳ ರಾಷ್ಟ್ರೀಯ ಮಂಡಳಿಯ ಸಭೆಯ ನಂತರ ಡಿಸೆಂಬರ್‌ನಲ್ಲಿ 8 ನೇ ವೇತನ ಆಯೋಗದ ಬಗ್ಗೆ ಸ್ಪಷ್ಟತೆ ಬರುವ ಸಾಧ್ಯತೆಯಿದೆ. ಸಭೆಯು ಇದೇ ತಿಂಗಳಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೀಗ ಮುಂದಿನ ತಿಂಗಳು ಡಿಸೆಂಬರ್‌ಗೆ ಮುಂದೂಡಲಾಗಿದೆ.
7ನೇ ವೇತನ ಆಯೋಗ ಯಾವಾಗ ರಚನೆಯಾಯಿತು?
ಸಾಮಾನ್ಯವಾಗಿ, ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಲಾಗುತ್ತದೆ, ಕೇಂದ್ರ ಸರ್ಕಾರಿ ಉದ್ಯೋಗಿಗಳು ಪ್ರಸ್ತುತ ಫೆಬ್ರವರಿ 2014 ರ 7 ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ತಿಂಗಳಿಗೆ ಕನಿಷ್ಠ 18,000 ರೂ. ಮೂಲ ವೇತನವನ್ನು ಪಡೆಯುತ್ತಿದ್ದಾರೆ. ಆದರೆ 6 ನೇ ವೇತನ ಆಯೋಗದ (6th Pay Commission) 7,000 ರೂ. ಪಡೆಯುತ್ತಿದ್ದರು ಎನ್ನಲಾಗುತ್ತದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 1 ಲಕ್ಷಕ್ಕೂ ಅಧಿಕ ವೇತನ
ಪದವಿ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ವಿದ್ಯಾರ್ಥಿವೇತನ