PUC, ಪದವಿ, ಡಿಪ್ಲೊಮಾ, ಓದುತ್ತಿರುವ ವಿದ್ಯಾರ್ಥಿಗಳಿಗೆ 12,000 ರೂ. ವಿದ್ಯಾರ್ಥಿವೇತನ | Tata Capital Pankh Scholarship

WhatsApp Group Join Now
Telegram Group Join Now

tata capital pankh scholarship: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ 2024-25 ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿ ಮತ್ತು ದ್ವೀತಿಯ ಪಿಯುಸಿ, ಡಿಪ್ಲೊಮಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಟಾಟಾ ಕ್ಯಾಪಿಟಲ್ ಲಿಮಿಟೆಡ್ ವತಿಯಿಂದ ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆ ಹೇಗೆ, ಅಗತ್ಯ ದಾಖಲೆಗಳ ವಿವರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಸಂಪೂರ್ಣ ಓದಿ.

ಟಾಟಾ ಕ್ಯಾಪಿಟಲ್ ಲಿಮಿಟೆಡ್ ವತಿಯಿಂದ ನೀಡಲಾಗುವ ಈ ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25 ರ ಮುಖ್ಯ ಉದ್ದೇಶ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಈ ಸ್ಕಾಲರ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ, 1st PUC ಮತ್ತು 2nd PUC ತರಗತಿಗಳಲ್ಲಿ ಓದುತ್ತಿರುವ ಅಥವಾ ಸಾಮಾನ್ಯ ಪದವಿ/ಡಿಪ್ಲೊಮಾ/ಐಟಿಐ ಕೋರ್ಸ್‌ಗಳನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳ ಅವರ ಕೋರ್ಸ್ ಶುಲ್ಕದ 80% ವರೆಗೆ ಹಾಗೂ 10,000 ರೂ. ರಿಂದ 12,000 ರೂ. ವರೆಗೆ ವಾರ್ಷಿಕ ಒಂದು ಸಾರಿ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

Tata Capital Pankh Scholarship Details

ಅರ್ಹತೆ:
ಭಾರತದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 1st & 2nd PUC ನೇ ತರಗತಿ, ಬಿಕಾಂ, ಬಿಎಸ್ಸಿ, ಬಿಎ, ಡಿಪ್ಲೊಮಾ/ಐಟಿಐ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿದಾರರು ಹಿಂದಿನ ತರಗತಿಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ರೂ. ಮೀರಿರಬಾರದು ಅಥವಾ ಸಮನಾಗಿರಬೇಕು.
ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ.

ಪ್ರಯೋಜನಗಳು:
1st PUC ಮತ್ತು 2nd PUC ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಬಿಕಾಂ, ಬಿಎಸ್ಸಿ, ಬಿಎ, ಡಿಪ್ಲೊಮಾ/ಐಟಿಐ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು 12,000 ರೂ. ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಇದನ್ನೂ ಓದಿ: 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿವೇತನ

Tata Capital Pankh Scholarship ಪ್ರಮುಖ ದಾಖಲೆಗಳು:
ಆಧಾರ್ ಕಾರ್ಡ್
ಅರ್ಜಿದಾರರ ಪಾಸ್‌ಪೋರ್ಟ್ ಗಾತ್ರದ ಪೋಟೋ
ಆದಾಯ ಪ್ರಮಾಣಪತ್ರ
ಪ್ರವೇಶದ ಪುರಾವೆ (ಶಾಲೆ/ಕಾಲೇಜು ಗುರುತಿನ ಚೀಟಿ/
ಪ್ರಸಕ್ತ ಶೈಕ್ಷಣಿಕ ವರ್ಷದ ಶುಲ್ಕ ರಶೀದಿ
ವಿದ್ಯಾರ್ಥಿವೇತನ ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
ಹಿಂದಿನ ತರಗತಿಯ ಮಾರ್ಕ್‌ಶೀಟ್‌ಗಳು ಅಥವಾ ಗ್ರೇಡ್ ಕಾರ್ಡ್‌ಗಳು
ವಿಕಲಾಂಗ ವಿದ್ಯಾರ್ಥಿಗಳು ಅಂಗವಿಕಲತೆ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣಪತ್ರ

ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/10/ 2024

Tata Capital Pankh Scholarship ಪ್ರಮುಖ ಲಿಂಕ್‌ಗಳು:
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: HDFC ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 75,000 ರೂ. ಸ್ಕಾಲರ್‌ಶಿಪ್‌

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net