---Advertisement---

ಸರ್ಕಾರದಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ಅರ್ಜಿ ಆಹ್ವಾನ | Karnataka Government Schemes 2024, Ganga kalyana

By admin

Published On:

Follow Us
Karnataka Government Schemes
---Advertisement---
WhatsApp Group Join Now
Telegram Group Join Now

Karnataka Government Schemes: ಕರ್ನಾಟಕ ಸರ್ಕಾರವು 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಲಾಭ ಪಡೆಯಲು ಸಮಾಜ ಕಲ್ಯಾಣ ಇಲಾಖೆ ಅರ್ಹ ಫಲಾನುಭವಿಗಳಿಂದ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿಯ ವಿವಿಧ ವಿವಿಧ ಯೋಜನೆಗಳ ಅಡಿ ಆರ್ಥಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬದವರನ್ನು ಸದೃಢ ಮಾಡಲು ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ, ಭೂ ಒಡೆತನ ಯೋಜನೆ ಹೀಗೆ ಹಲವು ಯೋಜನೆಗಳ ಲಾಭ ಪಡೆದು ಪರಿಶಿಷ್ಟ ಜಾತಿಯವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲಿ ಎನ್ನುವ ಉದ್ದೇಶದಿಂದ ಸರ್ಕಾರ 2024-25ನೇ ಸಾಲಿನ ಈ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ.

Karnataka Government Schemes:

ಎಸ್ ಸಿ ಕಲ್ಯಾಣ ಯೋಜನೆಗಳ ವಿವರ:

1) ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ಈ ಯೋಜನೆಯಡಿ ಬ್ಯಾಂಕ್ ಗಳ ಸಹಯೋಗದೊಂದಿಗೆ ವ್ಯಾಪಾರ ಮತ್ತು ಇತರೆ ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ.
ಬ್ಯಾಂಕ್ ಸಾಲ ಶೇ.20ರಷ್ಟು ಅಥವಾ ಗರಿಷ್ಠ 1 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ.
ಘಟಕ ವೆಚ್ಚದ ಶೇ.70ರಷ್ಟು ಅಥವಾ ಗರಿಷ್ಠ 2 ಲಕ್ಷ ರೂ. ಸಹಾಯಧನ ಪಡೆಯಬಹುದು.
ಹಳದಿ ಬಣ್ಣದ ಬೋರ್ಡ್ ಅಥವಾ ಬಾಡಿಗೆ ಟ್ಯಾಕ್ಸಿ ಖರೀದಿಸಲು ಸಾಲದ ಮೊತ್ತದ ಶೇ.75ರಷ್ಟು ಅಥವಾ ಗರಿಷ್ಠ 4 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ.

Karnataka Government Schemes 2024, Ganga kalyana

2) ಸ್ವಯಂ ಉದ್ಯೋಗ ನೇರಸಾಲ ಯೋಜನೆ:
ಸಣ್ಣ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಸಹಾಯಧನ ಹಾಗೂ ಸಾಲ ಮಂಜೂರಾತಿ
ಈ ಯೋಜನೆಯಡಿಯಲ್ಲಿ 50 ಸಾವಿರ ರೂ. ಸಹಾಯಧನ ಹಾಗೂ ಶೇ.4ರ ಬಡ್ಡಿದರದಲ್ಲಿ 50 ಸಾವಿರ ರೂ. ಸಾಲಸೌಲಭ್ಯ ಒದಗಿಸಲಾಗುತ್ತದೆ.

Karnataka Government Schemes 2024, Ganga kalyana

3) ಭೂ ಒಡೆತನ ಯೋಜನೆ:
ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಭೂಮಿ ಖರೀದಿಸಲು ಸರ್ಕಾರದಿಂದ ಸಹಾಯಧನ ಮತ್ತು ಶೇ.6ರ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಸಹ ಪಡೆಯಬಹುದು.

4) ಗಂಗಾ ಕಲ್ಯಾಣ ಯೋಜನೆ:
1.20-5 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೊಳವೆಬಾವಿ, ಪಂಪ್ ಸೆಟ್, ವಿದ್ಯುತ್ ಸೇರಿ ನೀರಾವರಿ ಸೌಲಭ್ಯ ಪಡೆಯಬಹುದು.

Karnataka Government Schemes 2024, Ganga kalyana

ಇದನ್ನೂ ಓದಿ: ಸ್ವಯಂ ಉದ್ಯೋಗ ಪ್ರಾರಂಭಿಸಲು 1,00,000 ರೂ. ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿ

5) ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ:
ಕನಿಷ್ಠ 10 ಸದಸ್ಯರನ್ನು ಹೊಂದಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಸಣ್ಣ ಆರ್ಥಿಕ ಚಟುವಟಿಕೆಗಳಿಗಾಗಿ 1.50 ಲಕ್ಷ ರೂ. ಸಹಾಯಧನ ಹಾಗೂ ಶೇಕಡಾ 4ರ ಬಡ್ಡಿದರದಲ್ಲಿ 1 ಲಕ್ಷ ರೂ. ವರೆಗೆ ಸಾಲಸೌಲಭ್ಯ ನೀಡಲಾಗುತ್ತದೆ.

Karnataka Government Schemes 2024, Ganga kalyana

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ ಯೋಜನೆಗಳ ಲಾಭ ಪಡೆಯಲು ಬಯಸುವವರು 23/11/ 2024ರೊಳಗೆ ಅರ್ಜಿ ಸಲ್ಲಿಸಬಹುದು. ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 2023-24ನೇ ಸಾಲಿನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ:
Karnataka Government Schemes ಅರ್ಹ ಆಸಕ್ತ ಫಲಾನುಭವಿಗಳ sevasindhu.karnataka.gov.in ವೆಬ್‌ಸೈಟ್ ನಲ್ಲಿ ಭೇಟಿ ನೀಡಿ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಅಥವಾ CSS ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಕಾರ್ಮಿಕರ ಮಕ್ಕಳಿಗೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ

ಗಮನಿಸಿ:
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಎಸ್.ಸಿ, ಎಸ್.ಟಿ ಸಹಾಯವಾಣಿ ಸಂಖ್ಯೆ 9482300400 ಸಂಪರ್ಕಿಸಿ.

ರೈತರಿಗೆ ಗುಡ್ ನ್ಯೂಸ್‌ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 50,000 ರೂ. ಸಹಾಯಧನ 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net