ನಮಸ್ಕಾರ ವಿದ್ಯಾರ್ಥಿಮಿತ್ರರೇ ನೀವು ಕಾನೂನು ಪದವಿ, ಅರ್ಥಶಾಸ್ತ್ರ ಪದವಿ, ಸಿಎ ಫೌಂಡೇಷನ್‌ಗೆ ಪ್ರವೇಶ ಪಡೆದಿರುವ ಬಡ ಕುಟುಂಬದ ವಿದ್ಯಾರ್ಥಿಗಳು ನೀವಾಗಿದರೆ, ನಿಮ್ಮ ಉನ್ನತ ಶಿಕ್ಷಣವನ್ನು ಮುಂದವರೆಸಲು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಲ್ಲಿ, ಚಿಂತೆ ಬೇಡಾ. ಇದೀಗ ಅದಾನಿ ಗ್ರೂಪ್ ವತಿಯಿಂದ ಅದಾನಿ ಜ್ಞಾನ ಜ್ಯೋತಿ ಸ್ಕಾಲರ್‌ಶಿಪ್‌ಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬಡ ಕುಟುಂಬದ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಚಾರ್ಟೇರ್ಡೇ ಅಕೌಂಟೆಂಟ್ (CA) ಅರ್ಥಶಾಸ್ತ್ರ (Economic) ನಲ್ಲಿ ಸ್ನಾತಕ ಪದವಿ, ಕಾನೂನು (Law) ಪದವಿಗಳಿಗೆ ಈ ವಿಷಯಗಳಲ್ಲಿ ಪ್ರಥಮ ವರ್ಷದಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೂ ಅದಾನಿ ಗ್ರೂಪ್ ತನ್ನ ಕಾರ್ಪೋರೇಟ್ ಸೋಷಿಯಲ್ ರೆಸ್ಪಾಸ್ಸಿಬಿಲಿಟಿ ಅಂಗವಾಗಿ ಅದಾನಿ ಗ್ಯಾನ್ ಜ್ಯೋತಿ ಸ್ಕಾಲರ್ಶಿಪ್ ರೂ.50,000- 1,80,000 ವರೆಗೆ ನೀಡುತ್ತಿದೆ.
Adani Gyan Jyoti Scholarship Apply
ವಿದ್ಯಾರ್ಹತೆ ಅನುಗುಣವಾಗಿ ವಿದ್ಯಾರ್ಥಿ ವೇತನ:
ಅರ್ಥಶಾಸ್ತ್ರ ವಿದ್ಯಾರ್ಥಿಗಳಿಗೆ: 50,000 ರೂ. ವರಗೆ
ಕಾನೂನು ವಿದ್ಯಾರ್ಥಿಗಳಿಗೆ: 1,80,000 ರೂ. ವರಗೆ
ಚಾರ್ಟೇರ್ಡೇ ಅಕೌಂಟೆಂಟ್ (CA) ವಿದ್ಯಾರ್ಥಿಗಳಿಗೆ: 80,000 ರೂ. ವರಗೆ
ಅರ್ಹತೆಗಳು
ಕಾನೂನು ವಿದ್ಯಾರ್ಥಿಗಳು:
ಕಾನೂನು ಪದವಿ ವಿದ್ಯಾರ್ಥಿಗಳ (CLAT) ಪ್ರವೇಶ ಪರೀಕ್ಷೆಯಲ್ಲಿ ಆಲ್ ಇಂಡಿಯಾ ರ‍್ಯಾಂಕ್ 10, ಸಾವಿರರೋಳಗೆ ಇರಬೇಕು.
ಸಿಎ ವಿದ್ಯಾರ್ಥಿಗಳು:
ಸಿಎ ವಿದ್ಯಾರ್ಥಿಗಳು ಫೌಂಡೇಷನ್ (CA Foundation) ಎಕ್ಸಾಮ್‌ನಲ್ಲಿ 1 ಸಾವಿರ ಕ್ಕಿಂತ ಕಡಿಮೆ ರ‍್ಯಾಂಕ್ ಪಡೆದಿರಬೇಕು.
ಅರ್ಥಶಾಸ್ತ್ರದ ವಿದ್ಯಾರ್ಥಿಗಳು:
ಅರ್ಥಶಾಸ್ತ್ರ (Economics) ವಿಷಯದ ಪದವಿ ವಿದ್ಯಾರ್ಥಿಗಳು 12 ನೇ ತರಗತಿಯಲ್ಲಿ ಶೇಕಡಾ 75 % ಅಂಕಗಳನ್ನು ಪಡೆದಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಎಲ್ಲ ಮೂಲಗಳಿಂದ 4,5 ಲಕ್ಷ ಒಳಗಿರಬೇಕು.
ಅದಾನಿ ಗ್ರೂಪ್ ನೌಕರರು ಹಾಗೂ Buddy4Study ನೌಕರರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
ಇದನ್ನೂ ಓದಿ: ಕಾರ್ಮಿಕರ ಮಕ್ಕಳಿಗೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:
ಸರ್ಕಾರದಿಂದ ಪಡೆದ ಅಧಿಕೃತ ಗುರುತಿನ ಚೀಟಿ (ಆಧಾರ ಕಾರ್ಡ್/ PAN Card/ Voter ID Card)
ಪ್ರಸ್ತುತ ಪ್ರಥಮ ವರ್ಷದ ಕೋರ್ಸ್‌ಗೆ ಪ್ರವೇಶ ಪಡೆದ ದಾಖಲೆ.
ಆದಾಯ ಪ್ರಮಾಣ ಪತ್ರ.
ಹಿಂದಿನ ಶೈಕ್ಷಣಿಕ ವರ್ಷದ (12ನೇ ತರಗತಿ) ಅಂಕಪಟ್ಟಿ.
ಬ್ಯಾಂಕ್ ಖಾತೆ ಪಾಸ್‌ಬುಕ್.
ಇತ್ತೀಚಿನ ಪೋಟೋ.
ಪ್ರವೇಶ ಪರೀಕ್ಷೆ ಫಲಿತಾಂಶದ ಶೀಟ್.
ಸೀಟು ಹಂಚಿಕೆಯ ಕೌನ್ಸಿಲಿಂಗ್ ಲೆಟರ್.
ಕಾಲೇಜಿನಿಂದ ಪಡೆದ ಬೊನಾಫೈಡ್ ಸರ್ಟಿಫಿಕೇಟ್.
ಕಾಲೇಜಿನಿಂದ ನೀಡಲಾಗುವ ಕೋರ್ಸ್ ಶುಲ್ಕ ರಶಿದಿ
ಪೋಷಕರು / ತಂದೆ -ತಾಯಿಯ ಘೋಷಣಾ ಪ್ರಮಾಣ ಪತ್ರ.
ಇದನ್ನೂ ಓದಿ: ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ವತಿಯಿಂದ 60,000 ರೂ. ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-Dec-2024
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ