ಕರ್ನಾಟಕ ಲೆಜಿಸ್ಲೇಟಿವ್ ಅಸೆಂಬ್ಲಿ ಯಲ್ಲಿ ಖಾಲಿ ಇರುವ ವರದಿಗಾರರು, ಜೂನಿಯರ್ ಪ್ರೋಗ್ರಾಮರ್, ಕಂಪ್ಯೂಟರ್ ಆಪರೇಟರ್, ಸೇರಿದಂತೆ ವಿವಿಧ ಸದರಿ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ವಿಧಾನ ಸಭೆ ಸಚಿವಾಲಯದ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
KLA Recruitment 2024:
ಹುದ್ದೆಗಳ ಹೆಸರು: ಕಿರಿಯ ಸಹಾಯಕ, ವರದಿಗಾರರು
ಒಟ್ಟು ಹುದ್ದೆಗಳ ಸಂಖ್ಯೆ: 37
ಉದ್ಯೋಗದ ಸ್ಥಳ: ಬೆಂಗಳೂರು (ಕರ್ನಾಟಕ)
ಹುದ್ದೆಗಳ ವಿವರ:
- ವರದಿಗಾರರು: 07
- ಜೂನಿಯರ್ ಪ್ರೋಗ್ರಾಮರ್: 01
- ಕಂಪ್ಯೂಟರ್ ಆಪರೇಟರ್: 04
- ದಲಾಯತ್: 17
- ಸ್ವೀಪರ್: 04
- ಮಾಸಜರ್: 01
- ಕಿರಿಯ ಸಹಾಯಕ: 01
- ಕಿರಿಯ ಗ್ರಂಥಾಲಯ ಸಹಾಯಕರು: 01
- ಬಡಗಿ: 01
KLA Recruitment 2024 ವಿದ್ಯಾರ್ಹತೆ:
ಜ್ಯೂನಿಯರ್ ಪ್ರೋಗ್ರಾಮರ್:
ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್/ ಮಾಹಿತಿ ವಿಜ್ಞಾನ /ಎಲೆಕ್ಟ್ರಾನಿಕ್ಸ್ ಇಂಜಿನೀಯರಿಂಗ್/ ಕಂಪ್ಯೂಟರ್ ಅಪ್ಲಿಕೇಶನ್ (MCA) ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸರಬೇಕು.
ಕನ್ನಡ ವರದಿಗಾರರು:
ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಾಸಾಗಿರಬೇಕು. ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿರುವ ಪ್ರಥಮ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗೂ ಪ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತಿರ್ಣರಾಗಿರಬೇಕು.
ಕಂಪ್ಯೂಟರ್ ಆಪರೇಟರ್:
ಅಂಗೀಕೃತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್ನಲ್ಲಿ ಸ್ನಾತಕ ಪದವಿ (MCA.L) ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ನಲ್ಲಿ BSc ಪದವಿ ಪಾಸಾದವರಿಗೆ.
ಕಿರಿಯ ಸಹಾಯಕರು:
ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸರಬೇಕು. ಹಾಗೂ ಕಂಪ್ಯೂಟರ್ ಸಾಮಾನ್ಯ ಜ್ಞಾನವುಳ್ಳವಾಗಿರಬೇಕು.
ಕಿರಿಯ ಗ್ರಂಥಾಲಯ ಸಹಾಯಕರು:
ಅಂಗೀಕೃತ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್ ನಲ್ಲಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನವುಳ್ಳವಾಗಿರಬೇಕು.
ಮಸಾಜರ್ :
ಏಳನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವವಿರಬೇಕು
ಬಡಗಿ:
ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಅಥವಾ ಕೈಗಾರಿಕಾ ಸಂಸ್ಥೆಯ (ಐ.ಟಿ.ಐ) ಪ್ರಮಾಣ ಪತ್ರ ಹೊಂದಿರಬೇಕು.
ದಲಾಯತ್:
7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಸ್ವೀಪರ್:
4ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು.
ಗರಿಷ್ಠ ವಯೋಮಿತಿ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 38 ವರ್ಷ
ಎಸ್ಸಿ / ಎಸ್ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ: 41 ವರ್ಷ
KLA Recruitment 2024 ವೇತನ ಶ್ರೇಣಿ:
- ವರದಿಗಾರರು: 61,300 – 1,12,900 ರೂ.
- ಜೂನಿಯರ್ ಪ್ರೋಗ್ರಾಮರ್: 69,250 – 1,34,200 ರೂ.
- ಕಂಪ್ಯೂಟರ್ ಆಪರೇಟರ್: 49,050 – 92,500 ರೂ.
- ದಲಾಯತ್: 27,000 – 46,675 ರೂ.
- ಸ್ವೀಪರ್: 27,000 – 46,675 ರೂ.
- ಮಾಸಜರ್: 29,600 – 52,800 ರೂ.
- ಕಿರಿಯ ಸಹಾಯಕ: 34,100- 67,600 ರೂ.
- ಕಿರಿಯ ಗ್ರಂಥಾಲಯ ಸಹಾಯಕರು: 34,100- 67,600 ರೂ.
- ಬಡಗಿ: 29,600 – 52,800 ರೂ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು: ರೂ. 500.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳು: ಅರ್ಜಿ ಶುಲ್ಕ ಇಲ್ಲ.
ಅರ್ಜಿ ಸಲ್ಲಿಸುವ ವಿಳಾಸ:
ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ,
ಅಂಚೆ ಪೆಟ್ಟಿಗೆ ಸಂಖ್ಯೆ 5074, ಮೊದಲನೇ ಮಹಡಿ,
ವಿಧಾನ ಸೌಧ, ಬೆಂಗಳೂರು-560 001.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭ ದಿನಾಂಕ: ಅಕ್ಟೋಬರ್ 25, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 25, 2024
KLA Recruitment 2024 ಪ್ರಮುಖ ಲಿಂಕ್ಗಳು:
ಅಧಿಸೂಚನೆ ನೋಡಲು (HK): ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ನೋಡಲು (NHK): ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: kla.kar.nic.in