Amazon Future Engineer Scholarship: 2024-25 ನೇ ಸಾಲಿನಲ್ಲಿ ಉನ್ನತ ಶಿಕ್ಷಣವನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಫೌಂಡೇಶನ್ ಫಾರ್ ಎಕ್ಸಲನ್ಸ್ ನ ಸಹಭಾಗಿತ್ವದಲ್ಲಿ ಅಮೆಜಾನ್ ಕಂಪನಿಯಿಂದ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್ಶಿಪ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು, ಯಾವೆಲ್ಲ ದಾಖಲೆಗಳು ಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೋಡಬಹುದು.
ಹೌದು ನೀವೇನಾದರೂ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರೆ. ಅಮೆಜಾನ್ ಕಂಪನಿಯ (Amazon Scholarship) ವತಿಯಿಂದ ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಉನ್ನತ ಶಿಕ್ಷಣವನ್ನು ಪಡೆಯಲು ಹೆಣ್ಣುಮಕ್ಕಳಿಗೆ ಅಮೆಜಾನ್ ಫ್ಯೂಚರ್ ಇಂಜಿನಿಯರ್ ವಿದ್ಯಾರ್ಥಿವೇತನದಡಿಯಲ್ಲು 50,000 ರೂ. ಸ್ಕಾಲರ್ಶಿಪ್ ನೀಡಲಾಗುತ್ತದೆ.
Amazon Scholarship ಸ್ಕಾಲರ್ ಶಿಪ್ ಮೊತ್ತ:
ಈ ಸ್ಕಾಲರ್ಶಿಪ್ ಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಾರ್ಷಿಕ 50,000 ರೂ. ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:
ಪ್ರಸ್ತುತ ವರ್ಷದಲ್ಲಿ ಬಿ.ಇ / ಬಿ.ಟೆಕ್ ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ವಿಷಯದಲ್ಲಿ ಮೊದಲ ವರ್ಷದಲ್ಲಿರುವ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಭಾರತದ ಪ್ರಜೆಯಾಗಿರಬೇಕು
2022ರ ನಂತರ (ಸಿಬಿಎಸ್ಸಿ, ಐಎಸ್ಸಿ ಅಥವಾ ತತ್ಸಮಾನ) ಸಮಾನವಾದ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ. 3 ಲಕ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿವೇತನದ ಪ್ರಯೋಜನಗಳು:
Amazon Scholarship ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷದ ಕೋರ್ಸ್ ಪೂರ್ಣಗೊಳ್ಳುವವರೆಗೆ 50,000 ರೂ. ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲಿ ನೀಡಲಾದ ಲ್ಯಾಪ್‌ಟಾಪ್ ಮತ್ತು ಮಾರ್ಗದರ್ಶನ, ಕೌಶಲ್ಯ-ನಿರ್ಮಾಣ ಕಾರ್ಯಾಗಾರಗಳು, ನೆಟ್‌ವರ್ಕಿಂಗ್, ಇಂಟರ್ನ್‌ಶಿಪ್‌ಗಾಗಿ ಸ್ಪರ್ಧಿಸುವ ಅವಕಾಶವನ್ನು ಪಡೆಯುತ್ತಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ತರಗತಿ 12 ಮಾರ್ಕ್‌ಶೀಟ್
- ರಾಜ್ಯ / ಕೇಂದ್ರೀಯ ಪ್ರವೇಶ ಪರೀಕ್ಷೆಗೆ Rank ಪ್ರಮಾಣಪತ್ರ
- ಸೀಟು ಹಂಚಿಕೆಗೆ ಕೌನ್ಸೆಲಿಂಗ್ ಪತ್ರ
- ಕುಟುಂಬದ ಆದಾಯ ಪ್ರಮಾಣಪತ್ರ
- ಬೋಧನೆ/ಹಾಸ್ಟೆಲ್/ಮೆಸ್ ಶುಲ್ಕ ಪಾವತಿಸಿದ ರಸೀದಿಗಳು
- ಇ-ಆಧಾರ್ ಅಥವಾ ಮೂಲ ಆಧಾರ್ ಕಾರ್ಡ್
- ಕಾಲೇಜು ನೀಡಿದ ಬೋನಫೈಡ್ ಪ್ರಮಾಣಪತ್ರ
- ಕಾಲೇಜಿನಿಂದ ಅಂದಾಜು ವೆಚ್ಚ ರಸೀದಿ
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
ಅರ್ಜಿ ಸಲ್ಲಿಸಲು ಲಿಂಕ್ ಮತ್ತು ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2024
SBI ಬ್ಯಾಂಕ್ ವತಿಯಿಂದ 6 ರಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 70,000 ರೂ. ಸ್ಕಾಲರ್ಶಿಪ್
PUC ಪಾಸಾದ ವಿದ್ಯಾರ್ಥಿಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ
HDFC ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 75,000 ರೂ. ಸ್ಕಾಲರ್‌ಶಿಪ್