ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಉಚಿತ ಟೂಲ್‌ಕಿಟ್‌ ಪಡೆಯಲು ಅರ್ಜಿ ಆಹ್ವಾನ | Free Toolkits for Rural Artisans 2024

WhatsApp Group Join Now
Telegram Group Join Now

Free Toolkits for Rural Artisans: ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದ ಮೂಲಕ ತಿಳಿಸುವುದೇಂದರೆ ರಾಜ್ಯ ಸರ್ಕಾರದಿಂದ ಗ್ರಾಮೀಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಗಳ ಟೂಲ್‌ಕಿಟ್‌ಗಳನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಯೋಜನಗಳು:
ರಾಜ್ಯ ಸರ್ಕಾರದ ವತಿಯಿಂದ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (Free Swinging Machine), ವಿದ್ಯುತ್ ಚಾಲಿತ ಬಡಗಿ ಉಪಕರಣ ಹಾಗೂ ಗಾರೆ, ಕ್ಷೌರಿಕ, ಕಲ್ಲುಕುಟುಕ ಮತ್ತು ದೋಬಿ, ಪ್ಲಂಬರ್ ಮತ್ತು ಸ್ಯಾನಿಟರಿ, ಟೈಲ್ಸ್ ಫಿಟ್ಟರ್ ಕಸುಬುಗಳ ವಿವಿಧ ಸುಧಾರಿತ ಉಪಕರಣಗಳನ್ನು (ವೃತ್ತಿಪರ ಕುಶಲಕರ್ಮಿಗಳು) ಉಚಿತವಾಗಿ ಸುಧಾರಿತ ಸಲಕರಣೆಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲಕರ್ಮಿಗಳಿಂದ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

Free Toolkits for Rural Artisans

Free Toolkits for Rural Artisans

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:
ಅರ್ಜಿಯೊಂದಿಗೆ ಪಾಸ್ ಪೋರ್ಟ್‌ ಗ್ರಾತದ ಭಾವಚಿತ್ರ.
ಜಾತಿ ಪ್ರಮಾಣ ಪತ್ರ (ಎಸ್‍ಸಿ, ಎಸ್‍ಟಿ, ಮೈನಾರಿಟಿ)
ಪಡಿತರ ಚೀಟಿ.
ಮತದಾರರ ಗುರುತಿನ ಚೀಟಿ.
ವಿಕಲಚೇತನರಾಗಿದ್ದಲ್ಲಿ ಸರ್ಕಾರದಿಂದ ದೃಢೀಕರಣ ಪ್ರಮಾಣ ಪತ್ರ.
ಆಯಾಯ ಗ್ರಾಮ ಪಂಚಾಯತಿಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿಯಿಂದ (PDO) ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸಲು ಅರ್ಹತೆಗಳು:
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಟೈಲರಿಂಗ್ 18-50 ವರ್ಷ, ಪ್ಲಂಬರ್ ಮತ್ತು ಸ್ಯಾನಿಟರಿ, ಟೈಲ್ಸ್ ಫಿಟ್ಟರ್ ಮತ್ತು ಗಾರೆಕೆಲಸ 18-60 ವರ್ಷ
ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ.
ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಗ್ರಾಮೀಣ ಕೈಗಾರಿಕೆ ಕಚೇರಿಯಿಂದ ಈ ಹಿಂದೆ 5 ವರ್ಷಗಳಲ್ಲಿ ಉಚಿತ ಸುಧಾರಿತ ಉಪಕರಣ ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ.

ಉಚಿತ ಉಪಕರಣ ಪಡೆಯಲು ಲಿಂಕ್‌ಗಳು:
ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ: kodagu.nic.in
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30, ನವೆಂಬರ್, 2024 .

ಹೆಚ್ಚಿನ ಮಾಹಿತಿಗಾಗಿ:
ಉಪನಿರ್ದೇಶಕರು(ಗ್ರಾ.ಕೈ) ರವರ ಕಚೇರಿ,
ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ,
ಕೊಹಿನೂರ್ ರಸ್ತೆ, ಮಡಿಕೇರಿ ರವರನ್ನು ಖದ್ದಾಗಿ ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆ 08272-228113, 9741453038 ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಗ್ರಾಮೀಣ ಕೈಗಾರಿಕಾ ವಿಭಾಗದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ರೇಷನ ಕಾರ್ಡ್ ಗೆ ಅರ್ಜಿ ಆಹ್ವಾನ 

ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಯೋಜನೆಗೆ ಅರ್ಜಿ ಆಹ್ವಾನ 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net