Free IAS Coaching 2024 : ವಿದ್ಯಾರ್ಥಿಗಳಿಗೆ ಉಚಿತ IAS ಕೋಚಿಂಗ್ ಜೊತೆಗೆ ತಿಂಗಳಿಗೆ 15,000 ರೂ. ಶಿಷ್ಯವೇತನ

WhatsApp Group Join Now
Telegram Group Join Now

2024-25ನೆರ ಸಾಲಿನ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ (SC/ST) ಅಭ್ಯರ್ಥಿಗಳಿಗೆ ಉಚಿತವಾಗಿ ಯು. ಪಿ. ಎಸ್. ಸಿ (UPSC) ಪರೀಕ್ಷೆಯ ಪೂರ್ವಭಾವಿ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

Free IAS Coaching 2024 ಯೋಜನೆಯ ವಿವರಣೆ :

Free IAS Coaching 2024 ಈ ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉನ್ನತ ತರಬೇತಿ ಸಂಸ್ಥೆಗಳಿಂದ 6 ತಿಂಗಳ ಅವಧಿಗೆ ಪ್ರಿಲಿಮ್ಸ್ (Prelims Exam) ಹಾಗೂ 3 ತಿಂಗಳ ಅವಧಿಗೆ ಮುಖ್ಯ ಪರೀಕ್ಷೆಗೆ (Mains Exam) ಸೇರಿ ಒಟ್ಟು 9 ತಿಂಗಳವರೆಗೆ ತರಬೇತಿ ನೀಡಲಾಗುತ್ತದೆ.ಸದರಿ ಅಭ್ಯರ್ಥಿಗಳಿಗೆ ಶಿಷ್ಯ ವೇತನವನ್ನು ವಿದ್ಯಾರ್ಥಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಗೂ ತರಬೇತಿಯ ವೆಚ್ಚವನ್ನು ಸರ್ಕಾರವು ನೇರವಾಗಿ ತರಬೇತಿ ಸಂಸ್ಥೆಗಳಿಗೆ ಜಮಾ ಮಾಡುತ್ತದೆ.

ಅರ್ಹತೆಗಳು:
ಅಭ್ಯರ್ಥಿಗಳು 21 ರಿಂದ 37 ವರ್ಷದೊಳಗೆ ವಯೋಮಿತಿ ಹೊಂದಿರಬೇಕು.
ಪದವಿ ಪಾಸಾದವರು ಅಥವಾ ಅಂತಿಮ ಸೆಮಿಸ್ಟರ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಕರ್ನಾಟಕದ ನಿವಾಸಿಗಳು ಆಗಿರಬೇಕು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು.
ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 5.00 ಲಕ್ಷದೊಳಗೆ ಇರಬೇಕು.

ತರಬೇತಿಯ ಜೊತೆಗೆ ಅಭ್ಯರ್ಥಿಗಳಿಗೆ ಮಾಸಿಕ ಶಿಷ್ಯವೇತನ:

  • ದೆಹಲಿ – 15,000 ರೂ.
  • ಹೈದರಾಬಾದ್ – 8,000 ರೂ.
  • ಬೆಂಗಳೂರು – 6,000 ರೂ.
  • ಇತರೆ ಸ್ಥಳಗಳಲ್ಲಿ – 5,000 ರೂ.

ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ನಿಗದಿತ ದಿನಾಂಕದಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಿ ಆಯ್ಕೆ ಮಾಡಿಕೊಳ್ಳುತ್ತದೆ.

ಪ್ರಮುಖ ಲಿಂಕ್‌ಗಳು ಮತ್ತು ದಿನಾಂಕಗಳು:
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 30 ನವೆಂಬರ್ 2024
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: petc.kar.nic.in

ರೈಲ್ವೆ ಇಲಾಖೆಯಲ್ಲಿ 1791 ಹುದ್ದೆಗಳ ನೇಮಕಾತಿ SSLC ಮತ್ತು ITI ಪಾಸಾದವರು ಅರ್ಜಿ ಸಲ್ಲಿಸಿ 

ಕೆಸೆಟ್‌ 2024 ಹಾಲ್ ಟಿಕೆಟ್ ಪ್ರಕಟ ಡೌನ್‌ಲೋಡ್ ಮಾಡಲು ಡೈರೆಕ್ಟ್ ಲಿಂಕ್‌

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net