Valmiki Nigama Loan Application: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನ ಪರಿಶಿಷ್ಟ ಪಂಗಡ ಜನಾಂಗದವರಿಗೆ ವಾಲ್ಮೀಕಿ ನಿಯಮದಿಂದ ವಿವಿಧ ಯೋಜನೆಗಳಿಗೆ ಅರ್ಹರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆ:
ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಫಲಾನುಭವಿಗಳಿಗೆ ತರಕಾರಿ, ಹಣ್ಣು-ಹಂಪಲು, ಮೀನು ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಘಟಕಗಳನ್ನು ತೆರೆಯಲು ಘಟಕ ವೆಚ್ಚ ರೂ. 50,000/- ನೀಡಲಾಗುತ್ತದೆ, ಇದರಲ್ಲಿ ರೂ. 25000/- ಸಹಾಯಧನ (ಸಬ್ಸಿಡಿ) ಹಾಗೂ ಇನ್ನುಳಿದ ರೂ. 25000/- ಹಣವನ್ನು ಸಾಲವನ್ನಾಗಿ ಶೇಕಡಾ 4% ರ ಬಡ್ಡಿ ದರದಲ್ಲಿ ನಿಗಮದಿಂದ ನೀಡಲಾಗುತ್ತದೆ.
ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ :
ಪರಿಶಿಷ್ಟ ಪಂಗಡದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಮೂಹಿಕ ಉತ್ಪಾದನಾ/ಸೇವಾ ಘಟಕಗಳಿಗೆ ಆರ್ಥಿಕ ಸಹಾಯಧನ ನೀಡಲಾಗುತ್ತದೆ. ಒಟ್ಟು 10 ಜನ ಮಹಿಳಾ ಸದಸ್ಯರ ಗುಂಪಿಗೆ ರೂ. 2,50,000/- ಮಂಜೂರು ಮಾಡಲಾಗುತ್ತದೆ. ಒಟ್ಟು ಮೊತ್ತದಲ್ಲಿ ಪ್ರತಿಯೊಬ್ಬ ಗುಂಪಿನ ಸದಸ್ಯರಿಗೆ ತಲಾ 25,000 ರೂ. ಹಣವನ್ನು ಸಂಘದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಇದರಲ್ಲಿ 15,000 ರೂ. ಸಹಾಯಧನ ಹಾಗೂ 10,000 ರೂ. ಸಾಲ ರೂಪದಲ್ಲಿ ನೀಡಲಾಗುತ್ತದೆ.
Valmiki Nigama Loan Application ಗಂಗಾಕಲ್ಯಾಣ ಯೋಜನೆ:
ರೈತರಿಗೆ ನೀರಿನ ಅನುಕೂಲ ದೃಷ್ಟಿಯಿಂದ ವೈಯುಕ್ತಿಕ ನೀರಾವರಿಗಾಗಿ ಕನಿಷ್ಟ 1 ಎಕರೆ ಜಮೀನಿರುವ ರೈತರಿಗೆ ತೆರೆದ ಬಾವಿ/ಕೊಳವೆ ಬಾವಿ ಕೊರೆಸಿ ಪಂಪ್ಸೆಟ್ ಅಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲು. 3.00 ಲಕ್ಷ ರೂ. ಸಹಾಯಧನ ಮತ್ತು ರೂ.0.50 ಲಕ್ಷ ಅವಧಿ ಸಾಲವಾಗಿರುತ್ತದೆ.
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ:
ಈ ಯೋಜನೆಯಡಿ ನಿರುದ್ಯೋಗ ಯುವಕ/ ಯುವತಿಯರಿಗೆ ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ನಿಗಮದ ವತಿಯಿಂದ ಸಹಾಯಧನ ಮತ್ತು ಬ್ಯಾಂಕಿನಿಂದ ಸಾಲ ಅನುಷ್ಟಾನ ಮಾಡಲಾಗುತ್ತಿದೆ.
1) ವಾಹನ ಅಲ್ಲದ ಇತರೇ:
ಕೈಗಾರಿಕಾ ಘಟಕ ಸ್ಥಾಪಿಸಲು ಘಟಕದ ವೆಚ್ಚ ಶೇಕಡಾ.50 ರಷ್ಟು ಅಥವಾ ಗರಿಷ್ಟ 2.00ಲಕ್ಷ ರೂ. ವರೆಗೆ ಸಹಾಯಧನ ಹಾಗೂ ಉಳಿದ ಮೊತ್ತವನ್ನು ಬ್ಯಾಂಕ್ ನಿಂದ ಸಾಲ ನೀಡಲಾಗುತ್ತದೆ.
2) ಸರಕು ಸಾಗಾಣೆ ವಾಹನ:
ಸರಕು ಸಾಗಾಣೆ ವಾಹನ ಖರೀದಿಸಲು ವಸ್ತುವಿನ ವೆಚ್ಚದ ಶೇಕಡಾ 50 ರಷ್ಟು ಅಥವಾ ಗರಿಷ್ಟ ರೂ. 3.50 ಲಕ್ಷಗಳ ಸಹಾಯಧನ ನಿಗಮದಿಂದ ಹಾಗೂ ಇನ್ನುಳಿದ ಮೊತ್ತವನ್ನು ಬ್ಯಾಂಕ್ ಗಳಿಂದ ಸಾಲದ ರೂಪದಲ್ಲಿ ದೊರೆಯುತ್ತದೆ.
ಭೂ ಒಡೆತನ ಯೋಜನೆ :
ಈ ಯೋಜನೆಯಡಿ (Valmiki Nigama Loan Application) ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 15 ಲಕ್ಷ ರೂ. ವರಗೆ ಘಟಕ ವೆಚ್ಚದ ಮಿತಿಯೊಳಗೆ 1 ಎಕರೆ ಜಮೀನನ್ನು ಖರೀದಿಸಿ ನೋಂದಣಿ ಮಾಡಿಸಿಕೊಡಲಾಗುತ್ತದೆ. ಒಟ್ಟು ಮೊತ್ತದಲ್ಲಿ ಶೇಕಡಾ.50 ರಷ್ಟು ಸಹಾಯಧನ ಮತ್ತು ಶೇಕಡಾ.50 ರಷ್ಟು ಸಾಲವಾಗಿರುತ್ತದೆ, ಈ ಸಾಲ ಮೊತ್ತಕ್ಕೆ ಶೇಕಡಾ.6ರ ಬಡ್ಡಿ ನಿಗಮದಿಂದಲೇ ನೀಡಲಾಗುವುದು.
ಈ ಸೌಲಭ್ಯ ಪಡೆಯಲು ಬೇಕಾದ ದಾಖಲಾತಿಗಳು:
- ಅರ್ಜಿಯೊಂದಿಗೆ ಪೋಟೋ.
- ಆಧಾರ ಕಾರ್ಡ್.
- ಪರಿಶಿಷ್ಟ ಜಾತಿ/ಪಂಗಡದ ಪ್ರಮಾಣ (SC/ST) ಪತ್ರ.
- ಕುಟುಂಬದ ವಾರ್ಷಿಕ ಆದಾಯ ಪತ್ರ.
- ಕುಟುಂಬದ ಪಡಿತರ ಚೀಟಿ.
- ಮತದಾರರ ಗುರುತಿನ ಚೀಟಿ.
- ವಾಹನವಾಗಿದ್ದಲ್ಲಿ, ವಾಹನ ಚಾಲನಾ ಪರವಾನಗಿ.
- ಪಹಣಿ/ ಆರ್ಟಿಸಿ (ಗಂಗಾಕಲ್ಯಾಣ ಯೋಜನೆ).
- ಭೂರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ (ಭೂ ಒಡೆತನ ಯೋಜನೆ).
ನಿಗಮದ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹತೆಗಳು:
- ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಕಳೆದ 15 ವರ್ಷಗಳಿಂದ ಕರ್ನಾಟಕದ ನಿವಾಸಿಯಾಗಿರಬೇಕು.
- ಅರ್ಜಿದಾರರು 18 ವರ್ಷದಿಂದ 60 ವರ್ಷಕ್ಕಿಂತ ಕಡಿಮೆ ವಯೋಮಿತಿ ಹೊಂದಿರಬೇಕು.
- ಫಲಾನುಭವಿಗಳ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ/ಇತರೆ ಸಂಸ್ಥೆಯಲ್ಲಿ ಉದ್ಯೋಗ ಹೊಂದಿರಬಾರದು.
- ಈ ಯೋಜನೆಯಡಿ ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿರಬಾರದು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 1,500,000 ರೂ. ಹಾಗೂ ನಗರ ಪ್ರದೇಶದವರಿಗೆ 2,00,000 ರೂ. ಮೀರಿರಬಾರದು.
- ವಿಕಲಚೇತನರು ಸೌಲಭ್ಯ ಪಡೆಯಲು ಸಂಬಂಧಪಟ್ಟವರಿಂದ ವಿಕಲಚೇತನರ ದೃಡೀಕರಣ ಪತ್ರವನ್ನು ಹೊಂದಿರಬೇಕು.
- ಭೂ ಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಮಹಿಳಾ, ಕೃಷಿ ಕಾರ್ಮಿಕರಾಗಿರಬೇಕು ಹಾಗೂ ಪತಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೃಷಿ ಭೂಮಿ ಇರಬಾರದು.
- ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು.
- ವಾಹನಗಳಿಗೆ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಆಸಕ್ತರು ಅರ್ಜಿ ಸಲ್ಲಿಸಲು ಸೇವಾಸಿಂಧು ಪೋರ್ಟಲ್ https://sevasindu.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ನವೆಂಬರ್ 23 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ:
ನಿಗಮದ ಆಯಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಅಥವಾ ದೂರವಾಣಿ.ಸಂಖ್ಯೆ:08192-233309, 9448217369 ಸಂಪರ್ಕಿಸಬಹುದೆಂದು ನಿಗಮದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಇಲಾಖೆಯಿಂದ ಶೇ 90% ಸಹಾಯಧನದಲ್ಲಿ ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣ ಪಡೆಯಲು ಅರ್ಜಿ ಆಹ್ವಾನ
ಹೊಸ ರೇಷನ ಕಾರ್ಡ್ ಗೆ ಅರ್ಜಿ ಆಹ್ವಾನ