Nekara Children Scholarship: ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದ ಮೂಲಕ ತಿಳಿಸುವುದೇಂದರೆ ಕರ್ನಾಟಕ ರಾಜ್ಯದ ವತಿಯಿಂದ 2024-25ನೇ ಸಾಲಿನ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು “ವಿದ್ಯಾರ್ಥಿವೇತನ” ಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ಅಧಿಕೃತವಾಗಿ ನೊಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು/ ವಿಶ್ವ ವಿದ್ಯಾಲಯಗಳಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸುಗಳನ್ನು ಓದುತ್ತಿರುವ ನೇಕಾರರ ಮಕ್ಕಳಿಗೆ ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಅರ್ಹ ವಿದ್ಯಾರ್ಥಿಗಳ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು:
ರಾಜ್ಯದ ಯಾವುದೇ ಭಾಗದಲ್ಲಿರುವ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು / ವಿಶ್ವವಿದ್ಯಾಲಗಳಲ್ಲಿ ಪದವಿಯ ಮುಂಚೆ ಪಿ.ಯು.ಸಿ / ಐ.ಟಿ.ಐ/ಡಿಪ್ಲೋಮಾ, ಎಲ್ಲಾ ಬಿ.ಎ/ಬಿ.ಎಸ್.ಸಿ/ಬಿ.ಕಾಂ ಇತ್ಯಾದಿ, ಎಲ್.ಎಲ್.ಬಿ/ಪ್ಯಾರಾಮೆಡಿಕಲ್/ ಬಿ.ಫಾರ್ಮ್/ ನರ್ಸಿಂಗ್, ಇತ್ಯಾದಿ ವೃತ್ತಿಪರ ಕೋರ್ಸ್ಗಳು, ಎಂ.ಬಿ.ಬಿ.ಎಸ್/ಬಿ.ಇ/ಬಿ.ಟೆಕ್ ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು “ವಿದ್ಯಾರ್ಥಿವೇತನ” ಅರ್ಜಿ ಸಲ್ಲಿಸಬಹುದು.
Nekara Children Scholarship ವಿದ್ಯಾರ್ಥಿವೇತನ ಮೊತ್ತ:
ಹುಡುಗರಿಗೆ | ಹುಡುಗಿಯರಿಗೆ | |
ಪಿಯುಸಿ/ಐಟಿಐ/ಡಿಪ್ಲೊಮೋ | 2,500 ರೂ. | 3,000 ರೂ. |
ಎಲ್ಲಾ ಬಿ.ಎ/ಬಿ.ಎಸ್.ಸಿ/ಬಿ.ಕಾಂ | ರೂ. 5,000/- | ರೂ. 5,500/- |
ಎಲ್.ಎಲ್.ಬಿ/ ಪ್ಯಾರ ಮೆಡಿಕಲ್/ ಬಿ ಫಾರ್ಮ್/ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ | ರೂ. 7,500/- | ರೂ. 8000/- |
ಎಂಬಿಬಿಎಸ್/ ಬಿ.ಇ/ ಬಿ.ಟೆಕ್ ಮತ್ತುಎಲ್ಲಾ ಸ್ನಾತಕೋತ್ತರ ಕೋರ್ಸ್ಗಳು | ರೂ. 10,000/- | ರೂ. 11,000/- |
ಹೆಚ್ಚಿನ ಮಾಹಿತಿಗಾಗಿ:
ಅಭ್ಯರ್ಥಿಗಳ ಅರ್ಜಿ ಸಲ್ಲಿಸಲು ಹೆಚ್ಚಿನ ವಿವರಗಳಿಗಾಗಿ ಆಯಾ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಇಲಾಖೆ ವೆಬ್ಸೈಟ್ ವಿಳಾಸ: www.karnatakad ht.org
ಶೇ 90% ಸಹಾಯಧನದಲ್ಲಿ ಮಿನಿ ಟ್ರ್ಯಾಕ್ಟರ್ ಪಡೆಯಲು ಅರ್ಜಿ ಆಹ್ವಾನ