ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ (DCC) ದಲ್ಲಿ ಖಾಲಿ ಇರುವ (ಕಿರಿಯ ಸಹಾಯಕ) ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ)
ಹುದ್ದೆಗಳ ಹೆಸರು: ಜೂನಿಯರ್ ಅಸಿಸ್ಟೆಂಟ್ (Junior Assistant)
ಹುದ್ದೆಗಳ ಸಂಖ್ಯೆ: 32
ಉದ್ಯೋಗದ ಸ್ಥಳ: ಕೊಡಗು (ಕರ್ನಾಟಕ)
Kodagu DCCB Recruitment 2025 ಶೈಕ್ಷಣಿಕ ವಿದ್ಯಾರ್ಹತೆ:
ಕೊಡಗು ಡಿಸಿಸಿ ಬ್ಯಾಂಕ್ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಶೇಕಡಾ 55% ಅಂಕಗಳೊಂದಿಗೆ ವಾಣಿಜ್ಯೇತರ ಪದವಿ ಅಥವಾ ಶೇಕಡಾ 50% ರಷ್ಟು ಅಂಕಗಳೊಂದಿಗೆ ವಾಣಿಜ್ಯ ಪದವಿ, ಡಿಪ್ಲೊಮಾ ಇನ್ ಕೋ ಆಪರೇಟರ್ ಮತ್ತು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
ವಯೋಮಿತಿ:
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕದ (17-ಜನವರಿ-2025) ಹೊತ್ತಿಗೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಳಿಸರಬೇಕು.
ವಯೋಮಿತಿ ಸಡಿಲಿಕೆ:
ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: 38 ವರ್ಷ
SC/ST ಅಭ್ಯರ್ಥಿಗಳಿಗೆ: 40 ವರ್ಷ
ಅಂಗವಿಕಲ (PWD) ವಿಧವೆ ಅಭ್ಯರ್ಥಿಗಳಿಗೆ: 10 ವರ್ಷ
ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 30,350 ರಿಂದ 58,250 ರೂ. ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/OBC ಅಭ್ಯರ್ಥಿಗಳು: ರೂ. 1750.
SC/ST/ಪ್ರವರ್ಗ-I/PWD/ಮಹಿಳಾ ಅಭ್ಯರ್ಥಿಗಳು: ರೂ.1250.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Kodagu DCCB Recruitment 2025 ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 20 ಡಿಸೆಂಬರ್ 2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಜನವರಿ 2025
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 17 ಜನವರಿ 2025
ಪ್ರಮುಖ ಲಿಂಕ್‌ಗಳು
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: kodagudccbank.com
ಗಮನಿಸಿ: ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ: 7204179845 ಅನ್ನು ಸಂಪರ್ಕಿಸಬಹುದು.
ಇದನ್ನೂ ಓದಿ: ಯುವನಿಧಿ ಅರ್ಜಿದಾರರು ಈ ಕೆಲಸ ಮಾಡುವುದು ಕಡ್ಡಾಯ
ಇದನ್ನೂ ಓದಿ: ಅಂಚೆ ಬ್ಯಾಂಕ್ ನೇಮಕಾತಿ 1 ಲಕ್ಷಕ್ಕೂ ಹೆಚ್ಚು ವೇತನ