Annabhagya amount: ನಮಸ್ಕಾರ ಸ್ನೇಹಿತರೇ ಇವತ್ತು ನಾವು ಈ ಲೇಖನದ ಮೂಲಕ ನಿಮ್ಮಲ್ಲರಿಗೂ ನೀಡುವ ವರದಿ ಎಂದರೆ, “ಅನ್ನಭಾಗ್ಯ” (Anna Bhagya DBT Status Check Online) ಹಣ ಸಂದಾಯ ಬಗ್ಗೆ ಮಾಹಿತಿಯನ್ನು ಈ ಕೆಳಗಿನಂತೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೆವೆ ಓದಿ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಅನ್ನಭಾಗ್ಯ” (Annabhagya Scheme) ಸಿದ್ದರಾಮಯ್ಯ ಅವರ ಕನಸಿನ ಕೂಸು ಈ ಯೋಜನೆಯಡಿ ಬಡವರಿಗೆ, ಬಿಪಿಎಲ್ ಹಾಗೂ ಅಂತ್ಯೋದಯ ರೇಷನ ಕಾರ್ಡ್ (Ration card) ಹೊಂದಿರುವ ಕರ್ನಾಟಕ ಎಲ್ಲಾ ಕುಟುಂಬದ ಸದಸ್ಯರಿಗೆ “ಅನ್ನಭಾಗ್ಯ” ಯೋಜನೆಯಡಿ ತಲಾ 10 ಕೆಜಿ ಉಚಿತ ಆಹಾರ ಧಾನ್ಯ ನೀಡಲಾಗುತ್ತದೆ.
ರಾಜ್ಯ ಸರ್ಕಾರಕ್ಕೆ ಈ ಬಾರಿ ಅಕ್ಕಿ ಕೊರತೆಯಿಂದಾಗಿ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿ ಮತ್ತು ಇನ್ನುಳಿದ 5 ಕೆಜಿ ಅಕ್ಕಿ ಬದಲಾಗಿ ಫಲಾನುಭವಿಗಳ ಖಾತೆಗೆ ತಲಾ 170 ರೂ. ಹಣವನ್ನು DBT ಮೂಲಕ ನಗದು ವರ್ಗಾವಣೆ ಮಾಡಲಾಗುತ್ತಿದೆ. ಈ ಯೋಜನೆಯಡಿ ಅಂದಾಜು 4.42 ಕೋಟಿಗೂ ಅಧಿಕ ಫಲಾನುಭವಿಗಳು ಅನುಕೂಲವಾಗಿದೆ.
Anna Bhagya DBT Status Check Online 2025
ಅನ್ನಭಾಗ್ಯ ಯೋಜನೆಯ DBT ಅನ್ನು ಈ ಕೆಳಗಿನ ಹಂತವನ್ನು ಅನುಸರಿಸುವ ಮೂಲಕ ನಿಮ್ಮ ಅನ್ನಭಾಗ್ಯ ನೇರ ನಗದು ವರ್ಗಾವಣೆ ಸ್ಟೇಟ್ಸ್ ನೋಡಬಹುದು.
- ಮೊದಲು ಈ ahara.kar.nic.in ಲಿಂಕ್ ಮೇಲೆ ಕ್ಲಿಕ್ ಮಾಡಿ (https://ahara.kar.nic.in/Home/EServices)
- ನಂತರ ಮುಖಪುಟದ ಎಡಭಾಗದಲ್ಲಿರುವ 3 ಲೈನ್ (ಮೇನು) ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕೆಳಗಡೆ ಇರುವ ಇ-ಸ್ಥಿತಿ (e-status) ಮೇಲೆ ಕ್ಲಿಕ್ ಮಾಡಿ. ಆನಂತರ ಮತ್ತೆ ಕೆಳಗಡೆ ಇರುವ ಡಿಬಿಟಿ ಸ್ಟೇಟ್ಸ್ (DBT status) ಮೇಲೆ ಕ್ಲಿಕ್ ಮಾಡಿ.
2. ನಂತರ ಕೆಳಗೆ ನೀಡಿರುವ ನಿಮ್ಮ ಜಿಲ್ಲೆಗಳ ಪಟ್ಟಿಯಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.
3. ಇದಾದನಂತರ ಮತ್ತೊಂದು ಪುಟ ತೆರೆಯುತ್ತದೆ. ಅಲ್ಲಿ ನೇರ ನಗದು ವರ್ಗಾವಣೆ ಸ್ಥಿತಿ (Status of DBT) ಮೇಲೆ ಕ್ಲಿಕ್ ಮಾಡಿ.
4. ಇವಾಗ ವರ್ಷ, ತಿಂಗಳು, ರೇಷನ್ ಕಾರ್ಡ್ ನಂಬರ್ (Ration card number) ಹಾಕಿ Go ಮೇಲೆ ಕ್ಲಿಕ್ ಮಾಡಿ.
5. ಕೊನೆಯದಾಗಿ ಈ ಕೆಳಗನಂತೆ ನಿಮ್ಮ ಹೆಸರು, member ID, ಕುಟುಂಬ ಸದಸ್ಯರ ಸಂಖ್ಯೆ, ನಿಮಗೆ ಸಿಗುವ ಧಾನ್ಯಗಳ ಅಳತೆ ಮತ್ತು ನಿಮ್ಮ ಖಾತೆಗೆ ಜಮಾ ಆಗಿರುವ ಹಣ (Annabhagya amount) ನಗದು ಮೊತ್ತವನ್ನು ತೋರಿಸುತ್ತದೆ.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ `ಗ್ಯಾಸ್ ಸಿಲಿಂಡರ್’ ಪಡೆಯಲು ಅರ್ಜಿ ಆಹ್ವಾನ PMUY