ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ (Zilla Panchayat Recruitment 2024) ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕರು ಮತ್ತು ಆಡಳಿತ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧಿಸೂಚನೆ ಗೆ ಸಂಬಂಧಿಸಿದ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳ ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ, ದಿನಾಂಕ, ಲಿಂಕ್‌ಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನೂ ಕೆಳಗಿನಂತೆ ನೀಡಲಾಗಿದೆ.
Bengaluru Urban Zilla Panchayat Recruitment 2024 ಸಂಕ್ಷಿಪ್ತ ವಿವರ:
ಹುದ್ದೆಗಳ ಹೆಸರು : ಕೋ-ಆರ್ಡಿನೇಟರ್, ತಾಂತ್ರಿಕ ಸಹಾಯಕರು
ಉದ್ಯೋಗದ ಸ್ಥಳ: ಬೆಂಗಳೂರು ನಗರ ಜಿಲ್ಲಾ (ಕರ್ನಾಟಕ)
ಒಟ್ಟು ಹುದ್ದೆಗಳ ಸಂಖ್ಯೆ: 05
ಹುದ್ದೆಗಳ ವಿವರಗಳು:
- ತಾಂತ್ರಿಕ ಸಹಾಯಕರು: 02
- ತಾಂತ್ರಿಕ ಸಹಾಯಕರು (ಅರಣ್ಯ): 01
- ತಾಂತ್ರಿಕ ಸಹಾಯಕರು (ರೇಷ್ಮೇ): 01
- ಜಿಲ್ಲಾ MIS ಕೋ- ಆರ್ಡಿನೇಟರ್: 01
ಶೈಕ್ಷಣಿಕ ಅರ್ಹತೆ :
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಡಿಪ್ಲೊಮಾ, ಬಿಇ, ಬಿ.ಟೆಕ್, ಎಂಸಿಎ, ಬಿ.ಎಸ್ಸಿ, ಬಿ.ಎಸ್ಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 21 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ಹುದ್ದೆವಾರು ವೇತನ ಶ್ರೇಣಿ:
- ತಾಂತ್ರಿಕ ಸಹಾಯಕರು : 26,000 ರಿಂದ 28,000 ರೂ.
- ತಾಂತ್ರಿಕ ಸಹಾಯಕರು (ಅರಣ್ಯ) : 28,000 ರೂ.
- ತಾಂತ್ರಿಕ ಸಹಾಯಕರು (ರೇಷ್ಮೇ) : 28,000 ರೂ.
- ಜಿಲ್ಲಾ MIS ಸಂಯೋಜಕರು: 34,000 ರೂ.
ಅರ್ಜಿ ಶುಲ್ಕ :
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ನೇಮಕಾತಿ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವತ್ತಿಲ್ಲ.
ಅರ್ಜಿ ಸಲ್ಲಿಸುವ ವಿಳಾಸ :
ಬೆಂಗಳೂರು ನಗರ ಜಿಲ್ಲಾ ಪಂಚಾಯತ್, ಬನಶಂಕರಿ ದೇವಸ್ಥಾನದ ಹತ್ತಿರ, ಎಸ್. ಕರಿಯಪ್ಪ ರಸ್ತೆ, ಬನಶಂಕರಿ, ಬೆಂಗಳೂರು: 560070 ಕರ್ನಾಟಕ. ಈ ವಿಳಾಸಕ್ಕೆ ಜುಲೈ 02, 2024 ರೊಳಗೆ ಅಭ್ಯರ್ಥಿಗಳ ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್, ರಿಜಿಸ್ಟರ್ ಪೋಸ್ಟ್ ಅಥವಾ ಇತರ ಯಾವುದೇ ಸೇವೆಗಳ ಮೂಲಕ ಕಳುಹಿಸಬೇಕು.
ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : ಜೂನ್ 12, 2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : ಜುಲೈ 02, 2024
Zilla Panchayat Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್‌ಸೈಟ್ ವಿಳಾಸ | zpbengaluruurban.karnataka.gov.in |
ಇತರೆ ಉದ್ಯೋಗ ಮಾಹಿತಿ:
- ಭಾರತೀಯ ಸೇನೆ ನೇರ ನೇಮಕಾತಿ PUC ಪಾಸಾದವರು ಅರ್ಜಿ ಸಲ್ಲಿಸಿ
- ಭಾರತೀಯ ಅಂಚೆ ಇಲಾಖೆ ನೇಮಕಾತಿ SSLC ಪಾಸಾದವರು ಅರ್ಜಿ ಸಲ್ಲಿಸಿ
- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇಮಕಾತಿ 2024