ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಹಿ ಸುದ್ದಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP Recruitment 2024) ವ್ಯಾಪ್ತಿಯಲ್ಲಿ ಬರುವ ನಮ್ಮ ಕ್ಲಿನಿಕ್”ಗಳಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳು, ಶುಶ್ರೂಷಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
BBMP ನೇಮಕಾತಿ ಅಧಿಸೂಚನೆ ಗೆ ಸಂಬಂಧಿಸಿದ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳ ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ, ದಿನಾಂಕ, ಲಿಂಕ್‌ಗಳು ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.
BBMP Recruitment 2024 ಮಾಹಿತಿ:
ಹುದ್ದೆಗಳ ಹೆಸರು: ವೈದ್ಯಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಶುಶ್ರೂಷಕಿ, ಶುಶ್ರೂಷಕರು.
ಒಟ್ಟು ಹುದ್ದೆಗಳು ಸಂಖ್ಯೆ: 150
ಉದ್ಯೋಗದ ಸ್ಥಳ: ಬೆಂಗಳೂರು – ಕರ್ನಾಟಕ
ಹುದ್ದೆಗಳ ವಿವರಗಳು:
ವೈದ್ಯಾಧಿಕಾರಿಗಳು: 65
ಪ್ರಯೋಗಶಾಲಾ ತಂತ್ರಜ್ಞರು: 45
ಶುಶ್ರೂಷಕಿ, ಶುಶ್ರೂಷಕರು: 40
ಶೈಕ್ಷಣಿಕ ಅರ್ಹತೆ:
- ವೈದ್ಯಾಧಿಕಾರಿಗಳು: ಎಂಬಿಬಿಎಸ್ ಪದವಿಯೊಂದಿಗೆ ಕೆ.ಎಂ.ಸಿ. ನೋಂದಾವಣಿ ಪಡೆದಿರಬೇಕು.
- ಶುಕ್ರೂಷಕಿ | ಶುಶೂಷಕರು: ಡಿಪ್ಲೋಮಾ ಇನ್ ನರ್ಸಿಂಗ್, ಬಿ.ಎಸ್ಸಿ ಕೆ.ಎನ್.ಸಿ ಕೌನ್ಸಿಲ್ ನೋಂದಾವಣಿ ಹೊಂದಿರಬೇಕು.
- ಪ್ರಯೋಗಶಾಲಾ ತಂತ್ರಜ್ಞರು: ಡಿಪ್ಲೋಮಾ ಇನ್ ಪ್ರಯೋಗಶಾಲಾ ತಂತ್ರಜ್ಞಾನ (ಡಿ.ಎಂ.ಎಲ್.ಟಿ)/ ಬಿಎಸ್ಸಿ ಲ್ಯಾಬ್ ಟೆಕ್ನಿಷಿಯನ್‌ನೊಂದಿಗೆ ಕರ್ನಾಟಕ ಸರ್ಕಾರ ಪ್ಯಾರಾಮೆಡಿಕಲ್ ಮಂಡಳಿಯ ನೋಂದಣಿ ಹೊಂದಿರಬೇಕು.
ವಯೋಮಿತಿ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ BBMP ನೇಮಕಾತಿ ನಿಯಮಾನುಸಾರ ಹೊಂದಿರಬೇಕು.
ಹುದ್ದೆಗಳ ವಿವರಗಳು:
ವೈದ್ಯಾಧಿಕಾರಿಗಳು: 47,250 ರೂ.
ಪ್ರಯೋಗಶಾಲಾ ತಂತ್ರಜ್ಞರು: 18,714 ರೂ.
ಶುಶ್ರೂಷಕಿ, ಶುಶ್ರೂಷಕರು: 18,465 ರೂ.
ಅರ್ಜಿ ಶುಲ್ಕ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿಸುವತ್ತಿಲ್ಲ.
ಆಯ್ಕೆ ಪ್ರಕ್ರಿಯೆ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆ ಪ್ರಕಾರ, ಈ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವ ಸ್ಥಳ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಮತ್ತು ಅಗತ್ಯ ದಾಖಲೆಗಳೊಂದಿಗೆ ಕೆಳಗೆ ನೀಡಿರುವ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಕೊನೆಯ ದಿನಾಂಕದೊಳಗೆ ಹಾಜರಾಗಬೇಕು.
ಸಂದರ್ಶನ ನಡೆಯುವ ಸ್ಥಳ:
ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಕಛೇರಿ #304, ಅನೆಕ್ಸ್ 03 ಕಟ್ಟಡ, 03ನೇ ಮಹಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿ, ಎನ್.ಆರ್. ಚೌಕ, ಬೆಂಗಳೂರು-560 002 ಕರ್ನಾಟಕ ಈ ವಿಳಾಸಕ್ಕೆ ಅಭ್ಯರ್ಥಿಗಳು ಖುದ್ದಾಗಿ ಅರ್ಜಿ ಸಲ್ಲಿಸಲು ಹಾಗೂ ಸಂದರ್ಶನಕ್ಕೆ ಹಾಜರಾಗಬೇಕು.
ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಲಾದ ದಿನಾಂಕ: 13-06-2024
ಸಂದರ್ಶನದ ದಿನಾಂಕ: ಮೊದಲು ಬಂದವರಿಗೆ ಆದ್ಯತೆ
BBMP Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್‌ಸೈಟ್ ವಿಳಾಸ | bbmp.gov.in |
ಇತರೆ ಉದ್ಯೋಗ ಮಾಹಿತಿ:
- ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರತಿ ತಿಂಗಳು 5 ಲಕ್ಷ ರೂ. ವೇತನ
- 35,000 ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಅನುಮತಿ
- ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ನೇಮಕಾತಿ