ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI Recruitment 2025) ನಲ್ಲಿ ಖಾಲಿ ಇರುವ ಹಿರಿಯ ಸಹಾಯಕ, ಕಿರಿಯ ಸಹಾಯಕ ಹುದ್ದೆಗಳ ಭತಿ೯ಗೆ ಅಜಿ೯ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 24, 2025 ರೊಳಗೆ ಆನ್‌ಲೈನ್ ಮೂಲಕ aai.aero ವೆಬ್‌ಸೈಟ್ ಭೇಟಿ ನೀಡಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)
ಹುದ್ದೆ ಹೆಸರು: ಹಿರಿಯ ಸಹಾಯಕ, ಕಿರಿಯ ಸಹಾಯಕ
ಒಟ್ಟು ಹುದ್ದೆಗಳ ಸಂಖ್ಯೆ: 206
ಉದ್ಯೋಗದ ಸ್ಥಳ: ಭಾರತದಾದ್ಯಂತ
ವೇತನ: ರೂ. 31000-110000/-
AAI Recruitment 2025 ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಹಿರಿಯ ಸಹಾಯಕ (ಅಧಿಕೃತ ಭಾಷೆ) | 02 |
ಹಿರಿಯ ಸಹಾಯಕ (ಕಾರ್ಯಾಚರಣೆಗಳು) | 04 |
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) | 21 |
ಹಿರಿಯ ಸಹಾಯಕ (ಖಾತೆಗಳು) | 11 |
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆಗಳು) | 168 |
ವಿದ್ಯಾಹ೯ತೆ:
ಹಿರಿಯ ಸಹಾಯಕ ಮತ್ತು ಕಿರಿಯ ಸಹಾಯಕ ಹುದ್ದೆಗೆ ಅಜಿ೯ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ, ಡಿಪ್ಲೊಮಾ, ಬಿ.ಕಾಂ ಪದವಿಯನ್ನು ಹುದ್ದೆಗಳಿಗೆ ಅನುಗುಣವಾಗಿ ಅನುಭವ ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗೆ ಅಜಿ೯ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 30 ವರ್ಷದೊಳಗೆ ಇರಬೇಕು.
ಈ ಸುದ್ದಿಯನ್ನೂ ಓದಿ: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನೇಮಕಾತಿ
ವೇತನ ಶ್ರೇಣಿ:
ಹುದ್ದೆ | ವೇತನ (ಪ್ರತಿ ತಿಂಗಳು: |
ಹಿರಿಯ ಸಹಾಯಕ (ಅಧಿಕೃತ ಭಾಷೆ) | 36,000 – 1,10,000 ರೂ. |
ಹಿರಿಯ ಸಹಾಯಕ (ಕಾರ್ಯಾಚರಣೆಗಳು) | 36,000 – 1,10,000 ರೂ. |
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್) | 36,000 – 1,10,000 ರೂ. |
ಹಿರಿಯ ಸಹಾಯಕ (ಖಾತೆಗಳು) | 36,000 – 1,10,000 ರೂ. |
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆಗಳು) | 31,000 – 92,000 ರೂ. |
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯಾಥಿ೯ಗಳನ್ನು ಲಿಖಿತ ಪರೀಕ್ಷೆ, ಕಂಪ್ಯೂಟರ್ ಪರೀಕ್ಷೆ, ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನಕ್ಕೆ ಕರೆಯುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
AAI Recruitment 2025 ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್, ಒಬಿಸಿ: 1000 ರೂ.
ಎಸ್‌ಸಿ / ಎಸ್‌ಟಿ, ಪಿಹೆಚ್: ಶುಲ್ಕ ಇರುವುದಿಲ್ಲ.
ಶುಲ್ಕ ಪಾವತಿ ವಿಧಾನ: ಆನ್‌ಲೈನ್ ಮೂಲಕ
AAI Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 25 ಫೆಬ್ರವರಿ 2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ: 24 ಮಾರ್ಚ್ 2025
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 24 ಮಾರ್ಚ್ 2025
ಈ ಸುದ್ದಿಯನ್ನೂ ಓದಿ: ಕಿರಿಯ ಸಹಾಯಕ ವ್ಯವಸ್ಥಾಪಕ 650 ಹುದ್ದೆಗಳ ನೇಮಕಾತಿ
ಪ್ರಮುಖ ದಿನಾಂಕಗಳು:
ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಆನ್ ಲೈನ್ ಅಜಿ೯ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ವೆಬ್ ಸೈಟ್ ವಿಳಾಸ್ | aai.aero |