ಆಂಕರ್‌ ಅನುಶ್ರೀ ಗೆ ಮದುವೆ ಭಾಗ್ಯ ಒಪ್ಪಿಕೊಂಡಿದ್ದು ಯಾರನ್ನ? | Anchor Anushree Marriage

WhatsApp Group Join Now
Telegram Group Join Now

ಕನ್ನಡದ ಪ್ರಸಿದ್ಧ ನಿರೂಪಕಿ ಅನುಶ್ರೀ (Anchor Anushree Marriage Statement) ಅವರು ತಮ್ಮ ಮಾತಿನ ಶೈಲಿಯಿಂದಲೇ ಜನರ ಮನಸೂರೆಗೊಳಿಸುವ ಕೌಶಲ್ಯತೆ ಹೊಂದಿದ್ದಾರೆ. ಆದರೆ ಇನ್ನೂ ಮದುವೆಯಾಗದ ಅನುಶ್ರೀಗೆ ಎಲ್ಲಿ ಹೋದರೂ ಎಲ್ಲರೂ ಕೇಳುವ ಮೊದಲ ಪ್ರಶ್ನೆ ನಿಮ್ಮ ಮದುವೆ ಯಾವಾಗ?

ಅದೆಷ್ಟೋ ಜನರು ಅನುಶ್ರೀ ಮದುವೆಯನ್ನು ನೋಡಲು ಕಾತರದಿಂದ ಕಾಯುತ್ತಿದ್ದರು ಎನ್ನಬಹುದು. ಅಂಥವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ನನಗೆ ಮದುವೆಯೇ ಬೇಡ ಎಂದು ಎಂದವಳು ಅನುಶ್ರೀ ಮದುವೆಗೆ ಒಪ್ಪಿಕೊಂಡಿದ್ದಾರೆ.

ಆದರೆ ಎಲ್ಲರಲ್ಲೂ ಒಂದು ವಿನಂತಿ ಇದು ಎರಡನೇ ಅಥವಾ ಮೂರನೇ ಮದುವೆ ಅಲ್ಲ. ನನಗೆ ಇನ್ನೂ ಮದುವೆಯೇ ಆಗಿಲ್ಲ’ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈಗಾಗಲೇ ಒಮ್ಮ ನಟ ರಕ್ಷಿತ್ ಶೆಟ್ಟಿ ಜೊತೆ ಮದುವೆ ಸುದ್ದಿ ಯಾಗಿದೆ. ಇನ್ನೊಮ್ಮೆ ನನ್ನ ಕಸಿನ್ ಗಂಡನ ಜೊತೆಯಲ್ಲಿ ಮದುವೆ ಆಗಿಹೋಗಿದೆ ಎಂದು ಸುದ್ದಿ ಮಾಡಿದ್ದಾರೆ. ನನ್ನ ಕಸಿನ್ ಕಾಲ್ ಮಾಡಿ ಹೇಳಿ ನಕ್ಕಿದ್ದಾಳೆ. ನನಗೆ ನಿಜವಾಗಿಯೂ ಇನ್ನೂ ಮದುವೆ ಆಗಿಲ್ಲ.

ಇದೀಗ ಅನುಶ್ರೀ ತುಳುವಿನ ಪಾಡ್‌ ಕಾಸ್ಟ್ ನಲ್ಲಿ ಕೊಟ್ಟ ಸಂದರ್ಶನವೊಂದರಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ‘ಹೌದು ನಾನು ಮದುವೆ ಆಗಲಿದ್ದೇನೆ. ನಾನು ನನ್ನ ಅಪ್ಪ- ಅಮ್ಮನ ದಾಂಪತ್ಯದ ಕಹಿ ಅನುಭವವನ್ನು ಕಣ್ಣಾರೆ ನೋಡಿದ್ದೇನೆ. ಅದೆಲ್ಲವನ್ನು ನೆನಪಿಸಿಕೊಂಡಾಗ ನನಗೆ ಮದುವೆ ಎಂದರೆ ನೋವು ತರುವ ಸಂಗತಿಯಾಗಿತ್ತು. ನಾನು ನನ್ನ ಮದುವೆ ಬಗ್ಗೆ ಯೋಚಿಸಿದಾಗಲೆಲ್ಲಾ ನನಗೆ ಅಪ್ಪ-ಅಮ್ಮನ ಜೀವನವೇ ಕಣ್ಣು ಮುಂದೆ ಬಂದಾಗ ಇವೆಲ್ಲಾ ನನಗೆ ಬೇಡವೇ ಬೇಡ. ನನ್ನ ಅಮ್ಮ-ಅಪ್ಪನ ಸಂಸಾರದ ಸುಖದ ಹಣೆಬರಹವನ್ನು ನೋಡಿದ್ದಾಗಿದೆ, ಸಾಕು. ಆದರೆ ಈಗ ವಯಸ್ಸಾಗುತಿರುವ ಹಿನ್ನೆಲೆ ನಾನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೇನೆ. ಆದ್ರೆ ಹುಡುಗನನ್ನು ನಿವೇ ಹುಡುಕಿ ಕೊಡಿ” ಎಂದಿದ್ದಾರೆ.

ನಾನು ಈಗ ಮದುವೆಯಾಗಲು ನಿರ್ಧರಿಸಿದ್ದೇನೆ. ಆದರೆ ನನಗೆ ಇನ್ನೂ ಸೂಕ್ತ ಹುಡುಗ ಸಿಕ್ಕಿಲ್ಲ. ನನ್ನ ಕನಸಿನ ಹುಡುಗನನ್ನು ಯಾರಾದರೂ ನಿವೇ ಹುಡುಕಿಕೊಡಿ. ಎಷ್ಟು ಬೇಗ ಹುಡುಗನನ್ನು ಹುಡಕಿಕೊಡುತ್ತಿರೋ ಅಷ್ಟೂ ಬೇಗ ನಿಮ್ಮೆಲ್ಲರುಗೂ ನನ್ನ ಮದುವೆ ಊಟ ಸಿಗುತ್ತದೆ. ಇದು ನನ್ನ ಗ್ಯಾರಂಟಿ ಎಂದಿದ್ದಾರೆ.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net