ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ 30, 000 ಸ್ಕಾಲರ್ಶಿಪ್ ಆನ್‌ಲೈನ್ ಅರ್ಜಿ ಸಲ್ಲಿಸಿ | Appinventiv Edu Boost Scholarship 2024

WhatsApp Group Join Now
Telegram Group Join Now

ನಮಸ್ಕಾರ ವಿದ್ಯಾರ್ಥಿ ಮಿತ್ರರೇ, ಈ ಒಂದು ಲೇಖನದ ಮೂಲಕ ತಮ್ಮೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ವಿದ್ಯಾರ್ಥಿಗಳಿಗೆ ಹಲವಾರು ಸಂಸ್ಥೆಗಳು ವಿದ್ಯಾರ್ಥಿವೇತನವನ್ನು ನೀಡಿ ಮುಂದಿನ ಉನ್ನತ ಶಿಕ್ಷಣವನ್ನು ಪ್ರೋತ್ಸಾಹ ನೀಡುತ್ತಲೇ ಇವೆ, ಎಂದು ಹೇಳಿದರೆ ತಪ್ಪಾಗಲಾರದು. ಅಂತಹದೇ ಮತ್ತೊಂದು ಸಂಸ್ಥೆ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡಲು ಅರ್ಜಿ ಆಹ್ವಾನಿಸಿದೆ. ಅಪ್ಪಿನ್ವೆಂಟೀವ್ (Appinventive) ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡಬಹುದು.

ವಿದ್ಯಾರ್ಥಿ ಮಿತ್ರರೇ ಅಪಿನ್ವೆಂಟ್ರಿ ಫೌಂಡೇಶನ್ (appinventive foundation) ವತಿಯಿಂದ “ಅಪ್ಪಿನ್ವೆನ್ಟ್ ಎಜು ಬೂಸ್ಟ್ ಸ್ಕಾಲರ್ಶಿಪ್ ” ಅನುವ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಪಿಯುಸಿ ನಂತರ ಪದವಿಪೂರ್ವ ಹಾಗೂ ತಂತ್ರಜ್ಞಾನ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಈ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಿ ಲಾಭವನ್ನು ಪಡೆದುಕೊಳ್ಳಬಹುದು.

Appinventiv Edu Boost Scholarship 2024

ಏನಿದು ವಿದ್ಯಾರ್ಥಿವೇತನ?
ಸ್ನೇಹಿತರೇ ನೀವೇನಾದರೂ ಪಿಯುಸಿ ಮುಗಿಸಿ ಮೊದಲ ವರ್ಷ ಬಿ.ಟೆಕ್ ಮತ್ತು BCA ಪದವಿಯನ್ನು ಓದುತ್ತಿದ್ದರೇ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ಈ ವಿದ್ಯಾರ್ಥಿವೇತನದ ಮುಖ್ಯ ಗುರಿ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಈ ವಿದ್ಯಾರ್ಥಿ (Appinventiv Edu Boost Scholarship 2024) ವೇತನದ ಮೂಲಕ 30,000 ಧನ ಸಹಾಯವನ್ನು ನೀಡಲಾಗುತ್ತದೆ.

ವಿದ್ಯಾರ್ಥಿವೇತನದ ಮೊತ್ತ: 30,000 ರೂ. ಒಂದು ಬಾರಿಗೆ.

ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳು:
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು 12ನೇ ತರಗತಿಯಲ್ಲಿ 70% ರಷ್ಟು ಅಂಕಗಳನ್ನು ಪಡೆದಿರಬೇಕು.
ಅರ್ಜಿದಾರರು ಮೊದಲ ವರ್ಷ B.Tech ಮತ್ತು BCA ಪದವಿ ಓದುತ್ತಿರಬೇಕು.
ಈ ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ಆದಾಯ ಪ್ರಮಾಣ ಪತ್ರ
ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್
ಕಾಲೇಜು ಪ್ರವೇಶ ಪತ್ರ
ಪಾಸ್ ಪೋರ್ಟ್ ಸೈಜ್ ಪೋಟೋ
ಕಾಲೇಜು ಶುಲ್ಕ ತುಂಬಿದ ರಶೀದಿ

ಪ್ರಮುಖ ದಿನಾಂಕಗಳು ಮತ್ತು ಲಿಂಕ್‌ಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಸೆಪ್ಟೆಂಬರ್ 2024
ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌: ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Leave a Comment