Assistant Loco Pilot Recruitment 2024: ಭಾರತೀಯ ಆಗ್ನೇಯ ರೈಲ್ವೆ (Railway Recruitment Cell of South Eastern Railway- RRC SER) ಖಾಲಿ ಇರುವ ಅಸಿಸ್ಟೆಂಟ್ ಲೋಕೋ ಪೈಲಟ್, ಟ್ರೈನ್ಸ್ ಮ್ಯಾನೇಜರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Railway Recruitment ಅಧಿಸೂಚನೆ ಗೆ ಸಂಬಂಧಿಸಿದ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳ ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ, ದಿನಾಂಕ ಲಿಂಕ್‌ಗಳು ಪ್ರಮುಖ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.
Assistant Loco Pilot Recruitment 2024 Details :
ಒಟ್ಟು ಹುದ್ದೆಗಳ ಸಂಖ್ಯೆ: 1202
ಹುದ್ದೆಗಳ ಹೆಸರು: ಅಸಿಸ್ಟೆಂಟ್ ಲೋಕೋ ಪೈಲಟ್, ಟ್ರೈನ್ಸ್ ಮ್ಯಾನೇಜರ್
ಹುದ್ದೆಗಳ ವಿವರಗಳು:
ಅಸಿಸ್ಟೆಂಟ್ ಲೋಕೋ ಪೈಲಟ್ (Assistant Loco Pilot) : 827
ರೈಲುಗಳ ನಿರ್ವಾಹಕ (Train’s Manager) : 375
ವಿದ್ಯಾರ್ಹತೆ:
ಅಸಿಸ್ಟೆಂಟ್ ಲೋಕೋ ಪೈಲಟ್ ನೇಮಕಾತಿ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ SSLC, ITI ಮತ್ತು ಡಿಪ್ಲೊಮಾ, ಪೂರ್ಣಗೊಳಿಸಿರಬೇಕು.
ವಯೋಮಿತಿ:
ರೈಲ್ವೆ ಅಸಿಸ್ಟೆಂಟ್ ಲೋಕೋ ಪೈಲಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 42 ವರ್ಷ ಮೀರಿರಬಾರದು.
ಇದನ್ನು ಓದಿ: ಭಾರತೀಯ ಗಡಿ ಭದ್ರತಾ ಪಡೆ ನೇಮಕಾತಿ
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC, ST ಅಭ್ಯರ್ಥಿಗಳಿಗೆ: 05 ವರ್ಷ
ವೇತನ ಶ್ರೇಣಿ:
ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ, ಮಾಸಿಕ 20,200 ರೂ. ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
ಸಹಾಯಕ ಲೋಕೋ ಪೈಲಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ, ಆಪ್ಟಿಟ್ಯೂಡ್ ಟೆಸ್ಟ್, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭಿಕ ದಿನಾಂಕ: 13-05-2024
ಆನ್‌ಲೈನ್ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 12-06-2024
ಇದನ್ನು ಓದಿ: ಮೈಸೂರು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೇಮಕಾತಿ
Assistant Loco Pilot Recruitment 2024 important Links:
ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ಆನ್‌ಲೈನ್ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ವೆಬ್‌ಸೈಟ್ ವಿಳಾಸ | rrcser.co.in |