Atal Pension Scheme: ಗಂಡ ಹೆಂಡತಿಗೆ ಪ್ರತಿ ತಿಂಗಳು 5000 ರೂ. ಪಿಂಚಣಿ ಯೋಜನೆ

WhatsApp Group Join Now
Telegram Group Join Now

ವೃದ್ಧಾಪ್ಯದಲ್ಲಿ ಯಾರ ಆರ್ಥಿಕ ಸಹಾಯವೂ ಇಲ್ಲದೇ ನೆಮ್ಮದಿಯಿಂದ ಜೀವನವನ್ನು ನಡೆಸಲು ಪ್ರಮುಖವಾಗಿ ಹಿರಿಯ ನಾಗರಿಕರಿಗೆ ಪಿಂಚಣಿಯ (Pension) ಅವಶ್ಯಕವಾಗಿರುತ್ತದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆ (Atal Pension Scheme) ಯನ್ನು ಪರಿಚಯಿಸಿದೆ. ಈ ಪಿಂಚಣಿ ಯೋಜನೆಯಡಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಪ್ರತಿ ತಿಂಗಳು 5,000 ರೂಪಾಯಿ ಪಿಂಚಣಿ ಪಡೆಯಬಹುದು.

Atal Pension Yojana benefits ಇದೇ ರೀತಿ ದೇಶದಲ್ಲಿ ಅನೇಕ ರೀತಿಯ ಪಿಂಚಣಿ ಯೋಜನೆಗಳಿವೆ (Pension Scheme). ಆದರೆ ಈ ಒಂದು ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ 60 ವರ್ಷ ವಯಸ್ಸಿನ ನಂತರ ತಲಾ 5 ಸಾವಿರ ರೂಪಾಯಿ ಪಿಂಚಣಿಅಟಲ್ ಪಿಂಚಣಿ ಯೋಜನೆಯಡಿ ಪಡೆಯಬಹುದು.

Atal Pension Scheme ಅಟಲ್ ಪಿಂಚಣಿ ಯೋಜನೆ ಎಂದರೇನು?

2015-16ರಲ್ಲಿ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕಡಿಮೆ ಆದಾಯದ ಗುಂಪಿಗೆ ಸೇರಿದ ಜನರಿಗಾಗಿಯೇ ಇದನ್ನು ಜಾರಿ ಮಾಡಲಾಗಿದೆ. ಈ ಯೋಜನೆಯು 1,000 ರೂ. ನಿಂದ 5,000 ರೂ. ವರಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆಯಬಹುದು.

ಅರ್ಹತಾ ಮಾನದಂಡಗಳು:
18 ರಿಂದ 40 ವರ್ಷ ವಯೋಮಿತಿ ಎಲ್ಲಾ ಸಾಮಾನ್ಯ ಜನರು ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಡಿ 18ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ. ದಂಪತಿಗಳಿಗೆ ಇಬ್ಬರೂ ತಲಾ 5,000 ರೂ. ಪಿಂಚಣಿ ಪಡೆಯಬಹುದು. ಇದಕ್ಕಾಗಿ ಪ್ರತಿ ತಿಂಗಳು ಇಬ್ಬರೂ ಹೂಡಿಕೆ ಮಾಡಬೇಕಾದ ತಲಾ ಮೊತ್ತ ಕೇವಲ 210 ರೂ. ಇದು ದಿನಕ್ಕೆ ಕೇವಲ 13 ರೂಪಾಯಿಯಂತೆ ಪಾವತಿಸುವ ಮೂಲಕ ಈ ಯೋಜನೆಗೆ ಲಾಭ ಪಡೆಯಬಹುದು.

ಹೊಸ ರೇಷನ ಕಾರ್ಡ್ ಗೆ ಅರ್ಜಿ ಆಹ್ವಾನ

Atal Pension Scheme ಈ ಪಿಂಚಣಿಯಲ್ಲಿ ಪತಿ ಪತ್ನಿ ಇಬ್ಬರೂ ಪ್ರತಿ ತಿಂಗಳು 210 + 210 ರೂ. ನಂತೆ 420 ರೂಪಾಯಿಗಳನ್ನು ಈ ಯೋಜನೆಯಡಿ ಹೂಡಿಕೆ ಮಾಡಬೇಕಾಗುತ್ತದೆ. ಈ ಹೂಡಿಕೆಯನ್ನು ಪತಿ- ಪತ್ನಿಯರಿಬ್ಬರೂ 60 ವರ್ಷದವರೆಗೆ ಮಾಡಬೇಕು.

ಅಟಲ್ ಪಿಂಚಣಿ ಯೋಜನೆಯ ಚಾರ್ಟ್ Atal Pension Yojana chart:
ನೀವು 18ನೇ ವಯಸ್ಸಿನಿಂದಲೇ ಅಟಲ್ ಪಿಂಚಣಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ, ಪ್ರತಿ ತಿಂಗಳು ಕನಿಷ್ಠ 210 ರೂಪಾಯಿ ಪಾವತಿಸಬೇಕು.
ಅದೇ ರೀತಿ 25 ವರ್ಷಕ್ಕೆ ಆರಂಭಿಸಿದರೆ ತಿಂಗಳಿಗೆ 376 ರೂ. ಹೂಡಿಕೆ ಮಾಡಬೇಕು.
ನೀವು 30 ವರ್ಷ ವಯಸ್ಸಿನವರಾದರೆ, ತಿಂಗಳಿಗೆ 577 ರೂ, ಪಾವತಿಸಬೇಕು.
ಹಾಗೂ ನೀವು 35 ವರ್ಷ ಮೇಲ್ಪಟ್ಟಿದ್ದರೆ, ಪ್ರತಿ ತಿಂಗಳು 902 ರೂ. ಹೂಡಿಕೆ ಮಾಡಬೇಕು. ಈ ಯೋಜನೆಯಡಿಯಲ್ಲಿ ತಮ್ಮ ವಯಸ್ಸಿಗೆ ಅನುಗುಣವಾಗಿ ತಾವು ತಿಂಗಳ ಹೂಡಿಕೆ ಮಾಡಬಹುದು. ನಿಮ್ಮಗೆ 60 ವರ್ಷಗಳಾದ ನಂತರ ತಿಂಗಳಿಗೆ ಗರಿಷ್ಠ 5 ಸಾವಿರ ರೂ. ಪಿಂಚಣಿ ಪಡೆಯಬಹುದು.

ಯಾರು ಅರ್ಜಿ ಸಲ್ಲಿಸಬಹುದು?
ಅಟಲ್ ಪಿಂಚಣಿ ನಿಯಮಗಳ (APY- Atal Pension Yojana) ಪ್ರಕಾರ, 18 ರಿಂದ 40 ವರ್ಷದೊಳಗಿನ ಎಲ್ಲಾ ಭಾರತೀಯರು ಯೋಜನೆಗೆ ಸೇರಬಹುದು.
ಅಟಲ್ ಪಿಂಚಣಿ ಯೋಜನೆಗೆ 18 ವರ್ಷ ಮೇಲ್ಪಟ್ಟ ಯುವಕರು ಮತ್ತು ವಿದ್ಯಾರ್ಥಿಗಳೂ ಸಹ ಹೂಡಿಕೆ ಮಾಡಬಹುದು.
40 ವರ್ಷ ವಯೋಮಿತಿ ಮೇಲ್ಪಟ್ಟವರು ಯೋಜನೆಗೆ ಹೂಡಿಕೆ ಮಾಡಲು ಸಾಧ್ಯವಿಲ್ಲ.
ಯಾವುದೇ ಸಾಮಾಜಿಕ ಭದ್ರತಾ ಯೋಜನೆಯ ಭಾಗವಾಗಿರಬಾರದು.
ಅಟಲ್ ಪಿಂಚಣಿ ಯೋಜನೆಯಡಿ ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ.

ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಕ್ಲರ್ಕ್ ಹುದ್ದೆಗಳ ನೇಮಕಾತಿ 2024

ಅರ್ಜಿ ಸಲ್ಲಿಸುವುದು ಹೇಗೆ?
ನಿಮ್ಮ ಹತ್ತಿರದ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ತೆರೆಯುವ ಮೂಲಕ ಹೂಡಿಕೆ ಪ್ರಾರಂಭಿಸಬಹುದು. ಅಥವಾ ನಿಮ್ಮ ಹತ್ತಿರದ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ ಪಿಂಚಣಿ ಯೋಜನೆಗೆ ಸೇರಬಹುದು. ಭರ್ತಿ ಮಾಡಿದ ಅರ್ಜಿಯನ್ನು ಬ್ಯಾಂಕ್‌ಗೆ ಸಲ್ಲಿಸಿ. ಇದರೊಂದಿಗೆ ಮೊಬೈಲ್ ಸಂಖ್ಯೆ, ಆಧಾರ್ ಪ್ರತಿಯನ್ನು ಸಲ್ಲಿಸಿ. ಅರ್ಜಿ ಅನುಮೋದನೆಯಾದ ಬಳಿಕ ಅರ್ಜಿದಾರರಿಗೆ ದೃಢೀಕರಣ ಸಂದೇಶವನ್ನು ಕಳುಹಿಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಯೋಜನೆಯಡಿ 1 ಲಕ್ಷ ರೂ. ಸಾಲ ಆರ್ಥಿಕ ನೇರವು

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net