Ayushman Bharat Card Apply: ದೇಶದ ಜನರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ ಯೋಜನೆಯಡಿ ಬಡ ಕುಟುಂಬದ ಜನರಿಗೆ ಕೇಂದ್ರ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆಯನ್ನು (Free treatment) ನೀಡುತ್ತಿದ್ದು, ಈ ಯೋಜನೆಯ ಮೂಲಕ ಜನಸಾಮಾನ್ಯರು ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು. ಹೇಗೆ ಅರ್ಜಿ ಸಲ್ಲಿಸುವುದು ಎಂಬ ಸಮಗ್ರ ಮಾಹಿತಿ ಇಲ್ಲಿದೆ.
ಆಯುಷ್ಮಾನ್ ಭಾರತ್ ಯೋಜನೆ ಪ್ರಯೋಜನಗಳು:
ಆಯುಷ್ಮಾನ್ ಭಾರತ್ ಯೋಜನೆ (ABY)ಯು ಸಾಮಾನ್ಯ ಜನರಿಗೆ ಆರೋಗ್ಯ ವಿಮೆಯನ್ನು ಒದಗಿಸುತ್ತದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ವೈದ್ಯಕೀಯ ಚಿಕಿತ್ಸೆಗಾಗಿ ಕೇಂದ್ರವು ವಾರ್ಷಿಕವಾಗಿ ಬಿಪಿಎಲ್ ಕಾರ್ಡ್ ಕುಟುಂಬಕ್ಕೆ 5 ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ನೀಡುತ್ತದೆ. ಹಾಗೂ ಎಪಿಎಲ್ ಕಾರ್ಡ್ ಕುಟುಂಬದವರಿಗೆ ವರ್ಷಕ್ಕೆ 1.5 ಲಕ್ಷ ರೂ ವರೆಗಿನ ಉಚಿತ ಆರೋಗ್ಯ ಸೌಲಭ್ಯ ಲಭ್ಯ ಪಡೆಯಬಹುದು.
Ayushman Bharat Card Apply:
PMJAY ಯೋಜನೆಯು ಅತಿದೊಡ್ಡ ಆರೋಗ್ಯ ಯೋಜನೆ ಇದಾಗಿದೆ. ಇದು 2008 ರಲ್ಲಿ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ (NHPS) ಎಂದಾಗಿದ್ದ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು, 2018 ರಲ್ಲಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದು ಮರುನಾಮಕರಣ ಮಾಡಲಾಯಿತು. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡು ಸಹಭಾಗಿತ್ವವಾಗಿ ಹಣವನ್ನು ನೀಡುತ್ತವೆ.
ಪ್ರಮುಖ ದಾಖಲೆಗಳು:
ಅಷ್ಟೇ ಅಲ್ಲ ಯೋಜನೆಯಡಿ ಆಯುಷ್ಮಾನ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಸಂಬಂಧಪಟ್ಟ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಇದಕ್ಕಾಗಿ ಕೆಲವು ಪ್ರಮುಖ ದಾಖಲೆಗಳು ಅಗತ್ಯ ಅರ್ಜಿದಾರರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮೆನ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ ಹಾಗೂ ಆದಾಯ ಪ್ರಮಾಣಪತ್ರವೂ ಹೊಂದಿರಬೇಕು.
ಇದನ್ನೂ ಓದಿ: ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು 30,ಸಾವಿರ ರೂ.
ABY ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ?
ಆಯುಷ್ಮಾನ್ ಭಾರತ್ ಯೋಜನೆಗೆ ಎರಡು ತರಹದಲ್ಲಿ ಅರ್ಜಿ ಸಲ್ಲಿಸಬಹುದು. ಮೊದಲನೆಯದಾಗಿ ಹತ್ತಿರದ ಸಿಎಸ್‌ಸಿ (CSC) ಕೇಂದ್ರ ಅಥವಾ ಎಂಪನೆಲ್ಡ್ ಆಸ್ಪತ್ರೆಗೆ ಭೇಟಿ ನೀಡಬಹುದು. ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳು ಜೊತೆಯಲ್ಲಿ ಇರಬೇಕು.
PMJAY ಯೋಜನೆಗೆ ನೀವು ಅರ್ಹರು ಎಂಬುದನ್ನು ಕಂಡುಹಿಡಿಯುವುದು ಹೇಗೆ?
ಮೊದಲು PMJAY ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಮುಖ್ಯ ಪುಟ್ಟದಲ್ಲಿ ‘Am I Eligible’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಆನಂತರ ನಿಮ್ಮ ಮೊಬೈಲ್ ನಂಬರ್, ಹಾಗೂ ಕೆಳಗಿರುವ ಕ್ಯಾಪ್ಚಾ ಕೋಡ್ ನಮೂದಿಸಿ ‘ಜನರೇಟ್ OTP’ ಬಟನ್ ಮೇಲೆ ಕ್ಲಿಕ್ ಮಾಡಿ.
ನಂತರ ಅಲ್ಲಿ ಬರುವ ಪೇಜ್ ನಲ್ಲಿ ರಾಜ್ಯ, ನಿಮ್ಮ ಹೆಸರು, ರೇಷನ ಕಾರ್ಡ್ ಸಂಖ್ಯೆ, ಮೊಬೈಲ್ ನಂಬರ್ ನೋಂದಾಯಿಸಿ. ನಿಮ್ಮ ಕುಟುಂಬವು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದರೆ, ಲಿಸ್ಟ್ ನಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಕಾರು, ಗುಡ್ಸ್ ವಾಹನ ಖರೀದಿಸಲು 3 ಲಕ್ಷ ರೂ.
Ayushman Bharat Card Apply
ಈ ಯೋಜನೆಯಡಿ ಚಿಕಿತ್ಸೆ ಪಡೆಯುವುದು ಹೇಗೆ?
ಮೇಲೆ ತಿಳಿಸಿದ ಹಾಗೆ ನೀವು ಈ ಯೋಜನೆಗೆ ಅರ್ಹರಾಗಿದ್ದರೆ ಮತ್ತು ನೀವು ಕಾರ್ಡ್ ಪಡೆದು ಕೊಂಡ ನಂತರ ಈ ಯೋಜನೆಯಲ್ಲಿ ಐದು ಲಕ್ಷದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ಪಡೆಯಬಹುದು. ನಿಮ್ಮಗೆ ನೀಡಲಾದ ಕಾರ್ಡ್ ತೋರಿಸಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಆಯುಷ್ಮಾನ ಕಾರ್ಡ್ ಹೊಂದಿದವರಿಗೆ ಸಂಪೂರ್ಣವಾಗಿ ಚಿಕಿತ್ಸೆ ಉಚಿತವಾಗಿಯೇ ಇರುತ್ತದೆ.
ಇದನ್ನೂ ಓದಿ: 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿವೇತನ