ಕಿರಿಯ ಸಹಾಯಕರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, 52,650 ರೂ. ವೇತನ : Bailhongal cooperative bank recruitment 2025 Apply Now

WhatsApp Group Join Now
Telegram Group Join Now

Bailhongal cooperative bank recruitment 2025: ಪಿಯುಸಿ, ಪದವಿ ಪಾಸಾಗಿ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಂತೋಷದ ಸುದ್ದಿ, ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೈಲಹೊಂಗಲ ತನ್ನ ಶಾಖೆಗಳಲ್ಲಿ ಖಾಲಿ ಇರುವ ಕಿರಿಯ ಸಹಾಯಕರು, ಕಛೇರಿ ಸಹಾಯಕ (ಸಿಪಾಯಿ) ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು.

ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೈಲಹೊಂಗಲ ಕಿರಿಯ ಸಹಾಯಕರು, ಕಛೇರಿ ಸಹಾಯಕ (ಸಿಪಾಯಿ)  ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

Bailhongal cooperative bank recruitment 2025

ಸಂಸ್ಥೆ: ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್

ಹುದ್ದೆಗಳ ಹೆಸರು: ಕಿರಿಯ ಸಹಾಯಕ, ಕಛೇರಿ ಸಹಾಯಕ

ಒಟ್ಟು ಹುದ್ದೆಗಳ ಸಂಖ್ಯೆ: 08

ಕೆಲಸದ ಸ್ಥಳ: ಬೈಲಹೊಂಗಲ ( ಕರ್ನಾಟಕ)

Bailhongal cooperative bank recruitment 2025 ಹುದ್ದೆಗಳ ವಿವರ:

ಕಿರಿಯ ಸಹಾಯಕರು ಹುದ್ದೆಗಳು: 06

  • ವಿದ್ಯಾರ್ಹತೆ: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ದ್ವಿತೀಯ ಪಿ.ಯು.ಸಿ / ಬಿ.ಕಾಂ / ಬಿ.ಸಿ.ಎ / ಎಮ್.ಸಿ.ಎ / ಬಿ.ಇ ಪದವಿ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
  • ಅರ್ಹತೆ: ಕಂಪ್ಯೂಟರ್, ಬ್ಯಾಂಕಿಂಗ್, ಲೆಕ್ಕಶಾಸ್ತ್ರ, ವಹಿವಾಟು ಮತ್ತು ಮಾರ್ಕೆಟಿಂಗ್ ಪರಿಚಯ, ಕನ್ನಡ ಮತ್ತು ಇಂಗ್ಲಿಷ್ ಓದಲು ಮತ್ತು ಬರೆಯಲು, ಮಾತನಾಡಲು ಬರುತ್ತಿರಬೇಕು.
  • ವೇತನ ಶ್ರೇಣಿ: ಕಿರಿಯ ಸಹಾಯಕರು ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 27,650 ರೂ. ರಿಂದ 52,650 ರೂ. ವೇತನ ನೀಡಲಾಗುತ್ತದೆ.

ಕಛೇರಿ ಸಹಾಯಕರ (ಸಿಪಾಯಿ) ಹುದ್ದೆಗಳು: 02

  • ವಿದ್ಯಾರ್ಹತೆ: ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ (SSLC) ಪಾಸಾಗಿರಬೇಕು.
  • ಕೌಶಲ್ಯ: ಕನ್ನಡವನ್ನು ಓದಲು, ಬರೆಯಲು, ತಿಳಿದುಕೊಳ್ಳಲು ಮತ್ತು ಮಾತನಾಡಲು ಬರಬೇಕು.
  • ವೇತನ ಶ್ರೇಣಿ: ಕಛೇರಿ ಸಹಾಯಕರ (ಸಿಪಾಯಿ) ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು 19,950 ರೂ. ರಿಂದ 37,900 ರೂ. ವರೆಗೆ ವೇತನ ಪಡೆಯುತ್ತಾರೆ.

ಅರ್ಜಿ ಶುಲ್ಕ:
ಕಿರಿಯ ಸಹಾಯಕ ಹುದ್ದೆಗಳಿಗೆ: 1,000 ರೂ.
ಸಿಪಾಯಿ ಹುದ್ದೆಗಳಿಗೆ: 500 ರೂ.
(ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 50% ರಷ್ಟು ಅರ್ಜಿ ಶುಲ್ಕ ರಿಯಾಯತಿ ಇರುತ್ತದೆ.)

ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಗಳು ಖುದ್ದಾಗಿ ಬ್ಯಾಂಕ್ ಗೆ ಭೇಟಿ ನೀಡಿ ಅರ್ಜಿ ಶುಲ್ಕವನ್ನು ಪಾವತಿಸಬಹುದು. ಅಥವಾ ಡಿ.ಡಿ/ಪೊಸ್ಟಲ್ ಆರ್ಡರನ್ನು”ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ್‌ ಲಿ” . ಬೈಲಹೊಂಗಲ ಈ ಹೆಸರಿನಲ್ಲಿ ಶುಲ್ಕ ಪಾವತಿಯಾಗುವಂತೆ ನೀಡಬೇಕು.

ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು.
SC, ST ಪ್ರವರ್ಗ –1 ಅಭ್ಯರ್ಥಿಗಳಿಗೆ: 18 ರಿಂದ 40 ವರ್ಷ
ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 18 ರಿಂದ 38 ವರ್ಷ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 18 ರಿಂದ 35 ವರ್ಷ

ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮಗಳನ್ವಯ ಲಿಖಿತ ಪರೀಕ್ಷೆ, ವಿದ್ಯಾರ್ಹತೆ ಮತ್ತು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಪಡೆಯುವ ಸ್ಥಳ:
ಅರ್ಜಿ ಫಾರ್ಮಗಳನ್ನು ಪ್ರಧಾನ ಕಛೇರಿ ಬೈಲಹೊಂಗಲ ನಲ್ಲಿ ಬ್ಯಾಂಕಿಂಗ್ ವ್ಯವಹಾರದ ಸಮಯದಲ್ಲಿ ಅರ್ಜಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ:
ಪೋನ್ ನಂಬರ್: 9980957487
ಇಮೇಲ್ ವಿಳಾಸ: bucbmainbr@bailhongalurbanbank.in

ಅರ್ಜಿ ಸಲ್ಲಿಕೆ ವಿಳಾಸ:
ದಿ ಬೈಲಹೊಂಗಲ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಬೈಲಹೊಂಗಲ

Bailhongal cooperative bank recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 3 ಜನವರಿ, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಫೆಬ್ರುವರಿ 2025

ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್‌ ಲಿಂಕ್: bailhongalurbanbank.in

ಇದನ್ನೂ ಓದಿ: 10 ನೇ ತರಗತಿ ಪಾಸಾದವರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಉದ್ಯೋಗ

ಇದನ್ನೂ ಓದಿ: ಬೆಸ್ಕಾಂನಲ್ಲಿ ವಿವಿಧ ಹುದ್ದೆಗಳ ನೇಮಕಾತಿ 2025

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net