ಈಗಿನ ಯುವಕರಿಗೆ ಬೈಕ್ ಕ್ರೆಜ್ ಜಾಸ್ತಿ ಇದ್ದು, ಮಾರುಕಟ್ಟೆಯಲ್ಲಿ ಯಾವುದೇ ಹೊಸ ಬೈಕ್ ಬಂದರೆ ಸಾಕು ಅದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಂಡು ವಾಹನ ಖರೀದಿಸಲು ಮುಂದಾಗುತ್ತಾರೆ. ಹಾಗೆಯೇ ಇದೀಗ ಮಾರುಕಟ್ಟೆಯಲ್ಲಿ ಬಜಾಜ್ ಕಂಪನಿಯ Bajaj Freedom 125 ಬೈಕ್ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರ ಬೆಲೆ ಎಷ್ಟು, ವಿಶೇಷತೆ ಏನು, ತಿಳಿಯೋಣ ಬನ್ನಿ ಸ್ನೇಹಿತೆ.
ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ತನ್ನ ಮೊಟ್ಟಮೊದಲ CNG ಬೈಕ್ ಫ್ರೀಡಂ 125 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್‌ನ ವಿಶೇಷತೆ ಏನಂದ್ರೆ ನೀವು ಪೆಟ್ರೋಲ್ ಮತ್ತು ಸಿಎನ್‌ಜಿ ಇಂಧನ ಎರಡರಲ್ಲೂ ಚಲಿಸುವ ಆಯ್ಕೆಗಳನ್ನು ಹೊಂದಿರುವ ಬೈಕ್ ಆಗಿದೆ.
Bajaj Freedom 125 CNG Bike:
ಬೈಕ್ ವಿಶೇಷತೆ:
ಬಜಾಜ್ ಆಟೋ ವಿಶ್ವದ ಮೊದಲ CNG ಬೈಕ್ ‘ಬಜಾಜ್ ಫ್ರೀಡಂ 125’ ಅನ್ನು, ಜುಲೈ 5 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೈಕ್ ಚಲಾಯಿಸಲು ಎರಡು ಇಂಧನ ಆಯ್ಕೆಗಳನ್ನು ಹೊಂದಿದ್ದು. ಇದರಲ್ಲಿ, 2 ಲೀಟರ್ ಪೆಟ್ರೋಲ್ ಟ್ಯಾಂಕ್ ಮತ್ತು 2 ಕೆಜಿ ಸಿಎನ್‌ಜಿ ಟ್ಯಾಂಕ್. ಎರಡನ್ನು ಒಮ್ಮೆ ತುಂಬಿದರೆ 330 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ವಾಹನ ಕಂಪನಿ ಹೇಳಿದೆ.
ವಿನ್ಯಾಸದ ಬಗ್ಗೆ ಮಾಹಿತಿ :
ಇದು ಸಂಪೂರ್ಣವಾಗಿ LED ಹೆಡ್‌ಲೈಟ್‌ಗಳು ಮತ್ತು ಟೈಲ್‌ಲೈಟ್‌ಗಳು ಹೊಂದಿದೆ. ಇದು ಬ್ಲೂಟೂತ್ ಸಂಪರ್ಕದ ಜೋತೆಗೆ ಏಕವರ್ಣದ LCD ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಒಂದು ವಿಶಿಷ್ಟ ಲಕ್ಷಣವೆಂದರೆ ಇಂಧನ ಟ್ಯಾಂಕ್‌ನಲ್ಲಿರುವ ಫ್ಲಾಪ್, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡನ್ನೂ ರಿಫಿಲ್ ಮಾಡಬಹುದು. ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಮತ್ತು ಡ್ರಮ್ ಬ್ರೇಕಿಂಗ್ ಲಭ್ಯವಿದೆ.
Bajaj Freedom 125 CNG Bike ಸಿಲಿಂಡರ್ ಮಾಹಿತಿ :
ಬಜಾಜ್ ಫ್ರೀಡಂ 125 ಬೈಕ್ 785 MM ಉದ್ದದ ಸೀಟನ್ನು ಹೊಂದಿದೆ, ಇದರ ಮುಂಭಾಗದಲ್ಲಿ ಇಂಧನ ಟ್ಯಾಂಕ್ ನೀಡಲಾಗಿದೆ. ಇದರ ಸೀಟಿನ ಕೆಳಗೆ ಭಾಗದಲ್ಲಿ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಸಿರು ಬಣ್ಣದ ಸೂಚಕವು CNG ಟ್ಯಾಂಕ್ ಮತ್ತು ಕಿತ್ತಳೆ ಬಣ್ಣವು ಪೆಟ್ರೋಲ್ ಟ್ಯಾಂಕ್ ನಲ್ಲಿ ಇಂಧನ ರಿಫಿಲ್ ಮಾಡಬಹುದು.
ವಿಶೇಷತೆ:
ಬಜಾಜ್ ಫ್ರೀಡಂ 125 ರಿಂದ ಒಟ್ಟು ಮೂರು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರಲ್ಲಿ 7 ಆಕರ್ಷಕ ಬಣ್ಣಗಳಲ್ಲಿ ಮಾರಾಟಕ್ಕೆ ಲಭ್ಯವಿದೆ, ಅವುಗಳೆಂದರೆ ರೇಸಿಂಗ್ ರೆಡ್, ಕೆರಿಬಿಯನ್ ಬ್ಲ್ಯಾಕ್, ಪ್ಯೂಟರ್ ಗ್ರೇ-ಯೆಲ್ಲೊ, ಎಬೊನಿ ಬ್ಲ್ಯಾಕ್-ಗ್ರೇ, ಪ್ಯೂಟರ್ ಗ್ರೇ-ಬ್ಲ್ಯಾಕ್, ಸೈಬರ್ ವೈಟ್, ಮತ್ತು ಎಬೊನಿ ಬ್ಲ್ಯಾಕ್-ರೆಡ್ ಈ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.
ಬೆಲೆಗಳು:
ಬಜಾಜ್ ಫ್ರೀಡಂ ಡ್ರಮ್ ಬೆಲೆ – 95,000 ರೂ.
ಬಜಾಜ್ ಫ್ರೀಡಂ ಡ್ರಮ್ (LED) ಬೆಲೆ: 1,05,000 ರೂ.
ಬಜಾಜ್ ಫ್ರೀಡಂ ಡಿಸ್ಕ್ (LED) ಬೆಲೆ: 1,10,000 ರೂ.
ಬೈಕ್ ಮೈಲೇಜ್:
ಈ ಬೈಕ್ ಸಿಎನ್‌ಜಿಯಲ್ಲಿ ಪ್ರತಿ ಕೆಜಿಗೆ 100 ಕಿಮೀ ಮೈಲೇಜ್ ನೀಡುತ್ತದೆ. ಮತ್ತು ಪೆಟ್ರೋಲ್ ಬಳಸುವಾಗ 65kpl ಎಂದು ಕೇಳಿಬರುತ್ತಿದೆ. ಇದು 125cc ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, ಇದು 9.5 PS ಪವರ್ ಮತ್ತು 9.7Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ಎಂಜಿನ್ ಪೆಟ್ರೋಲ್ ಮತ್ತು CNG ಎರಡರಲ್ಲೂ (Bajaj Freedom 125 CNG Bike) ಚಲಿಸುವ ಕ್ಷಮತೆಯನ್ನು ಹೊಂದಿದೆ.