T20 ವಿಶ್ವಕಪ್ ಕ್ರಿಕೆಟ್ ನಲ್ಲಿದ್ದ ಆಟಗಾರನಿಗೆ ಮೆದುಳಿನ ರಕ್ತಸ್ರಾವ! ಆಸ್ಪತ್ರೆಗೆ ದಾಖಲು | Nafees Iqbal

WhatsApp Group Join Now
Telegram Group Join Now

ಭಾರತ ಈ ಬಾರಿ 2007ನೇ ಇಸ್ವಿ ನಂತರ 17 ವರ್ಷಗಳು ಆದಮೇಲೆ ವಿಶ್ವಕಪ್ ಕಿರೀಟ್ ವನ್ನು ತನ್ನದಾಗಿಸಿಕೊಂಡಿತು. ಬಾರ್ಬಡೋಸ್ ನಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ (T20 World Cup) ಪೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾದ ವಿರುದ್ಧ ಗೆದ್ದಿರುವುದು ನಮ್ಮ ಎಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.

ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ 2007ನೇ ಇಸ್ವಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ರವರ ನಾಯಕತ್ವದಲ್ಲಿ 17 ವರ್ಷಗಳ ಮೊದಲು ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅನ್ನು ಗೆದ್ದು ಇತಿಹಾಸ ರಚಿಸಿದ ಮೊದಲ ಬಾರಿಗೆ.

Nafees Iqbal:

ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವುದು ಮೆದುಳಿನ ರಕ್ತಸ್ರಾವ (Brain Hemorrhage) ನಿಂದ ಬಳಲುತ್ತಿರುವ ವಿಶ್ವ ಕಪ್ ಆಡಿರುವಂತಹ ಒಬ್ಬ ಆಟಗಾರನ ಬಗ್ಗೆ ಆಸ್ಪತ್ರೆಗೆ ದಾಖಲಾಗಿ ತಮ್ಮ ಕೊನೆಯ ದಿನಗಳನ್ನು ಎಣಿಸುವಂತಹ ಪರಿಸ್ಥಿತಿಗೆ ತಮ್ಮನ್ನು ತಾವು ತಂದುಕೊಂಡಿದ್ದಾರೆ. ಬನ್ನಿ ಆ ಆಟಗಾರ ಯಾರು ಹಾಗೂ ಸದ್ಯದ ಪರಿಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳೋಣ.

ಬಾಂಗ್ಲದೇಶ ಮಾಜಿ ಕ್ರಿಕೆಟರ್:
ಬಾಂಗ್ಲಾ ಕ್ರಿಕೆಟ್ ತಂಡದ (Bangaldesh Cricket Team) ಮಾಜಿ ಕ್ರಿಕೆಟರ್​​ ಮತ್ತು ತಮೀಮ್ ಇಕ್ಬಾಲ್ (Nafees Iqbal) ಅವರ ಅಣ್ಣ ನಫೀಸ್ ಇಕ್ಬಾಲ್ ಬ್ರೇನ್ ಹ್ಯಾಮರೇಜ್ ಗೆ ಒಳಗಾಗಿದ್ದಾರೆ. ಅವರನ್ನು ಢಾಕಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಜುಲೈ 5 ರಂದು ಚಟ್ಟೋಗ್ರಾಮ್​ನಲ್ಲಿ ಅವರಿಗೆ ಈ ಸಮಸ್ಯೆ ಉಂಟಾಗಿತ್ತು. ಮಧ್ಯಾಹ್ನ ಏರ್ ಆಂಬ್ಯುಲೆನ್ಸ್​ ಮೂಲಕ ಢಾಕಾಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Nafees Iqbal

T 20 ವಿಶ್ವಕಪ್​​ನಲ್ಲಿ ಬಾಂಗ್ಲಾದೇಶದ ತಂಡದ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡಿರುವ ನಫೀಸ್ ಅವರು ಕೆಲವು ದಿನಗಳಿಂದ ತಲೆ ನೋವು ಕಾಯಿಲೆಯಿಂದ ಬಳಲುತ್ತಿದ್ದರು.

ಬಾಂಗ್ಲಾದೇಶ ಕ್ರಿಕೆಟ್ ತಂಡದ “ನಫೀಸ್ ಇಕ್ಬಾಲ್ ಸೆರೆಬ್ರಲ್ ವೆನಸ್ ಥ್ರಾಂಬೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದು ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಅವರ ಮೆದುಳಿನ ನಿರ್ದಿಷ್ಟ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ. ಎಂದು ದೇಬಶಿಸ್ ಚೌಧರಿ ಇಎಸ್ಪಿಎನ್ ಕ್ರಿಕ್ಇನ್ಫೋಗೆ ತಿಳಿಸಿದ್ದಾರೆ.

ನಫೀಸ್ ಇಕ್ಬಾಲ್ ಅವರಿಗ 39 ವರ್ಷ ಕಳೆದ ಎರಡು ವರ್ಷಗಳಿಂದ ಬಾಂಗ್ಲಾದೇಶದ ತಂಡದ ವ್ಯವಸ್ಥಾಪಕರಾಗಿ ಆಯ್ಕೆಗೊಂಡಿದ್ದಾರೆ. ನಫೀಸ್​ 2003 ರಿಂದ 2006 ರವರೆಗೆ 11 ಟೆಸ್ಟ್ ಪಂದ್ಯಗಳ ಮತ್ತು 16 ಏಕದಿನ ಸರಣಿಯನ್ನು ಆಡಿದ್ದಾರೆ, ಅವರ ಹೆಚ್ಚಿನ ಪ್ರದರ್ಶನವನ್ನು ಪ್ರಥಮ ದರ್ಜೆ ಕ್ರಿಕೆಟ್​​ ತಂಡದಲ್ಲಿದೆ, ಚಟ್ಟೋಗ್ರಾಮ್​ ತಂಡಕ್ಕೆ 120 ಪಂದ್ಯಗಳನ್ನು ಸಹ ಆಡಿದ್ದಾರೆ.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net