Bank Holiday’s December : ಶಾಲಾ-ಕಾಲೇಜು ಮತ್ತು ಬ್ಯಾಂಕ್‌ ಸೇರಿ ಡಿಸೆಂಬರ್ ನಲ್ಲಿ ಒಟ್ಟು 17 ದಿನ ರಜೆ ಇಲ್ಲಿದೆ ಸಂಪೂರ್ಣ ವಿವರ

WhatsApp Group Join Now
Telegram Group Join Now

December Holiday’s: ಇದೀಗ ಡಿಸೆಂಬರ್‌ ತಿಂಗಳಲ್ಲಿ ಎಷ್ಟು ದಿನ ರಜಾ ಇರಲಿವೆ ಎಂಬ ಕುತೂಹಲ ನೌಕರರಿಗೆ ಸಹಜವಾಗಿಯೇ ಇರುತ್ತದೆ. ಇಲ್ಲಿದೆ ನೋಡಿ ಡಿಸೆಂಬರ್‌ನಲ್ಲಿ ಶಾಲಾ-ಕಾಲೇಜುಗಳು ಮತ್ತು ಬ್ಯಾಂಕ್‌ ಗಳಿಗೆ ಎಷ್ಟು ದಿನ ರಜಾ ಇರಲಿವೆ ಎಂಬ ಬಗ್ಗೆ ವಿವರ.

ವರ್ಷದ ಕೊನೆಯ ತಿಂಗಳು ಡಿಸೆಂಬರ್‌ ಬ್ಯಾಂಕ್‌ಗಳಿಗೆ (Bank Holiday’s December) ರಜೆಯ ತಿಂಗಳಾಗಿದೆ. ರಾಜ್ಯ-ನಿರ್ದಿಷ್ಟ ರಜೆಗಳು ಮತ್ತು ಸಾಪ್ತಾಹಿಕ ರಜೆಗಳನ್ನು ಒಳಗೊಂಡಂತೆ ಒಟ್ಟು 17 ರಜಾದಿನಗಳು ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಕ್ಯಾಲೆಂಡರ್ (government holidays) ಪ್ರಕಾರ ಭಾನುವಾರ, 2ನೇ ಮತ್ತು 4ನೇ ಶನಿವಾರಗಳನ್ನು ಒಳಗೊಂಡಂತೆ ಇತರ ಹಬ್ಬದ ಸಂದರ್ಭಗಳು ಸೇರಿಸಿ ಒಟ್ಟಾರೆ 17 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಅತೀ ಹೆಚ್ಚು ಬ್ಯಾಂಕ್‌ (Bank Holiday’s December Month) ಗಳು ರಜೆ ಇರಲು ಕಾರನ ಎರಡು ಶನಿವಾರಗಳು (ಡಿಸೆಂಬರ್ 14 ಮತ್ತು 28), ಐದು ಭಾನುವಾರಗಳು (ಡಿಸೆಂಬರ್ 1, 8, 15, 22, ಮತ್ತು 29), ಹಾಗೂ ವಿವಿಧ ಹಬ್ಬಗಳ ರಜೆಗಳು ಸೇರಿದಂತೆ ಒಂದರ ನಂತರ ಒಂದು ರಜೆಗಳು ಇರಲಿವೆ. ಹೀಗಾಗಿ ಬ್ಯಾಂಕ್‌ ಕೆಲಸ ಯಾವುದೇ ತೊಂದರೆಯಾಗದಿರಲಿ ಎಂದು ನಿಮ್ಮ ಹತ್ತಿರದ ಶಾಖೆಗಳನ್ನು ಸಂಪರ್ಕಿಸುವ ಮೂಲಕ ನಿಮ್ಮ ರಾಜ್ಯದಲ್ಲಿ ನಿರ್ದಿಷ್ಟವಾಗಿ ಎಷ್ಟು ದಿನ ರಜೆಗಳಿವೆ ಎಂದು ಖಚಿತಪಡಿಸಿಕೊಳ್ಳಬಹುದು.

ಡಿಸೆಂಬರ್‌‌ 2024 ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕ್‌ಗಳಿಗೆ 17 ದಿನ ರಜಾ ಇರಲಿದೆ. ಇದರಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಇರಲಿದೆ. ಆರ್‌ಬಿಐ (ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ) ಬ್ಯಾಂಕ್‌ ರಜಾ ದಿನಗಳ ಲಿಸ್ಟ್‌ ಬಿಡುಗಡೆ ಮಾಡಿದೆ.

Bank Holiday’s December ಭಾರತದಲ್ಲಿ ಬ್ಯಾಂಕ್ ರಜಾದಿನಗಳು ಪಟ್ಟಿ ಡಿಸೆಂಬರ್ 2024

  1. ಡಿಸೆಂಬರ್‌ 1(ಭಾನುವಾರ): ವಿಶ್ವ ಏಡ್ಸ್ ದಿನ ಮತ್ತು ದೇಶಾದ್ಯಂತ ವಾರದ ರಜೆ
  2. ಡಿಸೆಂಬರ್‌ 3 (ಮಂಗಳವಾರ): ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬವನ್ನು ಗೋವಾದಲ್ಲಿ ಮಾತ್ರ ರಜಾದಿನವಾಗಿದೆ.
  3. ಡಿಸೆಂಬರ್‌ 8 (ಭಾನುವಾರ) ದೇಶಾದ್ಯಂತ ವಾರಸ ರಜಾ ದಿನ
  4. ಡಿಸೆಂಬರ್‌ 12 (ಗುರುವಾರ): ಮೇಘಾಲಯದಲ್ಲಿ ಪಾ-ತೋಗನ್ ನೆಂಗ್ಮಿಂಜ ಸಂಗ್ಮಾ ದಿನ ಪ್ರಯುಕ್ತ ರಜಾದಿನವಾಗಿದೆ.
  5. ಡಿಸೆಂಬರ್‌ 14 ಎರಡನೇ ಶನಿವಾರ: ದೇಶಾದ್ಯಂತ ರಜಾ ದಿನ
  6. ಡಿಸೆಂಬರ್‌ 15 (ಭಾನುವಾರ): ದೇಶಾದ್ಯಂತ ರಜಾ ದಿನ
  7. ಡಿಸೆಂಬರ್‌ 18 (ಬುಧವಾರ): ಗುರು ಘಾಸಿದಾಸ್ ಜಯಂತಿಯನ್ನು ಚಂಡೀಗಢದಲ್ಲಿ ರಜಾದಿನವಾಗಿ ಆಚರಿಸಲಾಗುತ್ತದೆ.
  8. ಡಿಸೆಂಬರ್ 18 (ಬುಧವಾರ): ಯು ಸೋಸೋ ಥಾಮ್ ಅವರ ಮರಣ ವಾರ್ಷಿಕೋತ್ಸವವು ಮೇಘಾಲಯದಲ್ಲಿ ಮಾತ್ರ ರಜಾದಿನವಾಗಿರುತ್ತದೆ.
  9. ಡಿಸೆಂಬರ್‌ 19 (ಗುರುವಾರ): ಗೋವಾ ವಿಮೋಚನಾ ದಿನವನ್ನು ಗೋವಾದಲ್ಲಿ (ಗೋವಾ ಲಿಬರೇಶನ್‌ ಡೇ) ಆಚರಿಸಲಾಗುತ್ತದೆ.
  10. ಡಿಸೆಂಬರ್‌ 22 (ಭಾನುವಾರ): ದೇಶಾದ್ಯಂತ ವಾರದ ರಜೆ
  11. ಡಿಸೆಂಬರ್‌ 24 (ಮಂಗಳವಾರ): ಮಿಜೋರಾಂ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಕ್ರಿಸ್ಮಸ್ ಈವ್ ರಜಾದಿನವಾಗಿರುತ್ತದೆ.
  12. ಡಿಸೆಂಬರ್ 24 (ಮಂಗಳವಾರ): ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನವು ಪಂಜಾಬ್ ಮತ್ತು ಚಂಡೀಗಢದಲ್ಲಿ ರಜಾದಿನವಾಗಿರುತ್ತದೆ.
  13. ಡಿಸೆಂಬರ್‌ 25 (ಬುಧವಾರ): ಕ್ರಿಸ್‌ಮಸ್‌ ನಿಮಿತ್ತವಾಗಿ ಭಾರತದಾದ್ಯಂತ ರಜಾದಿನವಾಗಿ ಆಚರಿಸಲಾಗುತ್ತದೆ.
  14. ಡಿಸೆಂಬರ್ 28 (ಶನಿವಾರ): ನಾಲ್ಕನೇ ಶನಿವಾರದ ಕಾರಣ ದೇಶಾದ್ಯಂತ ವಾರದ ರಜೆ.
  15. ಡಿಸೆಂಬರ್ 29 (ಭಾನುವಾರ): ವಾರದ ರಜೆ.
  16. ಡಿಸೆಂಬರ್ 30 (ಸೋಮವಾರ): ಸಿಕ್ಕಿಂನಲ್ಲಿ ತಮು ಲೋಸರ್ ಅನ್ನು ರಜಾದಿನವಾಗಿ ಆಚರಿಸಲಾಗುತ್ತದೆ, ಮತ್ತು ಮೇಘಾಲಯದಲ್ಲಿ ಯು ಕಿಯಾಂಗ್ ನಂಗ್ಬಾ ದಿನವನ್ನು ಆಚರಿಸಲಾಗುತ್ತದೆ.
  17. ಡಿಸೆಂಬರ್ 31 (ಮಂಗಳವಾರ): ಹೊಸ ವರ್ಷದ ಹಿಂದಿನ ದಿನ/ಲೋಸೊಂಗ್/ನಾಮ್ಸೂಂಗ್ ಅವರ ಸಂದರ್ಭದಲ್ಲಿ ಮಿಜೋರಾಂ ಮತ್ತು ಸಿಕ್ಕಿಂನಲ್ಲಿ ಬ್ಯಾಂಕ್‌ಗಳು ರಜೆ ಇರುತ್ತವೆ.

ಈ ಮೇಲಿನ ಎಲ್ಲಾ ಹಬ್ಬಗಳ ರಜಾ ದಿನಗಳ ಪಟ್ಟಿಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಹಾಗಾಗಿ ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕು.

ಆಗ್ನೇಯ ರೈಲ್ವೇ ಇಲಾಖೆಯಲ್ಲಿ 1785 ಹುದ್ದೆಗಳ ನೇಮಕಾತಿ 2024

ರೈತರಿಗೆ ಗುಡ್ ನ್ಯೂಸ್ ಶೇ. 90ರಷ್ಟು ಸಹಾಯಧನದಲ್ಲಿ ಹನಿ ನೀರಾವರಿ ಯೋಜನೆ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net