PUC ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಅರ್ಜಿ ಆಹ್ವಾನ | BCWD Post Matric Hostel Applications 2024

WhatsApp Group Join Now
Telegram Group Join Now

2024- 25 ನೇ‌ ಸಾಲಿನ ಮೆಟ್ರಿಕ್‌ ನಂತರದ ಪಿಯುಸಿ ಮತ್ತು ಸಮಾನಾಂತರ ಕೋರ್ಸ್‌ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಹೊಸದಾಗಿ ಹಾಸ್ಟೆಲ್ (shp hostel application) ಪ್ರವೇಶ ಪಡೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆನ್‌ಲೈನ್ ಮೂಲಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

BCWD Post Matric Hostel Applications 2024

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ (shp post matric) ಗಳಲ್ಲಿ (ವೃತ್ತಿಪರ ಪದವಿ ಮತ್ತು ಸ್ನಾತಕೊತ್ತರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2a, 2b, 3a, 3b ಹಾಗೂ SC, ST ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಯಾರು ಅರ್ಹರು:
ಪ್ರವರ್ಗ – 1, 2a, 2b, 3a, 3b, SC/ST ಮತ್ತು ಇತರೆ ಜನಾಂಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರವರ್ಗ – 1, SC, ST ಅಭ್ಯರ್ಥಿಗಳ ಪಾಲಕರ ಆದಾಯ: 2.50 ಲಕ್ಷ ಮೀರಿರಬಾರದು.
2a, 2b, 3a, 3b, SC/ST
ಪ್ರವರ್ಗ – 2, 2a ,2b ,3a ,3b ಅಭ್ಯರ್ಥಿಗಳ ಪಾಲಕರ ಆದಾಯ: 1.00 ಲಕ್ಷ ಮೀರಿರಬಾರದು.

ಪ್ರಮುಖ ದಾಖಲೆಗಳು:
ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ,
ವಾಸಸ್ಥಳ ದೃಢೀಕರಣ ಪತ್ರ (ರವಾಸಿ)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ,
ಪ್ರಸ್ತುತ ತರಗತಿಗೆ ಪ್ರವೇಶ ಪಡೆದ ಕುರಿತು ದಾಖಲೆ,
ಆಧಾರ್‌ ಕಾರ್ಡ್‌,
ಇ-ಮೇಲ್‌ ವಿಳಾಸ, ಮೊಬೈಲ್ ನಂಬರ್,
ಇತ್ಯಾದಿ ದಾಖಲೆಗಳು.

ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿದಾರರು shp.karnataka.gov.in ವೆಬ್‌ಸೈಟ್ ಸಂಪರ್ಕಿಸಿ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ಅಥವಾ bcwd.karnataka.gov.in ಈ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ.

ಆನ್‌ಲೈನ್ ಅರ್ಜಿ ಸಲ್ಲಿಸಲು: Apply Now

shp hostel application ಪ್ರಮುಖ ದಿನಾಂಕಗಳು:
ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20/07/2024
ಹೊಸ ಅರ್ಜಿಗಳನ್ನು ಪರಿಶೀಲನೆ ಮಾಡಲು ಕೊನೆಯ ದಿನಾಂಕ: 23/07/2024
ಆಯ್ಕೆಯಾದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶ ಪಡೆಯಲು ಕೊನೆಯ ದಿನಾಂಕ : 31/07/2024

ಗಮನಿಸಿ:
ಅರ್ಜಿ ಸಲ್ಲಿಸಲು ತಾಂತ್ರಿಕ ದೋಷ ಕಂಡುಬಂದಲ್ಲಿ bcwdhelpline@gmail.com ಇ-ಮೇಲ್ ಮುಖಾಂತರ ಇಲಾಖೆಗೆ ಸಂಪರ್ಕಿಸಿ.
ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆ 8050770004 ಮತ್ತು 8050770005.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net