ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಾಗಿರುವ ಬೆಸ್ಕಾಂನಲ್ಲಿ (BESCOM Recruitment 2025) ಖಾಲಿ ಇರುವ ಶಿಶಿಕ್ಷು (Apprentice) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಾಗಿರುವ ಬೆಸ್ಕಾಂನಲ್ಲಿ (Bescom) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
BESCOM Recruitment 2025
ಒಟ್ಟು ಹುದ್ದೆಗಳ ಸಂಖ್ಯೆ: 510
ಹುದ್ದೆಗಳ ಹೆಸರು: ಅಪ್ರೆಂಟಿಸ್
ಕೆಲಸದ ಸ್ಥಳ: ಬೆಂಗಳೂರು (ಕರ್ನಾಟಕ)
ಹುದ್ದೆಗಳ ವಿವರ:
ಇಂಜಿನಿಯರಿಂಗ್ ಗ್ರಾಜುಯೇಟ್ಸ್
ನಾನ್ ಇಂಜಿನಿಯರಿಂಗ್ ಗ್ರಾಜುಯೇಟ್ಸ್
ಡಿಪ್ಲೊಮ ಟೆಕ್ನೀಷಿಯನ್
ಹುದ್ದೆಗಳ ಸಂಖ್ಯೆ:
ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್: 130
ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್/ ಬಿ.ಇ./ ಬಿ.ಟೆಕ್ (ಇ&ಇ ಇಂಜಿನಿಯರಿಂಗ್ ಹೊರತುಪಡಿಸಿ): 305
ಡಿಪ್ಲೋಮ (All branches): 75
ವೇತನ:
ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್: 9,008 ರೂ.
ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್/ ಬಿ.ಇ./ ಬಿ.ಟೆಕ್: 9,008 ರೂ.
ಡಿಪ್ಲೋಮ: 8,000 ರೂ.
ವಿದ್ಯಾರ್ಹತೆ:
ಟೆಕ್ನಿಕಲ್ ಗ್ರಾಜುಯೇಟ್ಸ್ ಅಪ್ರೆಂಟಿಸ್: ಬಿ.ಇ. / ಬಿ.ಟೆಕ್ – ಇ ಅಂಡ್ ಇ ಇಂಜಿನಿಯರಿಂಗ್ ಟೆಕ್ನಿಕಲ್ ಕೋರ್ಸ್ಗಳನ್ನು ಓದಿರಬೇಕು.
ನಾನ್ ಇಂಜಿನಿಯರಿಂಗ್ ಗ್ರಾಜುಯೇಟ್ ಅಪ್ರೆಂಟಿಸ್: ಬಿ.ಎ/ ಬಿ.ಎಸ್ಸಿ/ ಬಿಕಾಂ/ ಬಿಬಿಎ/ಬಿಸಿಎ/ ಬಿಬಿಎಮ್ ಪದವಿಗಳನ್ನು ಪಾಸ್ ಆಗಿರಬೇಕು..
ಟೆಕ್ನೀಷಿಯನ್ ಅಪ್ರೆಂಟಿಸ್ : ಯಾವುದೇ ಬ್ರ್ಯಾಂಚ್ನಲ್ಲಿ ಡಿಪ್ಲೊಮ ಪಾಸ್ ಪೂರ್ಣಗೊಳಿಸಿರಬೇಕು.
ಆಯ್ಕೆ ವಿಧಾನ:
ನಿಗದಿತ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ದಾಖಲೆಗಳ ಪರಿಶೀಲನೆ ವಿಳಾಸ:
BESCOM, HRD Centre, 1st Floor, Crescent Tower, Crescent Road, Near Mallige Nursing Home, Race Course, Bangalore 560001.
BESCOM Recruitment 2025 ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಫೆಬ್ರವರಿ 01, 2025.
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 20, 2025.
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ವಿಳಾಸ: bescom.karnataka.gov.in
ಇದನ್ನೂ ಓದಿ: ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ವೇತನ 69 ಸಾವಿರ ರೂ.
ಇದನ್ನೂ ಓದಿ: ಜಿಲ್ಲಾ ಪಂಚಾಯತ್ ನಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮಕಾತಿ 2025