Bidar DCC Bank Recruitment 2025: ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ (ಬೀದರ್ ಡಿಸಿಸಿ ಬ್ಯಾಂಕ್) ಇಲ್ಲಿ ಖಾಲಿ ಇರುವ ಮುಖ್ಯ ಪ್ರಧಾನ ವ್ಯವಸ್ಥಾಪಕರು (Chief General Manager) ಹುದ್ದೆಯನ್ನು ಭರ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಜಿ೯ ಸಲ್ಲಿಸಲು ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಮಾರ್ಚ್ 06 ರೊಳಗೆ ಅಜಿ೯ ಸಲ್ಲಿಸಬೇಕು.
ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ (Bidar DCCentral Bank Ltd.) ಮುಖ್ಯ ಪ್ರಧಾನ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಬ್ಯಾಂಕ್: ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್
ಹುದ್ದೆ ಹೆಸರು: ಮುಖ್ಯ ಪ್ರಧಾನ ವ್ಯವಸ್ಥಾಪಕರು
ಉದ್ಯೋಗದ ಸ್ಥಳ : ಬೀದರ್ (ಕರ್ನಾಟಕ)
ಒಟ್ಟು ಹುದ್ದೆಗಳ ಸಂಖ್ಯೆ : 01 ಹುದ್ದೆ
ವಿದ್ಯಾರ್ಹತೆ :
ಬೀದರ್ ಡಿಸಿಸಿ ಬ್ಯಾಂಕ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಅರ್ಥಶಾಸ್ತ್ರ, ಹಣಕಾಸು ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ/ ಪಿಜಿ ಮಾಸ್ಟರ್ಸ್, (ಎಂ.ಕಾಂ, ಎಂಬಿಎ, ಎಂ.ಎ) ಪೂರ್ಣಗೊಳಿಸಿರಬೇಕು.
ವಯೋಮಿತಿ:
ಬೀದರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್ ಅಧಿಸೂಚನೆಯ ಪ್ರಕಾರ, ಅಜಿ೯ದಾರರ ವಯಸ್ಸು ಗರಿಷ್ಠ 65 ವರ್ಷಕ್ಕಿಂತ ಕಡಿಮೆ ಆಗಿರಬೇಕು.
(ಬೀದರ್ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.)
ವೇತನ: ಈ ಹುದ್ದೆಗೆ ಆಯ್ಕೆಯಾಗುವ ಅರ್ಹತೆ ಮತ್ತು ಕೆಲಸದ ಅನುಭವದ ಆಧಾರದ ಮೇಲೆ ಅಧಿಸೂಚನೆ ಪ್ರಕಾರ ವೇತನ ನೀಡಲಾಗುತ್ತದೆ.
ಅಹ೯ತೆ : ಅಜಿ೯ ಸಲ್ಲಿಸುವ ಅಭ್ಯಾಥಿ೯ಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 10 ರಿಂದ 15 ವರ್ಷಗಳ ಬ್ಯಾಂಕಿಂಗ್, ಹಣಕಾಸು ಅಥವಾ ನಿರ್ವಹಣಾ ಕ್ಷೇತ್ರದಲ್ಲಿ ಕಾಯಾ೯ನುಭವ ಹೊಂದಿರಬೇಕು.
ನೇಮಕಾತಿ ವಿಧಾನ:
ಅಜಿ೯ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
Bidar DCC Bank Recruitment 2025 ಅರ್ಜಿ ಶುಲ್ಕ:
- ಎಸ್ಸಿ / ಎಸ್ಟಿ/ (SC/ST) ಪ್ರವರ್ಗ-I/ಅಂಗವಿಕಲ ಮತ್ತು ಮಾಜಿ ಸೈನಿಕರ ಅಭ್ಯರ್ಥಿಗಳು: ರೂ.1000/-
- ಸಾಮಾನ್ಯ/ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: ರೂ.2000/-
- ಶುಲ್ಕ ಪಾವತಿಸುವ ವಿಧಾನ : ಡಿಮ್ಯಾಂಡ ಡ್ರಾಫ್ಟ್ (ಡಿಡಿ) ಮೂಲಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬೀದರ ಇವರ ಹೆಸರಿನ ಮೇಲೆ ಪಾವತಿಸಬೇಕು.
SSLC, PUC ಪಾಸಾದವರಿಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಲ್ಲಿ ಉದ್ಯೋಗ
ಅಜಿ೯ ಸಲ್ಲಿಸುವ ವಿಧಾನ:
ಅಹ೯ ಮತ್ತು ಆಸಕ್ತ ಅಭ್ಯಾಥಿ೯ಗಳು ತಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, ಕೆಲಸದ ಅನುಭವ ಇತರೆ ಅಗತ್ಯ ದಾಖಲೆಗಳೊಂದಿಗೆ ಅಜಿ೯ಯನ್ನುಪಿಡಿಎಫ್ (PDF) ಸ್ವರೂಪದಲ್ಲಿ ಇ-ಮೇಲ್, ಅಂಚೆ ಅಥವಾ ಖುದ್ದಾಗಿ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬೀದರ ಕೇಂದ್ರ ಕಚೇರಿ ಬಸವೇಶ್ವರ ಚೌಕ ಬೀದರ್ – 585 401
ಇ-ಮೇಲ್ ವಿಳಾಸ್ dccbank_bdr@yahoo.co.in
ಮೋಬೈಲ್ ಸಂಖ್ಯೆ: 7760163331, 08482-226402
Bidar DCC Bank Recruitment 2025 ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : ಫೆಬ್ರುವರಿ 19, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 06, 2025
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಫಾರ್ಮ್ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ವಿಳಾಸ: bidardccbank.in
ಈ ಸುದ್ದಿಯನ್ನೂ ಓದಿ: ಭಾರತೀಯ ಪಶುಪಾಲನ್ ನಿಗಮ್ ನೇಮಕಾತಿ 10, 12ನೇ ತರಗತಿ ಪಾಸಾದವರಿಗೆ ಅವಕಾಶ