ಭಾರತ್ ಪೆಟ್ರೋಲಿಯಂ ಕಾರ್ಪೊರೇನ್ ಲಿಮಿಟೇಡ್ (BPCL Recruitment 2025) ನಲ್ಲಿ ಖಾಲಿ ಇರುವ ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಸೆಕ್ರೆಟರಿ ಹುದ್ದೆಗಳನ್ನು ಭತಿ೯ ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಅಹ೯ತೆ ಹೊಂದಿರು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಫೆಬ್ರವರಿ 22 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೇಡ್ (Bharat Petroleum Corporation Limited) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ಹುದ್ದೆಗಳ ಹೆಸರು: ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಸೆಕ್ರೆಟರಿ
ಉದ್ಯೋಗದ ಸ್ಥಳ: ಭಾರತದಾದ್ಯಂತ
ವೇತನ: 30000-120000/-ರೂ.
ಶೈಕ್ಷಣಿಕ ಅರ್ಹತೆ:
ಜೂನಿಯರ್ ಎಕ್ಸಿಕ್ಯುಟಿವ್:
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೊಮಾ, ರಾಸಾಯನಿಕ ವಿಜ್ಞಾನದಲ್ಲಿ ಬಿಎಸ್ಸಿ ಪದವಿಯನ್ನು ಹೊಂದಿರಬೇಕು. ಅಭ್ಯರ್ಥಿಯು ಕನಿಷ್ಠ ಶೇ. 60 ಮತ್ತು SC/ST/PwBD ಅಭ್ಯರ್ಥಿಗಳು ಶೇ. 55 ಅಂಕಗಳೊಂದಿಗೆ ಉತ್ತೀಣ೯ರಾಗಿರಬೇಕು.
ಕಾರ್ಯದರ್ಶಿ (Secretary):
ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10 ನೇ ತರಗತಿ, 12 ನೇ ತರಗತಿ, ಡಿಪ್ಲೊಮಾ, ಪದವಿ ಪಾಸಾಗಿರಬೇಕು.
ವಯೋಮಿತಿ:
ಈ ಎರಡೂ ಹುದ್ದೆಗಳಿಗೆ ಅಜಿ೯ ಸಲ್ಲಿಸುವ ಅಭ್ಯರ್ಥಿಯ ಗರಿಷ್ಠ ವಯೋಮಿತಿ 29 ವರ್ಷಗಳು ಮಿರಿರಬಾರದು. ಈ ಕೆಳಗಿನಂತೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.
ವಯೋಮಿತಿ ಸಡಿಲಿಕೆ:
- OBC ಅಭ್ಯಾಥಿ೯ಗಳಿಗೆ: 03 ವಷ೯
- SC/ST ಅಭ್ಯಾಥಿ೯ಗಳಿಗೆ: 05 ವಷ೯
- PwBD ಅಭ್ಯಾಥಿ೯ಗಳಿಗೆ: 10 ವಷ೯
ಇದನ್ನೂ ಓದಿ: ಕರ್ನಾಟಕ ಹೈಕೋರ್ಟಿನಲ್ಲಿ 158 ಹುದ್ದೆಗಳ ನೇಮಕಾತಿ 2025
BPCL Recruitment 2025 ಅರ್ಜಿ ಶುಲ್ಕ:
ಇತರೆ ಎಲ್ಲಾ ಅಭ್ಯರ್ಥಿಗಳು: 1180 ರೂ.
SC, ST ಮತ್ತು PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ವೇತನ ಶ್ರೇಣಿ:
ಈ ಎರಡೂ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯಾಥಿ೯ಗಳಿಗೆ ಪ್ರತಿ ತಿಂಗಳು 30000-120000/-ರೂಪಾಯಿ. ಸಂಬಳ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಶೈಕ್ಷಣಿಕ ಅರ್ಹತೆ, ಕೆಲಸದ ಅನುಭವದ ಆಧಾರದ ಮೇಲೆ ಲಿಖಿತ/ಕಂಪ್ಯೂಟರ್ ಆಧಾರಿತ ಪರೀಕ್ಷೆ, ಪ್ರಕರಣ ಆಧಾರಿತ ಚರ್ಚೆ, ಗುಂಪು ಕಾರ್ಯ, ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
BPCL Recruitment 2025 ಪ್ರಮುಖ ದಿನಾಂಕಗಳು:
ಅಜಿ೯ ಸ್ವೀಕರಿಸಲು ಪ್ರಾರಂಭದ ದಿನಾಂಕ: 22-01-2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ: 22-02-2025
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ bharatpetroleum.in