BPL Antdyodaya Ration Card Cancel Holders Be Aware: ಕರ್ನಾಟಕ ಸರ್ಕಾರ (Karnataka Government) ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ನೀಡುತ್ತದೆ. ಆದರಿಂಗ ಆದರೆ ಬಡತನ ರೇಖೆಗಿಂತ ಮೇಲ್ಪಟ್ಟವರು ಶ್ರೀಮಂತ ಸಹ ಸುಳ್ಳು ಮಾಹಿತಿ ನೀಡಿ BPL ಈ ಕಾರ್ಡ್ ಪಡೆದಿದ್ದಾರೆ. ಈ ಕುರಿತು ಅಹಾರ ಇಲಾಖೆ ಕುಟುಂಬ ಈ ತಂತ್ರಾಂಶದ ಮೂಲಕ ಮಾಹಿತಿ ಪಡೆದಿದೆ. ಇ ಆಡಳಿತ ಕೇಂದ್ರದ ಮೂಲಕ ಮಾಹಿತಿ ಸಂಗ್ರಹಿಸಿರುವ ಆಹಾರ ಇಲಾಖೆ (Food Department) ಕರ್ನಾಟಕದಲ್ಲಿ ಬರೋಬ್ಬರಿ 22,62,413 ಪಡಿತರ ಚೀಟಿಗಳನ್ನು ಅನರ್ಹ ಎಂದು ಪಟ್ಟಿ ಮಾಡಿದೆ.
ಈ ಅಕ್ರಮ ತಡೆಗಟ್ಟಲು ಸರ್ಕಾರ ಇದೀಗ ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಆಹಾರ ಇಲಾಖೆ (Food Department) ಪಡಿತರ ಚೀಟಿಯಲ್ಲಿ ಆಗಿರುವ ಅಕ್ರಮ ಮತ್ತು ಸುಳ್ಳು ನೀಡಿ ಪಡೆದ ರೇಷನ ಕಾರ್ಡ್ ಪತ್ತೆ ಹಚ್ಚುತ್ತಿದೆ. ಇದೀಗ ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷಕ್ಕೂ ಅಧಿಕ ರೇಷನ ಕಾರ್ಡ್ ಅನರ್ಹ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದೆ. ಅಷ್ಟೇ ಅಲ್ಲ ಇದೀಗ ಆಹಾರ ಇಲಾಖೆಯು 14 ಮಾನದಂಡ ಪಟ್ಟಿ ಸಿದ್ಧ ಪಡಿಸಿದ್ದು. ಈ ಪಟ್ಟಿಯಲ್ಲಿ ಇರುವ ಮಾನದಂಡ ಹೊಂದಿರುವವರ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದುಕೊಂಡಿದ್ದರೆ ಅಂತವರ ರೇಷನ್ ಕಾರ್ಡ್ ರದ್ದಾಗಲಿದೆ. ಹಾಗೂ ಕಾನೂನು ಕ್ರಮ ಸಹ ಆಗಬಹುದು.
ಯಾವ ಅವು ಮಾನದಂಡಗಳು:
- ಸರ್ಕಾರಿ ನೌಕರರು
- ಕಾರು ಹೊಂದಿರುವವರು
- ಶ್ರೀಮಂತರು
- 100 ಸಿಸಿ ಮೇಲ್ಪಟ್ಟ ದಿಚಕ್ರ ವಾಹನ
- ತೆರಿಗೆ ಪಾವತಿದಾರರು
- 7.5 ಎಕರೆ ಭೂಮಿಗಿಂತ ಮೇಲ್ಪಟ್ಟವರು
- ಕಾಲೇಜು ನೌಕರರು
- ಗುತ್ತಿಗೆದಾರರು
- ಕೈಗಾರಿಕೋದ್ಯಮ
- ಅರೇ ಸರ್ಕಾರಿ ನೌಕರರು
- ಉದ್ಯಮ
- ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಹೊಂದಿರುವವರು
ಇದನ್ನೂ ಓದಿ: ಪಿಎಂ ಕಿಸಾನ್ 18 ನೇ ಕಂತಿನ 2000 ಹಣ ಈ ದಿನ ಖಾತೆಗೆ ಜಮಾ
ಈ ಪಟ್ಟಿಯಲ್ಲಿರುವ ಮಾನದಂಡಗಳನ್ನು ಹೊಂದಿರುವವರು ಬಿಪಿಎಲ್ ಮತ್ತು ಅಂತ್ಯೋದಯ ರೇಷನ ಕಾರ್ಡ್ (BPL Antdyodaya Ration Card) ರದ್ದು ಮಾಡಲಾಗುತ್ತದೆ. ಈ ರೀತಿ ಆಹಾರ ಇಲಾಖೆ 14 ಮಾನದಂಡಗಳನ್ನು ಪಟ್ಟಿ ಮಾಡಿದೆ.
ಇದರಲ್ಲಿ 10,97,621 ಬಿಪಿಎಲ್ ಕಾರ್ಡ್ ಹಾಗೂ 10,54,368 ಅಂತ್ಯೋದಯ ಪಡಿತರ ಚೀಟಿಗಳನ್ನು ಅಕ್ರಮವಾಗಿ ಪಡೆದುಕೊಳ್ಳಲಾಗಿದೆ ಅನ್ನೋದು ಇ ಆಡಳಿಕ ಕೇಂದ್ರದಿಂದ ಪಡೆದಿರುವ ಡೇಟಾದಲ್ಲಿ ಬಹಿರಂಗವಾಗಿದೆ. ಮುಂಬರುವ 10 ದಿನಗಳಲ್ಲಿ ಬರೋಬ್ಬರಿ 22 ಲಕ್ಷ ರೇಷನ ಕಾರ್ಡ್ (Ration Card) ರದ್ದಾಗಲಿದೆ. ಇದಲ್ಲದೇ ಅಕ್ರಮವಾಗಿ ಪಡೆದಿರುವ ಕಾರ್ಡ್‌ಗಳು ಸಹ ಪತ್ತೆಯಾದರೆ ಈ ಕಾರ್ಡ್ ಕೂಡ ರದ್ದು ಮಾಡಲಾಗುತ್ತದೆ.
ಇದನ್ನೂ ಓದಿ: ಆಧಾರ್ ಕಾರ್ಡ್ ನಲ್ಲಿ ಪೋಟೋ, ಹೆಸರು, ವಿಳಾಸ, ತಿದ್ದುಪಡಿ ಮಾಡಲು ಮತ್ತೆ ದಿನಾಂಕ ವಿಸ್ತರಣೆ