ಭಾರತ ಸರ್ಕಾರದ ಟೆಲಿಕಾಂ ಕಂಪನಿಯಾಗಿರುವ BSNL ತಮ್ಮ ಗ್ರಾಹಕರಿಗೆ BSNL ದೀಪಾವಳಿ ಹಬ್ಬಕ್ಕೆ ಆಫರ್ ನೀಡಲು ಆರಂಭಿಸಿದೆ. ಪ್ರಸ್ತುತ ಹಬ್ಬದ ಸಮಯದಲ್ಲಿ ಖಾಸಗಿ ಟೆಲಿಕಾಂ ಆಪರೇಟರ್‌ಗಳು ರೀಚಾರ್ಜ್ ಬೆಲೆಯನ್ನು ಏರಿಸುವ ವೇಳೆಯಲ್ಲಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಬಳಕೆದಾರರಿಗೆ ಅತಿ ಹೆಚ್ಚು ಪ್ರಯೋಜನಗಳನ್ನು ನೀಡುವುದರೊಂದಿಗೆ ಪ್ರಿಪೇಯ್ಡ್ ರೀಚಾರ್ಜ್ ಬೆಲೆಯನ್ನು ಇನ್ನೂ ಕಡಿಮೆ ಮಾಡಿದೆ.
BSNL Diwali Special Offer ನಲ್ಲಿ ಮೊದಲಿರುವ ಬೆಲೆಯಲ್ಲಿ 100 ರೂಗಳ ಡಿಸ್ಕೌಂಟ್ ಲಭ್ಯ:
365 ದಿನಗಳ BSNL 1999 ರೂ. ರಿಚಾರ್ಜ್ ಯೋಜನೆಯನ್ನು ಈಗ 100 ರೂಗಳ ಡಿಸ್ಕೌಂಟ್ ರಿಯಾಯಿತಿಯೊಂದಿಗೆ ಲಭ್ಯವಿದ್ದು. ಈಗ ಕೇವಲ 1899 ರೂಗಳಿಗೆ ಲಭ್ಯವಿದೆ. ಬೆಲೆ ಬದಲಾವಣೆಯು ಈಗ BSNL ಇಂಡಿಯಾದ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಯೋಜನೆ ಸೀಮಿತ ಅವಧಿಯ ಕೊಡುಗೆಯಾಗಿದೆ ಎಂಬುದನ್ನು ಗಮನಿಸಬಹುದು. ಆಸಕ್ತರು ಈ ಆಫರ್ ಅನ್ನು 28 ಅಕ್ಟೋಬರ್ 2024 ರಿಂದ 17 ನವೆಂಬರ್ 2024 ರವರೆಗೆ ಈ 1899 ರೂಗಳ ರಿಚಾರ್ಜ್ ಮಾಡುವ ಮೂಲಕ 100 ರೂಗಳ ರಿಯಾಯಿತಿಯನ್ನು ಪಡೆಯಬಹುದು.
BSNL 1899 ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು:
BSNL ನೀಡುತ್ತಿರುವ ರೂ. ಯೋಜನೆಯಡಿಯಲ್ಲಿ 600GB ಡೇಟಾ ನೀಡಲಾಗುತ್ತದೆ. ಈ ಪ್ಲಾನ್ ವಾರ್ಷಿಕ ಯೋಜನೆಯಾಗಿದೆ ಮತ್ತು 365 ದಿನಗಳ ಸೇವಾ ಮಾನ್ಯತೆಯನ್ನು ಹೊಂದಿದೆ. ಈ ಪ್ರಿಪೇಯ್ಡ್ ಯೋಜನೆಯಡಿಯಲ್ಲಿ ಅನಿಯಮಿತ ವಾಯ್ಸ್ ಕರೆ, 100 SMS ಪ್ರತಿದಿನ ಮತ್ತು ಆಟಗಳು ಮತ್ತು ಸಂಗೀತದಂತಹ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ.
BSNL ಲೇಟೆಸ್ಟ್ 1899 ರೂಗಳಲ್ಲಿ ಪ್ಲಾನ್ ದೇಶದ ಅತ್ಯುತ್ತಮ ವಾರ್ಷಿಕ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದಾಗಿದೆ. ಇತರೆ ಖಾಸಗಿ ಟೆಲಿಕಾಂ ಆಪರೇಟರ್‌ಗಳ ಕೊಡುಗೆಗಳಿಗೆ ಹೋಲಿಸಿದರೆ ಈ ಯೋಜನೆಯು ಇನ್ನೂ ಅತ್ಯಂತ ಕಡಿಮೆಯಾಗಿದೆ.