BSNL New Recharge Plan: ಸದ್ಯಕ್ಕೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿಯಾದ BSNL ಹೊಸ ಯೋಜನೆಗಳು ಬಳಕೆದಾರರ ಗಮನ ಸೆಳೆಯುತ್ತಿದೆ. ಅದರಲ್ಲೂ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಬೆನಿಫಿಟ್ಸ್ ಒದಗಿಸುವ ಮೂಲಕ ಮತ್ತಷ್ಟು ಹೊಸ ಗ್ರಾಹಕರನ್ನು ಬಿಎಸ್ಎನ್ಎಲ್ ತನ್ನತ್ತ ಸೆಳೆಯುತ್ತಿದೆ.
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗೆ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಪ್ರಕಟಿಸಿದೆ. ಈ ಹೊಸ ಪ್ಲಾನ್ ಮೂಲಕ ಬಿಎಸ್ಎನ್ಎಲ್ ಗ್ರಾಹಕರಿಗೆ 105 ದಿನಗಳವರೆಗೆ 2GB ಡೇಟಾವನ್ನು ನೀಡುತ್ತಿದೆ.
ಬಿಎಸ್ಎನ್ಎಲ್ (BSNL New Recharge Plan) ತನ್ನ ಗ್ರಾಹಕರಿಗೆ ವಿಸ್ಕೃತ ವ್ಯಾಲಿಡಿಟಿ ಪ್ಲಾನ್ ನೀಡುವ ಸಲುವಾಗಿ ಕೇವಲ ರೂ. 666 ಗೆ. ಹೊಸ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಈ ಪ್ಲಾನ್ 105 ದಿನಗಳ ಅವಧಿಯನ್ನು ಹೊಂದಿದ್ದು ಇದರಲ್ಲಿ ಅನಿಯಮಿತ ಕರೆ (Unlimited Calls) ಸೌಲಭ್ಯ ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಪ್ರಯೋಜನಗಳು ಇದರಲ್ಲಿ ಲಭ್ಯವಿರುತ್ತವೆ.
ಬಿಎಸ್ ಎನ್ಎಲ್ ತನ್ನ ಗ್ರಾಹಕರಿಗಾಗಿ ಈ ಪ್ಲಾನ್ ನಲ್ಲಿ ದಿನಕ್ಕೆ 2ಜಿಬಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುತ್ತದೆ. 105 ದಿನಗಳ ಅವಧಿಯಲ್ಲಿ ಒಟ್ಟು 210 ಜಿಬಿ ಡೇಟಾ ಪಡೆಯಬಹುದು.
PUC ಪಾಸಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ 20,000 ರೂ. ಸ್ಕಾಲರ್‌ಶಿಪ್