ಕರ್ನಾಟಕ ಸರ್ಕಾರದ ವತಿಯಿಂದ ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಲು ಸಾಲ ಸೌಲಭ್ಯದ (Loan) ಜೊತೆಗೆ ಸಹಾಯಧನ (Subsidy) ನೀಡುತ್ತಿದೆ. ಯೋಜನೆಯ ಲಾಭ ಪಡೆಯಲು ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವಂತಹ ವಿವಿಧ ನಿಗಮಗಳಡಿ ಸಾಲ ಸೌಲಭ್ಯ ಮತ್ತು ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಯಾವ ನಿಗಮಗಳ ಅಡಿ ನೇರ ಸಾಲಕ್ಕೆ ಪಡೆಯಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು ಮತ್ತು ಅರ್ಹತೆಗಳ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಯೋಜನೆಯ ಪ್ರಯೋಜನಗಳು:
ಕೆಳಗೆ ನೀಡಿರುವ ನಿಗಮಗಳ ಅಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸ್ವಯಂ ಉದ್ಯೋಗ ಪ್ರಾರಂಭಿಸುವ ಘಟಕದ ವೆಚ್ಚವು 1,00,000 ರೂ. ಇದ್ದರೆ ಅಂತಹ ಫಲಾನುಭವಿಗಳು ರೂ. 20,000 ರೂ. ಸಹಾಯಧನ (Subsidy) ಪಡೆಯಬಹುದು. ಹಾಗೂ ಇನ್ನುಳಿದ 80,000 ರೂ. ಹಣವನ್ನು ಈ ಯೋಜನೆಯಡಿ ಬ್ಯಾಂಕುಗಳಿಂದ ಸಾಲದ (Loan) ರೂಪದಲ್ಲಿ ನೀಡಲಾಗುತ್ತದೆ.
ಹಾಗೂ ದೊಡ್ಡ ಘಟಕದ ವೆಚ್ಚ 2,00,000 ರೂ. ಆಗಿದ್ದರೆ 30,000 ರೂ. ಹಣವನ್ನು ಸಹಾಯಧನವಾಗಿ (Subsidy) ನೀಡಲಾಗುತ್ತದೆ. ಇನ್ನುಳಿದ 1,70, 000 ರೂಪಾಯಿಯನ್ನು ಬ್ಯಾಂಕಿನಿಂದ ಸಾಲದ ರೂಪದಲ್ಲಿ ಪಡೆಯಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು:
ಫಲಾನುಭವಿಗಳು ಕನಿಷ್ಠ 18 ಪೂರೈಸಿರಬೇಕು ಮತ್ತು 55 ವಯಸ್ಸಿನ ಒಳಗೆ ಇರಬೇಕು.
ಕನಿಷ್ಠ 7ನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಗಿಸಿರಬೇಕು.
ಕರ್ನಾಟಕದಲ್ಲಿ ವಾಸಿಸುತ್ತಿರಬೇಕು.
ಪ್ರಮುಖ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಶೈಕ್ಷಣಿಕ ಅಂಕ ಪಟ್ಟಿಗಳು
- ಅಭ್ಯರ್ಥಿಯ ರೇಷನ್ ಕಾರ್ಡ್
ಇಲ್ಲಿ ನೀಡಿರುವ ನಿಗಮದ ಅಡಿ ಅರ್ಜಿ ಸಲ್ಲಿಸಿ:
1) ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
2) ಉಪ್ಪಾರ ಅಭಿವೃದ್ಧಿ ನಿಗಮ
3) ಮರಾಠ ಅಭಿವೃದ್ಧಿ ನಿಗಮ
4) ವಿಶ್ವಕರ್ಮ ಅಭಿವೃದ್ಧಿ ನಿಗಮ
5) ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
6) ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
7) ಸವಿತಾ ಸಮಾಜ ಅಭಿವೃದ್ಧಿ ನಿಗಮ
8) ಅಲೆಮಾರಿ ಅರೆ-ಅಲೆಮಾರಿ ಅಭಿವೃದ್ಧಿ ನಿಗಮ
9) ಒಕ್ಕಲಿಗ ಅಭಿವೃದ್ಧಿ ನಿಗಮ.
ಅರ್ಜಿ ಸಲ್ಲಿಸುವ ವಿಧಾನ?
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ನಿಮ್ಮ ಗ್ರಾಮದ ಅಥವಾ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಕಂಪ್ಯೂಟರ್ ಸೆಂಟರ್ ಭೇಟಿನೀಡಿ ತಮ್ಮ ಸಂಬಂಧಪಟ್ಟ ನಿಗಮದ ಅಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.