Cattle Shed Subsidy Application: ಕರ್ನಾಟಕ ಸರ್ಕಾರವು ರೈತರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ರೈತರಿಗೆ ಅರ್ಥಿಕವಾಗಿ ನೆರವಾಗಲು ಕೃಷಿ ಜೊತೆ ಉಪಕಸುಬುಗಳನ್ನು ಪ್ರಾರಂಭಿಸಲು ಕುರಿ, ಹಸು, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ(mgnreg) (januvaru shed subsidy-2024) 57,000 ರೂ. ಸಬ್ಸಿಡಿ ಹಣ ಪಡೆಯಲು ಅರ್ಜಿಯನ್ನು ಆಹ್ವಾನಿಸಿದೆ.
ಪ್ರಸ್ತುತ ಹವಾಮಾನ ವೈಪರಿತ್ಯ ಸನ್ನಿವೇಶದಿಂದ ಬೆಳೆಯನ್ನು ಸಮರ್ಪಕವಾಗಿ ಬೆಳೆಯಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಉಂಟಾಗಿದೆ. ರೈತಾಪಿ ವರ್ಗದಲ್ಲಿ ಇದ್ದು ಇಂತಹ ಸನ್ನಿವೇಶದಲ್ಲಿ ರೈತರು ಆರ್ಥಿಕ ಸ್ಥಿರತೆಯನ್ನು ಸುಧಾರಿಸಲು ಕೃಷಿ ಜೊತೆಗೆ ಕುರಿ,ಕೋಳಿ, ಹಸು,ಹಂದಿ ಸಾಕಾಣಿಕೆಯನ್ನು ಸಹ ಮಾಡಬಹುದಾಗಿದೆ. ಈ ಯೋಜನೆಯಡಿ ಅರ್ಜಿ ಲಾಭವನ್ನು ಪಡೆಯಬಹುದು
Cattle Shed Subsidy Application
ರೈತರು ಕುರಿ,ಕೋಳಿ, ಹಸು,ಹಂದಿ ಸಾಕಾಣಿಕೆಯನ್ನು ಶೆಡ್ ನಿರ್ಮಾಣ ಮಾಡಲು ರೈತರಿಗೆ ಅರ್ಥಿಕವಾಗಿ ಆರ್ಥಿಕ ಸಹಾಯಧನವನ್ನು ಉದ್ಯೋಗ ಖಾತ್ರಿ ಯೋಜನೆಯಡಿ(mgnreg) ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ.
januvaru shed subsidy ಎಷ್ಟು ಸಹಾಯಧನ ನೀಡಲಾಗುತ್ತದೆ:
MGNREGA ಉದ್ಯೋಗ ಖಾತ್ರಿ ಯೋಜನೆಯಡಿ ಜಾನುವಾರು ಶೇಡ್ ನಿರ್ಮಾಣಕ್ಕೆ ಒಟ್ಟು 57,000 ರೂ. ಮೊತ್ತ ನೀಡಲಾಗುತ್ತದೆ. ಅದರಲ್ಲಿ 10,556 ರೂ. ಕೂಲಿ ಕಾರ್ಮಿಕರ ವೆಚ್ಚವಾಗಿದ್ದು 46,444 ರೂ. ಸಾಮಗ್ರಿ ವೆಚ್ಚವನ್ನು ಒಳಗೊಂಡಿರುತ್ತದೆ.
Narega Yojana ಶೆಡ್ ನಿರ್ಮಾಣಕ್ಕೆ ಅರ್ಜಿ ಎಲ್ಲಿ ಅರ್ಜಿ ಸಲ್ಲಿಸಬೇಕು:
ಈ ಯೋಜನೆಯಡಿ ಜಾನುವಾರು ಸಾಕಾಣಿಕೆ ಶೆಡ್ ನಿರ್ಮಾಣ ಮಾಡಿಕೊಳ್ಳಲು ಆಸಕ್ತಿಯಿರುವ ರೈತರು ತಮ್ಮ ಪಂಚಾಯತಿ ಗೆ ಭೇಟಿ ನೀಡಿ. ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು:
ಅರ್ಜಿದಾರರಿಗೆ ಕನಿಷ್ಠ18 ವರ್ಷ ಪೂರೈಸಿರಬೇಕು.
ಗ್ರಾಮೀಣ ಭಾಗದಲ್ಲಿ ವಾಸಿಸುವ ರೈತರು ಅರ್ಜಿ ಸಲ್ಲಿಸಬಹುದು.
BPL ಕಾರ್ಡ್ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರು.
ಈ ಯೋಜನೆಯಡಿ ಸೌಲಭ್ಯ ಪಡೆಯಲು ಜಾಬ್ ಕಾರ್ಡ ಹೊಂದಿರಬೇಕು.
ಅರ್ಜಿದಾರರು ಕನಿಷ್ಟ 4 ಜಾನುವಾರುಗಳನ್ನು ಹೊಂದಿರಬೇಕಾಗುತ್ತದೆ.
ಸಂಬಂಧಪಟ್ಟ ಪಶುವೈದ್ಯಾಧಿಕಾರಿಗಳಿಂದ ಜಾನುವಾರು ಸಾಕಾಣಿಕೆ ದೃಡೀಕರಣ ಪ್ರಮಾಣ ಪತ್ರ ಹೊಂದಿರಬೇಕು.
ಇದನ್ನೂ ಓದಿ: ಸರ್ಕಾರದಿಂದ ಜನಸಾಮಾನ್ಯರಿಗೆ 5 ಲಕ್ಷ ರೂ. ಗಿಫ್ಟ್ ಈ ಯೋಜನೆ ಪಡೆಯೋದು ಹೇಗೆ?
ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:
1) ಅರ್ಜಿದಾರರ ಆಧಾರ್ ಕಾರ್ಡ್ (aadhar card).
2) ರೇಶನ್ ಕಾರ್ಡ(Ration Card)
3) ಜಾಬ್ ಕಾರ್ಡ (Job Card)
4) ಜಾನುವಾರು ಸಾಕಾಣಿಕೆ ದೃಡೀಕರಣ
ಪ್ರಮಾಣ ಪತ್ರ
5) ಬ್ಯಾಂಕ್ ಪಾಸ್ ಬುಕ್ (Bank Pass Book)
6) ಜಾತಿ ಮತ್ತು ಆಧಾಯ ಪ್ರಮಾಣ ಪತ್ರ (Caste and Income)
ಹೆಚ್ಚಿನ ಮಾಹಿತಿಗಾಗಿ:
ಸಹಾಯವಾಣಿ ಸಂಖ್ಯೆ: 1800 425 8666
ವೆಬ್‌ಸೈಟ್ ವಿಳಾಸ: ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗೂಗಲ್ ಪೇ ಮೂಲಕ 1 ಲಕ್ಷ ರೂ. ವರೆಗೆ ತ್ವರಿತ ಲೋನ್ ಪಡೆಯಿರಿ…!