1130 ಫೈರ್ ಮ್ಯಾನ್ & ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ | Central Industrial Security Force Constable Recruitment 2024

WhatsApp Group Join Now
Telegram Group Join Now

ಪಿಯುಸಿ ಪಾಸಾಗಿರುವವರು ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಯಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಮತ್ತು ಫೈರ್ ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ.

ಹುಡುಕುತ್ತಿರುವ ಅಭ್ಯರ್ಥಿಗಳು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF Recruitment) ಯಲ್ಲಿ ಕಾನ್ಸ್ಟೇಬಲ್ ಮತ್ತು ಫೈರ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

Industrial Security Force Constable Recruitment 2024:

ಒಟ್ಟು ಹುದ್ದೆಗಳ ಸಂಖ್ಯೆ: 1130

ಹುದ್ದೆಗಳ ಹೆಸರು: ಕಾನ್ಸ್ಟೇಬಲ್, ಫೈರ್ ಮ್ಯಾನ್

ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 33

ವಿದ್ಯಾರ್ಹತೆ:
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು.

ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೇತನ 21700 ರಿಂದ 69100 ರೂ. (ಪೇ ಲೆವೆಲ್ 3) ನೀಡಲಾಗುತ್ತದೆ.

ವಯೋಮಿತಿ:
ಸಿಐಎಸ್‌ಎಫ್‌ ಕಾನ್ಸ್‌ಟೇಬಲ್ ನೇಮಕಾತಿ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು, ಗರಿಷ್ಠ ವಯಸ್ಸು 23 ವರ್ಷ ಮೀರಿರಬಾರದು.

ಇದನ್ನೂ ಓದಿ: ಸರ್ಕಾರದಿಂದ ಜನಸಾಮಾನ್ಯರಿಗೆ 5 ಲಕ್ಷ ರೂ. ಗಿಫ್ಟ್​ ಈ ಯೋಜನೆ ಪಡೆಯೋದು ಹೇಗೆ?

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 03 ವರ್ಷ
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ: 05 ವರ್ಷ

ಅರ್ಜಿ ಶುಲ್ಕ:
ಸಾಮಾನ್ಯ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 100 ರೂ.
ಪ.ಜಾತಿ, ಪ.ಪಂಗಡ (SC/ST) ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್‌

Industrial Security Force Constable Recruitment ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದೈಹಿಕ ಸಹಿಷ್ಣುತೆ ಪರೀಕ್ಷೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ದಾಖಲೆಗಳ ಪರಿಶೀಲನೆ
ಮೆಡಿಕಲ್ ಟೆಸ್ಟ್‌

ಇದನ್ನೂ ಓದಿ: ರೈಲ್ವೆ ಸ್ಟೇಷನ್​ ಮಾಸ್ಟರ್ ಮತ್ತು ಲೋಕೊ ಪೈಲಟ್ ಹುದ್ದೆಗಳ ನೇಮಕಾತಿ

ಲಿಖಿತ ಪರೀಕ್ಷೆ ಭಾಷೆಗಳು:
ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ. ಪರೀಕ್ಷೆ ಅವಧಿ 120 ನಿಮಿಷದ ಪರೀಕ್ಷೆ ಇರುತ್ತದೆ. ಓಎಂಆರ್‌ ಶೀಟ್‌ ಆಧಾರಿತ ಅಥವಾ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳು:
ಅರ್ಜಿದಾರರ ಆಧಾರ್ ಕಾರ್ಡ್
ಜನ್ಮ ದಿನಾಂಕ ದಾಖಲೆ
ಎಸ್‌ಎಸ್‌ಎಲ್‌ಸಿ / ತತ್ಸಮಾನ ವಿದ್ಯಾರ್ಹತೆ ಅಂಕ ಪಟ್ಟಿ
ದ್ವಿತೀಯ ಪಿಯುಸಿ ಅಂಕಪಟ್ಟಿ
ಪಾಸ್‌ಪೋರ್ಟ್‌ ಅಳತೆ ಪೋಟೋ
ಇತರೆ ದಾಖಲೆಗಳು

ಇದನ್ನೂ ಓದಿ: ಗ್ರಾಮ ಪಂಚಾಯತಿಯಲ್ಲಿ ಗ್ರಂಥಾಲಯ ಮೇಲ್ವಿಚಾರಕರು ನೇಮಕಾತಿ 2024

ಪ್ರಮುಖ ದಿನಾಂಕಗಳು:
ಆನ್‌ಲೈನ್‌ ಅರ್ಜಿ ಸ್ವೀಕರಿಸಲು ಆರಂಭಿಕ ದಿನಾಂಕ: 31-08-2024
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-09-2024

Industrial Security Force Constable Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ : cisfrectt.cisf.gov.in

WhatsApp Group Join Now
Telegram Group Join Now

Leave a Comment