ಕೇರಳದ ಕೊಚ್ಚಿಯ ಶಿಪ್‌ಯಾರ್ಡ್ ಲಿಮಿಟೆಡ್ (Cochin Shipyard Limited)ನಲ್ಲಿ ಖಾಲಿ ಇರುವ ಶೀಟ್ ಮೆಟಲ್ ವರ್ಕರ್, ವೆಲ್ಡರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯು ಆಹ್ವಾನಿಸಲಾಗಿದೆ.
ಕೇರಳದ ಕೊಚ್ಚಿಯ ಶಿಪ್‌ಯಾರ್ಡ್ ಲಿಮಿಟೆಡ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಹುದ್ದೆಗಳಿವೆ, ವೇತನ ಎಷ್ಟು, ವಯೋಮಿತಿ ಏನು, ವಿದ್ಯಾರ್ಹತೆ ಏನಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಸೇರಿದಂತೆ ವಿವಿಧ ವಿವರವನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ಹೆಸರು: ಶೀಟ್ ಮೆಟಲ್ ವರ್ಕರ್, ವೆಲ್ಡರ್, ಮೆಕ್ಯಾನಿಕಲ್ ಡೀಸೆಲ್, ಪ್ಲಂಬರ್
ಒಟ್ಟು ಹುದ್ದೆಗಳ ಸಂಖ್ಯೆ: 224
ಉದ್ಯೋಗದ ಸ್ಥಳ: ಕೊಚ್ಚಿ (ಕೇರಳ)
Cochin Shipyard Limited Recruitment 2024-2025 ಹುದ್ದೆಗಳ ಸಂಖ್ಯೆ:
- ಶೀಟ್ ಮೆಟಲ್ ವರ್ಕರ್: 42
- ಇನ್ಸ್ಟ್ರುಮೆಂಟ್ ಮೆಕ್ಯಾನಿಕ್: 38
- ಎಲೆಕ್ಟ್ರಿಷಿಯನ್: 36
- ಎಲೆಕ್ಟ್ರಾನಿಕ್ ಮೆಕ್ಯಾನಿಕ್: 32
- ಪ್ಲಂಬರ್: 20
- ಪೈಂಟರ್: 17
- ಮೆಕ್ಯಾನಿಸ್ಟ್: 13
- ಮೆಕ್ಯಾನಿಕಲ್ ಡೀಸೆಲ್: 11
- ಶಿಪ್ ರೈಟ್ ವುಡ್: 07
- ಮೆಕ್ಯಾನಿಕ್ ಮೋಟಾರು ವಾಹನ: 05
- ವೆಲ್ಡರ್: 02
- ಫಿಟ್ಟರ್: 01
ಶೈಕ್ಷಣಿಕ ವಿದ್ಯಾರ್ಹತೆ:
ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ (SSLC) ಮತ್ತು ಐಟಿಐ (ITI) ಉತ್ತೀರ್ಣರಾಗಿರಬೇಕು. ಜತೆಗೆ ಕನಿಷ್ಠ 3 ವರ್ಷಗಳ ಕಾರ್ಯಾನುಭವವನ್ನು ಹೊಂದಿರಬೇಕು.
ವಯೋಮಿತಿ:
ಕೊಚ್ಚಿಯ ಶಿಪ್‌ಯಾರ್ಡ್ ಲಿಮಿಟೆಡ್ ಅಧಿಸೂಚನೆ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷದೊಳಗೆ ಇರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ
ಅರ್ಜಿ ಶುಲ್ಕ:
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು: ಅರ್ಜಿ ಶುಲ್ಕ ಇರುವುದಿಲ್ಲ.
ಇತರ ಎಲ್ಲ ಅಭ್ಯರ್ಥಿಗಳು: 600 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರನ್ನು ಅಬ್ಜೆಕ್ಟಿವ್ ಟೈಪ್ ಆನ್‌ಲೈನ್ ಪರೀಕ್ಷೆ, ಪ್ರಾಕ್ಟಿಕಲ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ:
ಕೊಚ್ಚಿಯ ಶಿಪ್‌ಯಾರ್ಡ್ ಲಿಮಿಟೆಡ್ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು 23,300 ರೂ. ವೇತನವನ್ನು ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 16 ಡಿಸೆಂಬರ್ 2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಡಿಸೆಂಬರ್ 2024
Cochin Shipyard Limited Recruitment 2024-2025 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ಓದಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: cochinshipyard.in
ಮಹಾನಗರ ಮಾಲಿಕೆಯಲ್ಲಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ
ಕಾರ್ಮಿಕರ ಮಕ್ಕಳಿಗೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ