ಕಾಫಿ ಬೋರ್ಡ್ ಆಫ್ ಇಂಡಿಯಾ ಕಾಫಿ ಸಂಶೋಧನಾ ಉಪ ಕೇಂದ್ರ ಕೊಡಗು (Coffee Board) ನಲ್ಲಿ ಖಾಲಿ ಇರುವ ಯುವ ವೃತ್ತಿಪರ, ನುರಿತ ಸಹಾಯಕರು ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
ಕಾಫಿ ಬೋರ್ಡ್ ಆಫ್ ಇಂಡಿಯಾ ಉಪಕೇಂದ್ರ ಕೊಡಗು (Coffee Board of India) ಯುವ ವೃತ್ತಿಪರ, ನುರಿತ ಸಹಾಯಕರು, ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಬೇಕಾಗುವ ಮಾಹಿತಿ, ಹುದ್ದೆ ಸಂಖ್ಯೆ, ಅರ್ಜಿ ಸಲ್ಲಿಸುವ ವಿಧಾನ, ವೇತನ ಪ್ರಮುಖ ದಿನಾಂಕಗಳು, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಸೇರಿದಂತೆ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ.
Coffee Board Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಇಲಾಖೆ: ಕಾಫಿ ಸಂಶೋಧನಾ ಉಪ-ಕೇಂದ್ರ ಚೆಟ್ಟಳ್ಳಿ ಕೊಡಗು
ಹುದ್ದೆಗಳ ಹೆಸರು: ಯುವ ವೃತ್ತಿಪರ, ನುರಿತ ಸಹಾಯಕ
ಒಟ್ಟು ಹುದ್ದೆಗಳ ಸಂಖ್ಯೆ: 03
ಉದ್ಯೋಗದ ಸ್ಥಳ: ಕೊಡಗು (ಕರ್ನಾಟಕ)
ಹುದ್ದೆಗಳ ಸಂಖ್ಯೆ:
ಯುವ ವೃತ್ತಿಪರರು (Young Professional): 0 2
ನುರಿತ ಸಹಾಯಕ (Skill Assistant): 01
ವಿದ್ಯಾರ್ಹತೆ:
ಕಾಫಿ ಬೋರ್ಡ್ ಕೊಡಗು ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಥವಾ ಸಂಸ್ಥೆಯಿಂದ ನುರಿತ ಸಹಾಯಕ ಹುದ್ದೆಗೆ 10 ನೇ ತರಗತಿ ಮತ್ತು ಯುವ ವೃತ್ತಿಪರರು ಹುದ್ದೆಗೆ M.Sc. ವಿದ್ಯಾರ್ಹತೆ ಹೊಂದಿರಬೇಕು.
Coffee Board Recruitment 2024 ವಯೋಮಿತಿ:
ಕಾಫಿ ಬೋರ್ಡ್ ನೇಮಕಾತಿ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 35 ವರ್ಷ ವಯಸ್ಸು ಮೀರಿರಬಾರದು.
ವೇತನ ಶ್ರೇಣಿ:
ಕಾಫಿ ಬೋರ್ಡ್ ನೇಮಕಾತಿ ಪ್ರಕಾರ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 12,000 ರಿಂದ 21,000 ರೂ. ವೇತನವನ್ನು ನೀಡಲಾಗುತ್ತದೆ.
ಆಯ್ಕೆ ವಿಧಾನ:
ಕಾಫಿ ಬೋರ್ಡ್ ಅಧಿಸೂಚನೆಯ ಪ್ರಕಾರ, ಯುವ ವೃತ್ತಿಪರ, ನುರಿತ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಸಲ್ಲಿಸುವ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಆಗಸ್ಟ್ 08, 2024 ರಂದು ಮೂಲ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಮತ್ತು ಎರಡು ಪಾಸ್‌ಪೋರ್ಟ್ ಸೈಜ್ ಪೋಟೋಗಳೊಂದಿಗೆ ಮತ್ತು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗೆ ನೀಡಿರುವ ವಿಳಾಸಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ವಿಳಾಸ:
Office of Deputy Director (Research),
Coffee Research Sub Station,
Chettalli, Kodagu District, Karnataka
(ಉಪ ನಿರ್ದೇಶಕರು (ಸಂಶೋಧನಾ) ಕಾಫಿ ಸಂಶೋಧನಾ ಉಪ ಕೇಂದ್ರ, ಚೆಟ್ಟಳ್ಳಿ, ಕೊಡಗು ಕರ್ನಾಟಕ)
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯಾದ ದಿನಾಂಕ: 23-07-2024
ಸಂದರ್ಶನದ ದಿನಾಂಕ: 08/08/2024
Coffee Board Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: coffeeboard.gov.in