Daali Dhananjay and Dhanyatha: ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಅವರುಗಳು ಶೀಘ್ರವೇ ಹಸೆಮಣೆ ಏರಲಿದ್ದಾರೆ ಇವತ್ತು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ಡಾಲಿ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ ಹಾಗೂ ಲಗ್ನಪತ್ರಿಕೆ ಬರೆಸೋ ಶಾಸ್ತ್ರವೂ ನಡೆದಿದೆ.
ನಟ ರಾಕ್ಷಸ ಡಾಲಿ ಧನಂಜಯ್ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ವೈದ್ಯೆ ಧನ್ಯತಾ ಜೊತೆಗೆ ವಿವಾಹಕ್ಕೆ ಸಂಬಂಧಿಸಿದಂತೆ ಡಾಲಿ ರಾಜ್ಯೋತ್ಸವದ ದಿನದಂದೆ ತಮ್ಮ ಚಿತ್ರಗಳನ್ನು ಹಂಚಿಕೊಂಡಿದರು.
ನಿಶ್ಚಿತಾರ್ಥ ಸಂಭ್ರಮದ ನಟ ಡಾಲಿ ಧನಂಜಯ ಮತ್ತು ಧನ್ಯತಾ ಜೋಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಧನಂಜಯ ಅವರ ಅರಸೀಕೆರೆಯ ಕಾಳೇನಹಳ್ಳಿಯಲ್ಲಿಯ ಮನೆಯಲ್ಲಿ ಮದುವೆ ಸಮಭ್ರಮ ಜೋರಾಗಿ ನಡೆಯುತ್ತಿದೆ.
ಲಗ್ನ ಬರೆಸುವ ಶಾಸ್ತ್ರವೂ ಇಂದು ನಡೆದಿದ್ದು, ಗುರು-ಹಿರಿಯರು, ಬಂಧುಗಳ ಎದುರು ಮದುವೆ ದಿನಾಂಕವನ್ನೂ ಸಹ ನಿಗದಿ ಮಾಡಲಾಗಿದೆ. ಡಾಲಿ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ 2025ರ, ಫೆಬ್ರವರಿ 16 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಮದುವೆ ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಡಾಲಿ ಧನಂಜಯ್ ಮದುವೆ ಪಿಕ್ಸ್ ಇಲ್ಲದೆ ನೋಡಿ ಸುಂದರ ಜೋಡಿ ಪೋಟೋ