Dakshina Kannada Zilla Panchayat Recruitment 2024: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಕೌಶಲ್ಯ ಮಿಷನ್, ಖಾಲಿ ಇರುವ ಮಲ್ಟಿಟಾಸ್ಕಿಂಗ್ ಅಫಿಷಿಯಲ್ಸ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಾರ್ಯಾಲಯ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಹುದ್ದೆಗಳಿವೆ, ವೇತನ ಎಷ್ಟು, ವಯೋಮಿತಿ ಏನು, ವಿದ್ಯಾರ್ಹತೆ ಏನಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಸೇರಿದಂತೆ ವಿವಿಧ ವಿವರವನ್ನು ಕೆಳಗೆ ನೀಡಲಾಗಿದೆ.
Dakshina Kannada Zilla Panchayat Recruitment 2024
ಹುದ್ದೆಗಳ ಹೆಸರು: ಮಲ್ಟಿಟಾಸ್ಕಿಂಗ್ ಅಫಿಷಿಯಲ್ಸ್
ಒಟ್ಟು ಹುದ್ದೆಗಳ ಸಂಖ್ಯೆ: 01
ಉದ್ಯೋಗದ ಸ್ಥಳ: ದಕ್ಷಿಣ ಕನ್ನಡ
ಶೈಕ್ಷಣಿಕ ವಿದ್ಯಾರ್ಹತೆ:
ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದ ಪದವಿಯೊಂದಿಗೆ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಕಂಪ್ಯೂಟರ್ ಜ್ಞಾನ, ಎಂ.ಎಸ್. ವರ್ಡ್, ಎಕ್ಸೆಲ್, ಪಿ.ಪಿ.ಟಿ ಬಗ್ಗೆ ಪರಿಣಿತಿಯನ್ನು ಹೊಂದಿರಬೇಕು. ಹಾಗೂ ಕನಿಷ್ಠ ಮೂರು ವರ್ಷಗಳ ಕಾರ್ಯಾನುಭವವನ್ನು ಹೊಂದಿರುವುದು ಕಡ್ಡಾಯ.
ವಯೋಮಿತಿ:
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 45 ವರ್ಷದೊಳಗೆ ಇರಬೇಕು.
ವೇತನಶ್ರೇಣಿ
ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 25,000 ರಿಂದ 30,000 ಸಂಬಳವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ
ಅಭ್ಯರ್ಥಿಗಳು ಪಡೆದಿರುವ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಕಾರ್ಯಾನುಭವದ ಆಧಾರದ ಮೇಲೆ ಸಂದರ್ಶನ ನಡೆಸುವ ಮೂಲಕ ಅಭ್ಯರ್ಥಿಗಳನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸ್ವ ವಿವರ (Resume), ವಿದ್ಯಾರ್ಹತೆ, ಕಾರ್ಯಾನುಭವ ಹಾಗೂ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇ-ಮೇಲ್ ವಿಳಾಸ skillmnglr@gmail.com ಕ್ಕೆ 30 ಡಿಸೆಂಬರ್, 2024 ರೊಳಗೆ ಕಳುಹಿಸಬೇಕು.
ಇದನ್ನೂ ಓದಿ: ಕೇಂದ್ರೀಯ ಉಗ್ರಾಣ ನಿಗಮದಲ್ಲಿ ಉದ್ಯೋಗ 1 ಲಕ್ಷಕ್ಕೂ ಅಧಿಕ ವೇತನ
ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 13 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಡಿಸೆಂಬರ್ 2024
ಪ್ರಮುಖ ಲಿಂಕ್ಗಳು:
ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: zpdk.karnataka.gov.in
ಇದನ್ನೂ ಓದಿ: ಮಹಾನಗರ ಮಾಲಿಕೆಯಲ್ಲಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ 2024