DHFWS Kolar Recruitment 2024 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ

WhatsApp Group Join Now
Telegram Group Join Now

DHFWS Kolar Recruitment 2024: ರಾಷ್ಟ್ರೀಯ ಕ್ಷಯರೋಗ ನಿವಾರಣಾ ಕಾರ್ಯಕ್ರಮದಡಿಯಲ್ಲಿ ಬಂಗಾರಪೇಟೆ ಮತ್ತು ಕೆಜೆಎಫ್ ಚಿಕಿತ್ಸಾ ಘಟಕದಲ್ಲಿ ಖಾಲಿ ಇರುವ ಹಿರಿಯ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕರ (STLS) ಹುದ್ದೆಗಳನ್ನು ಭರ್ತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಹುದ್ದೆ ಹೆಸರು : ಹಿರಿಯ ಕ್ಷಯರೋಗ ಪ್ರಯೋಗಶಾಲಾ ಮೇಲ್ವಿಚಾರಕರು

ಉದ್ಯೋಗದ ಸ್ಥಳ: ಕೋಲಾರ (ಕರ್ನಾಟಕ)

ಒಟ್ಟು ಹುದ್ದೆಗಳ ಸಂಖ್ಯೆ: 01

DHFWS Kolar Recruitment 2024 ಶೈಕ್ಷಣಿಕ ಅರ್ಹತೆ:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ದ್ವೀತಿಯ ಪಿಯುಸಿ ಉತ್ತೀರ್ಣರಾಗಿರಬೇಕು. ಪದವೀಧರ/ ಡಿಪ್ಲೊಮಾ ಪ್ರಯೋಗಶಾಲಾ ತಂತ್ರಜ್ಞರ (ಮೆಡಿಕಲ್) ವಿದ್ಯಾರ್ಹತೆ ಹೊಂದಿರಬೇಕು. ಪ್ಯಾರಾ ಮೆಡಿಕಲ್ ಬೋರ್ಡನಲ್ಲಿ ನೋಂದಣಿಯಾಗಿರಬೇಕು. ದ್ವಿಚಕ್ರ ವಾಹನ ಚಲಿಸುವ ಲೈಸೆನ್ಸ್ ಹೊಂದಿರಬೇಕು. ಕನಿಷ್ಠ 2 ತಿಂಗಳ ಕಂಪ್ಯೂಟರ್ ತರಬೇತಿ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು.

ವೇತನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 21,000 ವೇತನ ನೀಡಲಾಗುತ್ತದೆ.

ಅರ್ಜಿ ನಮೂನೆ ದೊರೆಯುವ ಸ್ಥಳ:
ಜಿಲ್ಲಾ ಕ್ಷಯರೋಗ ನಿವಾರಣಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣ, ಕೆ.ಎನ್.ಸ್ಯಾನಿಟೋರಿಯಂ ಕಟ್ಟಡ, ಬಂಗಾರಪೇಟೆ ರಸ್ತೆ, ಕೋಲಾರ – 563102.

ಸೂಚನೆ: ಈ ಮೇಲಿನ ವಿಳಾಸದಿಂದ ಅರ್ಜಿ ನಮೂನೆಯನ್ನು ಪಡೆದು, ಅರ್ಜಿ ಭರ್ತಿ ಮಾಡಿ ದಾಖಲೆಗಳನ್ನು ಸ್ವಯಂ ದೃಢೀಕರಣ ಮಾಡಿ ಲಕೋಟೆಯಲ್ಲಿ ಅರ್ಜಿಸಲ್ಲಿಸಬೇಕು.

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ನವೆಂಬರ್ 20, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 02, 2024

DHFWS Kolar Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ:  kolar.nic.in

ವಿದ್ಯಾರ್ಥಿಗಳಿಗೆ ಉಚಿತ IAS ಕೋಚಿಂಗ್ ಜೊತೆಗೆ ತಿಂಗಳಿಗೆ 15,000 ರೂ. ಶಿಷ್ಯವೇತನ

ಭೂಮಾಪಕರು ಹುದ್ದೆಗಳ ನೇಮಕಾತಿ 2024

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net