2024 ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು, ಆಡಿಯೊಮೆಟ್ರಿಕ್ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (DHFWS) ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಪ್ರಮುಖ ವಿವರಗಳು ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ, ವಯೋಮಿತಿ, ಅಪ್ಲಿಕೇಶನ್ ಶುಲ್ಕ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ, ಅಧಿಕೃತ ಅಧಿಸೂಚನೆ, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಹೆಚ್ಚಿನ ವಿವರಗಳನ್ನು ಕೆಳಗೆ ನೀಡಲಾಗಿದೆ ಸಂಪೂರ್ಣ ಓದಿ ಅರ್ಜಿ ಸಲ್ಲಿಸಿ.
DHFWS Vijayanagara Recruitment 2024:
ಹುದ್ದೆಗಳ ಹೆಸರು: ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು, ಆಡಿಯೊಮೆಟ್ರಿಕ್ ಸಹಾಯಕರು.
ಉದ್ಯೋಗದ ಸ್ಥಳ: ವಿಜಯನಗರ ಜಿಲ್ಲೆ ಕರ್ನಾಟಕ
ಒಟ್ಟು ಹುದ್ದೆಗಳ ಸಂಖ್ಯೆ: 53
ಹುದ್ದೆಗಳ ಮಾಹಿತಿ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ |
ಸ್ತ್ರೀರೋಗ-ಪ್ರಸೂತಿ ತಜ್ಞರು | 03 | 1,30,000 ರೂ. |
ಮಕ್ಕಳ ತಜ್ಞರು | 04 | 1,30,000 ರೂ. |
ವೈದ್ಯಾಧಿಕಾರಿಗಳು | 26 | 46,895-50,000 ರೂ. |
ಆಡಿಯೊಮೆಟ್ರಿಕ್ ಸಹಾಯಕರು | 01 | 15,000 ರೂ. |
ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು | 01 | 35,000 ರೂ. |
ಶ್ರವಣದೋಷವುಳ್ಳ ಮಕ್ಕಳ ಬೋಧಕರು | 01 | 15,000 ರೂ. |
ಶುಶ್ರೂಷಕಿಯರು | 10 | 14,187 ರೂ. |
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ | 02 | 15,397 ರೂ. |
ಡಿ.ಇ.ಐ.ಸಿ ಮ್ಯಾನೇಜರ್ | 01 | 17,500 ರೂ. |
ಮನೋರೋಗ ತಜ್ಞರು | 02 | 1,10,000 ರೂ. |
ಪಿ.ಹೆಚ್.ಸಿ.ಓ | 01 | 14,044 ರೂ. |
ಆರೋಗ್ಯ ನೀರಿಕ್ಷಣಾಧಿಕಾರಿ | 01 | 15,397 ರೂ. |
ಶೈಕ್ಷಣಿಕ ಅರ್ಹತೆ:
ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಸ್.ಎಸ್.ಎಲ್.ಸಿ / ಪಿಯುಸಿ, ಡಿಜಿಓ/ ಡಿ.ಎನ್.ಬಿ/ ಎಂ.ಡಿ (ಓಬಿಜಿ), ಎಂ.ಬಿ.ಬಿ.ಎಸ್, ಎಂ.ಡಿ/ ಡಿ.ಸಿ.ಹೆಚ್, ಎಂ.ಕಾಂ ಪದವಿ, ಡಿಪ್ಲೊಮಾ, ಜಿ.ಎನ್.ಎಮ್ ಅಥವಾ ಬಿ.ಎಸ್.ಸಿ ನರ್ಸಿಂಗ್ ಪದವಿ, ಸ್ನಾತಕೋತ್ತರ ಪದವಿ, ಡಿ.ಪಿ.ಎಮ್. ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ:
ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ವಿವಿಧ ಹುದ್ದೆಗಳಿಗೆ ಗರಿಷ್ಠ 70 ವರ್ಷ ಮೀರಿರಬಾರದು.
ಆಯ್ಕೆ ವಿಧಾನ :
ಅಭ್ಯರ್ಥಿಗಳ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡಾವಾರು ಮೆರಿಟ್ ಲಿಸ್ಟ್ ತಯಾರಿಸಲಾಗುವುದು ಮತ್ತು ಹೊಸ ರೋಸ್ಟರ್ ಆಧಾರದ ಮೇಲೆ ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಸೂಚನೆ ನೋಡಿ.
ಅರ್ಜಿ ಶುಲ್ಕ :
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಛೇರಿ,
ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ,
60 ಹಾಸಿಗೆಯ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಭಾಗ,
ಮಸೀದಿ ಹತ್ತಿರ, ಹೊಸಪೇಟೆ.
ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : ಜುಲೈ 20, 2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : ಜುಲೈ 26, 2024
DHFWS Vijayanagara Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: vijayanagara.nic.in