ರೈತರಿಗೆ ಗುಡ್ ನ್ಯೂಸ್ ಶೇ. 90ರಷ್ಟು ಸಹಾಯಧನದಲ್ಲಿ ಹನಿ ನೀರಾವರಿ ಯೋಜನೆ | Drip Irrigation subsidy

WhatsApp Group Join Now
Telegram Group Join Now

Drip Irrigation subsidy: ತೋಟಗಾರಿಕೆ ಇಲಾಖೆಯಿಂದ 2024-25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಕೆಗೆ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಯೋಜನೆಯ ಪಡೆಯಲು ಯಾರೆಲ್ಲ ಅರ್ಹರೆಂದರೆ ಸಾಗುವಳಿ ಭೂಮಿಯನ್ನು ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ (SC/ST) ಹಾಗೂ ಎಲ್ಲಾ ಸಾಮಾನ್ಯ ವರ್ಗದ ರೈತರಿಗೆ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆಗೆ ಶೇಕಡಾ 75 ರಿಂದ 90% ರಷ್ಟು ಸಹಾಯಧನ ನೀಡುತ್ತಿದ್ದು. ಆಸಕ್ತಿಯುಳ್ಳ ರೈತರು ಸಹಾಯಧನ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

Drip Irrigation subsidy ಯೋಜನೆಯ ಲಾಭ:

ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಬಳಸಿ ಜಲಸಂಪನ್ಮೂಲವನ್ನು ಮಿತವ್ಯಯ ಬಳಕೆ ಮಾಡಬಹುದು.

ಈ ಸೂಕ್ಷ್ಮ ನೀರಾವರಿಯ ಪದ್ದತಿಯಿಂದ ರೈತರ ಜಮೀನುಗಳಲ್ಲಿ ನೀರಾವರಿ ಅಳವಡಿಸಲು ಪ್ರೋತ್ಸಾಹಿಸಿ ಶೇ. 50-70 ರಷ್ಟು ನೀರಿನ ಮಿತವ್ಯಯ ಮಾಡುವುದು, ವಿದ್ಯುಚ್ಛಕ್ತಿ ಮತ್ತು ಕೂಲಿ ವೆಚ್ಚ ಕಡಿಮೆ ಮಾಡಬಹುದು.

ಸೂಕ್ಷ್ಮ ನೀರಾವರಿಯಲ್ಲಿ ರಸಾವರಿ (Fertigation) ಪದ್ಧತಿಯ ಮೂಲಕ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ನೀಡುವುದರ ಮೂಲಕ ಶೇ 30-40 ರಷ್ಟು ರಾಸಾಯನಿಕ ಗೊಬ್ಬರಗಳ ಮಿತವ್ಯಯ ಸಾಧಿಸಲಾಗುತ್ತದೆ.

ರೈತರು ಬೆಳೆಗಳಲ್ಲಿ, ಶೇ. 30-100 ರಷ್ಟು ಹೆಚ್ಚು ಇಳುವರಿ ಹಾಗೂ ಉತ್ಪಾದಕತೆ ಸಾಧಿಸಬಹುದು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:
ನಿಗದಿತ ಅರ್ಜಿ ನಮೂನೆ.
ಆಧಾರ್ ಕಾರ್ಡ್ ಪ್ರತಿ.
ಬ್ಯಾಂಕ್ ಪಾಸ್ ಬುಕ್.
ಪಹಣಿ.
ಪೋಟೋ.
ಬಾವಿ/ಕೊಳವೆ ಬಾವಿ ದೃಡೀಕರಣ ಪತ್ರ(ಕಂದಾಯ ಇಲಾಖೆಯಿಂದ)
ಹಿಡುವಳಿ ಪ್ರಮಾಣ ಪತ್ರ(ಕಂದಾಯ ಇಲಾಖೆಯಿಂದ)
20 ರೂ ಬಾಂಡ್ ಪೇಪರ್.
ಚಿಕ್ಕು ಬಂದಿ(ಕಂದಾಯ ಇಲಾಖೆಯಿಂದ)
ವೈಯಕ್ತಿಕ ವಿವರ ಹಾಗೂ ಮೊಬೈಲ್ ನಂಬರ್‌.

ಹೆಚ್ಚಿನ ಮಾಹಿತಿಗಾಗಿ:
ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆ: 0836-284468

ರೈತರಿಗೆ ಗುಡ್ ನ್ಯೂಸ್‌ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 25,000 ರೂ. ಸಹಾಯಧನ

ರೈತರಿಗೆ ಗುಡ್ ನ್ಯೂಸ್ ಅಕ್ರಮ ಕೃಷಿಯ ಪಂಪ್ ಸೆಟ್ ಸಕ್ರಮ ಯೋಜನೆಗೆ ಮರು ಜಾರಿ ಸಿಎಂ 

ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಯೋಜನೆಗೆ ಅರ್ಜಿ ಆಹ್ವಾನ 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net