ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ | Entrepreneurship Development Training

WhatsApp Group Join Now
Telegram Group Join Now

Entrepreneurship Development Training: ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್) ಇವರ ವತಿಯಿಂದ ಸ್ವಂತ ಉದ್ಯೋಗ ಸ್ಥಾಪಿಸಲು ಇಚ್ಚಿಸುವವರಿಗೆ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ತರಬೇತಿಯಲ್ಲಿ ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ನಾಯಕತ್ವದ ಗುಣಲಕ್ಷಣಗಳು, ಸರ್ಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ, ಲೆಕ್ಕ ಪತ್ರ ನಿರ್ವಹಣೆ, ಯೋಜನಾ ವರದಿ ತಯಾರಿಕೆ ಹಾಗೂ ಉದ್ಯಮ ನಿರ್ವಹಣೆ ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲಾಗುವುದು.

Entrepreneurship Development Training ಅರ್ಹತೆಗಳು:

ಬಳ್ಳಾರಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಹಾಗೂ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು ವಯಸ್ಸು 18 ವರ್ಷ ದಿಂದ 45 ವರ್ಷದೊಳಗಿನವರು ಅರ್ಹರು.
10 ನೇ ತರಗತಿ (SSLC) ಪಾಸಾಗಿರಬೇಕು.
ಓದಲು, ಬರೆಯಲು ಬರುತ್ತಿರಬೇಕು.

ನೋಂದಣಿ ವಿಧಾನ:
ಅರ್ಜಿಯನ್ನು ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ಕಟ್ಟಡದ ಸಿಡಾಕ್‌ನ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಪಡೆಯಬಹುದು ಅಥವಾ ದೂರವಾಣಿ ಮೂಲಕ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಅಥವಾ ನೋಂದಣಿ ಮಾಡಲು ಕೊನೆಯ ದಿನಾಂಕ ನವೆಂಬರ್ 16 2024

ಹೆಚ್ಚಿನ ಮಾಹಿತಿಗಾಗಿ:
ನಗರದ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ಕಟ್ಟಡದ ಸಿಡಾಕ್‌ನ ಜಂಟಿ ನಿರ್ದೇಶಕರ ಕಚೇರಿ ಗೆ ಭೇಟಿ ನೀಡಬಹುದು ಅಥವಾ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಿಡಾಕ್‌ನ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರವಾಣಿ ಸಂಖ್ಯೆ: 9449226221, 7483538942

ಮಹಿಳೆಯರಿಗೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ ಯೋಜನೆಗೆ ಅರ್ಜಿ ಆಹ್ವಾನ

ಯುವಕ ಯುವತಿಯರಿಗೆ ಉಚಿತ ಕಂಪ್ಯೂಟರ್‌ ಟ್ಯಾಲಿ ತರಬೇತಿ ಜೊತೆಗೆ ಊಟ ವಸತಿ ಉಚಿತ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net