ಎಂಪ್ಲಾಯೀಸ್ ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಷನ್, (ESIC Karnataka Recruitment 2025) ಕರ್ನಾಟಕವು ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಅಹ೯ ಮತ್ತು ಆಸಕ್ತ ಅಭ್ಯಾಥಿ೯ಗಳು 05-ಮಾರ್ಚ್-2025 ರಂದು ವಾಕ್-ಇನ್-ಸಂದರ್ಶನಕ್ಕೆ ಹಾಜರಾಗಬಹುದು.
ಕಾರ್ಮಿಕರ ರಾಜ್ಯ ವಿಮಾ ನಿಗಮ, ಕರ್ನಾಟಕ (ಇಎಸ್‌ಐಸಿ ಕರ್ನಾಟಕ) ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ಸಂಸ್ಥೆ ಹೆಸರು: ನೌಕರರ ರಾಜ್ಯ ವಿಮಾ ನಿಗಮ ಕರ್ನಾಟಕ (ಇಎಸ್‌ಐಸಿ ಕರ್ನಾಟಕ)
ಹುದ್ದೆಗಳ ಸಂಖ್ಯೆ: 111
ಉದ್ಯೋಗ ಸ್ಥಳ: ಬೆಂಗಳೂರು, ಕಲಬುರಗಿ (ಕರ್ನಾಟಕ)
ಹುದ್ದೆ ಹೆಸರು: ಸೀನಿಯರ್ ರೆಸಿಡೆಂಟ್, ಪ್ರೊಫೆಸರ್
ಸಂಬಳ: ತಿಂಗಳಿಗೆ ರೂ.60000-238896/-
ESIC Karnataka Recruitment 2025 ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಸೀನಿಯರ್ ರೆಸಿಡೆಂಟ್ (ಬೆಂಗಳೂರು) | 16 |
ಪೂರ್ಣಕಾಲಿಕ / ಅರೆಕಾಲಿಕ ಸ್ಪೆಷಲಿಸ್ಟ್‌ಗಳು | 04 |
ಪೂರ್ಣಕಾಲಿಕ / ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್‌ಗಳು | 02 |
ಸೀನಿಯರ್ ರೆಸಿಡೆಂಟ್ (ಕಲಬುರಗಿ) | 57 |
ಪ್ರೊಫೆಸರ್ | 06 |
ಅಸೋಸಿಯೇಟ್ ಪ್ರೊಫೆಸರ್ | 14 |
ಅಸಿಸ್ಟಂಟ್ ಪ್ರೊಫೆಸರ್ | 12 |
ವಿದ್ಯಾರ್ಹತೆ
- ಸೀನಿಯರ್ ರೆಸಿಡೆಂಟ್ (ಬೆಂಗಳೂರು): ಎಂಬಿಬಿಎಸ್, ಸ್ನಾತಕೋತ್ತರ ಪದವಿ ಪಾಸ್.
- ಪೂರ್ಣಕಾಲಿಕ / ಅರೆಕಾಲಿಕ ಸ್ಪೆಷಲಿಸ್ಟ್‌ಗಳು: ಸ್ನಾತಕೋತ್ತರ ಪದವಿ ಉತ್ತೀಣ೯.
- ಪೂರ್ಣಕಾಲಿಕ / ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್‌ಗಳು: ಡಿಎಂ, ಎಂ.ಸಿಹೆಚ್, ಸ್ನಾತಕೋತ್ತರ ಪದವಿ.
- ಸೀನಿಯರ್ ರೆಸಿಡೆಂಟ್ (ಕಲಬುರಗಿ) : ಎಂಡಿ, ಎಂ.ಎಸ್, ಡಿಎನ್‌ಬಿ, ಸ್ನಾತಕೋತ್ತರ ಪದವಿ.
- ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್: ಇಎಸ್‌ಐಸಿ ಕರ್ನಾಟಕ ಅಧಿಸೂಚನೆ ಪ್ರಕಾರ, ಅಭ್ಯಾಥಿ೯ಯು ಸ್ನಾತಕೋತ್ತರ ಪದವಿಗಳ ಜೊತೆಗೆ, ಹುದ್ದೆಗೆ ಅನುಗುಣವಾಗಿ ನಿಗದಿತ ಕಾರ್ಯಾನುಭವವನ್ನು ಹೊಂದಿರಬೇಕು.
ವಯೋಮಿತಿ:
ಈ ಹುದ್ದೆಗೆ ಅಜಿ೯ ಸಲ್ಲಿಸಲು ಅಭ್ಯಾಥಿ೯ಗಳ ಕನಿಷ್ಠ ವಯಸ್ಸು 21 ವಷ೯ ಪೂರೈಸಿರಬೇಕು. ಹಾಗೂ ಗರಿಷ್ಠ ವಯೋಮಿತಿ ಕೆಳಗಿನಂತೆ ಇದೆ.
ಸೀನಿಯರ್ ರೆಸಿಡೆಂಟ್ ಹುದ್ದೆಗೆ : 45 ವಷ೯
ಸೀನಿಯರ್ ರೆಸಿಡೆಂಟ್ (ಕಲಬುರಗಿ) ಹುದ್ದೆಗೆ: 44 ವಷ೯
ಇತರೆ ಎಲ್ಲ ಹುದ್ದೆಗಳಿಗೆ ಗರಿಷ್ಠ 69 ವರ್ಷ
ಅರ್ಜಿ ಶುಲ್ಕ:
ಇತರೆ ಅಭ್ಯರ್ಥಿಗಳಿಗೆ: 300 ರೂ.
ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು: 0
ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್
ಆಯ್ಕೆ ಪ್ರಕ್ರಿಯೆ
ಸ್ಕ್ರೀನಿಂಗ್ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
ESIC Karnataka Recruitment 2025 ವೇತನ:
ಹುದ್ದೆ ಹೆಸರು | ಸಂಬಳ (ಪ್ರತಿ ತಿಂಗಳು) |
ಸೀನಿಯರ್ ರೆಸಿಡೆಂಟ್ (ಬೆಂಗಳೂರು) | ಇಎಸ್‌ಐಸಿ ಕರ್ನಾಟಕ ಮಾನದಂಡಗಳ ಪ್ರಕಾರ |
ಪೂರ್ಣಾವಧಿ/ಅರೆಕಾಲಿಕ ತಜ್ಞ | ರೂ.60000-127141/- |
ಪೂರ್ಣಾವಧಿ/ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್ | ರೂ.100000-200000/- |
ಸೀನಿಯರ್ ರೆಸಿಡೆಂಟ್ (ಕಲಬುರಗಿ) | ರೂ.136483/- |
ಪ್ರೊಫೆಸರ್ | ರೂ.238896/- |
ಅಸೋಸಿಯೇಟ್ ಪ್ರೊಫೆಸರ್ | ರೂ.158861/- |
ಸಹಾಯಕ ಪ್ರಾಧ್ಯಾಪಕ | ರೂ.136483/- |
ವಾಕ್-ಇನ್ ಇಂಟರ್‌ವ್ಯೂ (ಸಂದರ್ಶನ) ಸ್ಥಳ:
ಬೆಂಗಳೂರು: ವೈದ್ಯಕೀಯ ಅಧೀಕ್ಷಕರ ಕಚೇರಿ, ಇಎಸ್‌ಐಸಿ ಆಸ್ಪತ್ರೆ, ಪೀಣ್ಯ, 55-1-11, ಪ್ಲಾಟ್ ನಂ.1, 5ನೇ ಮುಖ್ಯರಸ್ತೆ (ಎಫ್ಟಿಐ ಕ್ಯಾಂಪಸ್), ಸರ್ವೆ ನಂ.11, ಯಶವಂತಪುರ, ಬೆಂಗಳೂರು-22.
ಕಲಬುರಗಿ: ಇಎಸ್‌ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ.
ಸೀನಿಯರ್ ರೆಸಿಡೆಂಟ್ (ಕಲಬುರಗಿ), ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ದಾಖಲೆಗಳ ಪರಿಶೀಲನೆ ದಿನಾಂಕ: 27-ಫೆಬ್ರವರಿ-2025
ಈ ಸುದ್ದಿಯನ್ನೂ ಓದಿ: ಇಂಡಿಯನ್ ನೇವಿ ಎಸ್‌ಎಸ್‌ಸಿ ಆಫೀಸರ್ ನೇಮಕಾತಿ 1,10,000 ರೂ. ವೇತನ
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ: 12-02-2025
ಹುದ್ದೆ ಹೆಸರು | ಸಂದಶ೯ನದ ದಿನಾಂಕ |
ಸೀನಿಯರ್ ರೆಸಿಡೆಂಟ್ (ಬೆಂಗಳೂರು) | 04-Mar-2025 |
ಪೂರ್ಣಕಾಲಿಕ / ಅರೆಕಾಲಿಕ ಸೂಪರ್ ಸ್ಪೆಷಲಿಸ್ಟ್‌ಗಳು, ಪೂರ್ಣಕಾಲಿಕ / ಅರೆಕಾಲಿಕ ಸ್ಪೆಷಲಿಸ್ಟ್‌ಗಳು: | 05-Mar-2025 |
ಸೀನಿಯರ್ ರೆಸಿಡೆಂಟ್ (ಕಲಬುರಗಿ), ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟಂಟ್ ಪ್ರೊಫೆಸರ್: | 28-Feb-2025 |
ESIC Karnataka Recruitment 2025 ಪ್ರಮುಖ ಲಿಂಕ್ ಗಳು:
ಸೀನಿಯರ್ ರೆಸಿಡೆಂಟ್ (ಬೆಂಗಳೂರು) ಪ್ರೊಫೆಸರ್ ಅಧಿಸೂಚನೆ & ಅಜಿ೯ ಫಾಮ್೯ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಸೀನಿಯರ್ ರೆಸಿಡೆಂಟ್ (ಕಲಬುರಗಿ) ಪ್ರೊಫೆಸರ್ ಅಧಿಸೂಚನೆ & ಅಜಿ೯ ಫಾಮ್೯ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಅಧಿಸೂಚನೆ & ಅಜಿ೯ ಫಾಮ್೯ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ಇಳಾಸ: esic.nic.in
ಈ ಸುದ್ದಿಯನ್ನೂ ಓದಿ: ಗೃಹರಕ್ಷಕ ದಳ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ