ಕೃಷಿ ಇಲಾಖೆಯಿಂದ ವಿವಿಧ ಸಬ್ಸಿಡಿ ಯೋಜನೆ ಅರ್ಜಿ ಆಹ್ವಾನ | Farmer Government Agriculture Subsidy

WhatsApp Group Join Now
Telegram Group Join Now

Farmer Government Agriculture Subsidy: 2024-25 ನೇ ಸಾಲಿನ ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣೆ, ಅಟಲ್, ಭೂಜಲ, ಪ್ರಧಾನ ಮಂತಿ ಕೃಷಿ ಸಿಂಚಾಯಿ ಯೋಜನೆ ಮತ್ತು ಕೃಷಿ ಭಾಗ್ಯ ಯೋಜನೆಗಳ ಸಹಾಯ ಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರೈತರು ತಮ್ಮ ವ್ಯಾಪ್ತಿಯ ಬರುವ ಹೋಬಳಿ ಕೇಂದ್ರದಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬಹುದು.

ಕೃಷಿ ಇಲಾಖೆಯ ಸಿಬ್ಬಂದಿ ಈ ಕುರಿತು ಮಾಹಿತಿ ನೀಡಿದ್ದು, ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನದಲ್ಲಿ ಪವ‌ರ್ ಟಿಲ್ಲರ್, ರೋಟಿವೇಟ‌ರ್, ಎಂ.ಬಿ.ನೇಗಿಲು, ಕಲ್ಟಿವೇಟರ್, ಸಸ್ಯ ಸಂರಕ್ಷಣಾ ಔಷಧಿ ಸಿಂಪಡಿಸುವ ಯಂತ್ರ, ಚಾಪ್ ಕಟ್ಟರ್ ಇನ್ನಿತರೆ ಪರಿಕಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದರು.

Farmer Government Agriculture Subsidy

ಸಾಮಾನ್ಯವರ್ಗದ ರೈತರಿಗೆ 50% ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ 90 ರಷ್ಟು ರಿಯಾಯಿತಿ ದರದಲ್ಲಿ ಗರಿಷ್ಠ 1 ಲಕ್ಷ ರೂ. ವರೆಗೆ ಕೃಷಿ ಸಲಕರಣೆಗಳನ್ನು ಖರೀದಿಸಲು ಸಹಾಯಧನ ನೀಡಲಾಗುತ್ತದೆ.

ಕೃಷಿ ಸಂಸ್ಕರಣೆ ಯೋಜನೆಯಡಿ 8*6 ಮೀಟರ್ ಅಳತೆಯ ಟಾರ್ಪಲಿನ್, ರಾಗಿ ಕ್ಲೀನಿಂಗ್ ಮಿಷನ್, ಪಲ್ವರೈಜರ್ ಹಾಗೂ ಪ್ಲೋರ್ ಮಿಲ್, ಎಣ್ಣೆಗಾಣ ಹಾಗೂ ಇತರೆ ಪರಿಕರಗಳನ್ನು ಸಾಮಾನ್ಯವರ್ಗದ ರೈತರಿಗೆ ಶೇ 50ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಶೇ 90ರಷ್ಟು ರಿಯಾಯಿತಿ ದರದಲ್ಲಿ ಅಥವಾ ಗರಿಷ್ಠ 1 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.

ಅಟಲ್ ಭೂಜಲ ಯೋಜನೆಯಡಿ ತುಂತುರ ನೀರಾವರಿ ಘಟಕವನ್ನು ನಿರ್ಮಿಸಲು 90% ರಷ್ಟು ರಿಯಾಯಿತಿ ದರದಲ್ಲಿ ಎಲ್ಲಾ ವರ್ಗದ ರೈತರಿಗೆ ಹಾಗೂ ಹನಿ ನೀರಾವರಿ ಘಟಕಗಳನ್ನು ನಿರ್ಮಿಸಲು ಸಾಮಾನ್ಯ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ರೈತರಿಗೆ ಶೇ 90ರಷ್ಟು ರಿಯಾಯಿತಿ ದರದಲ್ಲಿ ಹಾಗೂ ಸಾಮಾನ್ಯ ವರ್ಗದ ದೊಡ್ಡ ರೈತರಿಗೆ 45% ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ: SBI ಬ್ಯಾಂಕ್ ವತಿಯಿಂದ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 70,000 ರೂ. ಸ್ಕಾಲರ್ಶಿಪ್

ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಬೇಲಿ ತಂತಿ, ಪಾಲಿಥೀನ್ ಹೊದಿಕೆ, ಡೀಸೆಲ್ ಪಂಪ್‌ಸೆಟ್ ಮತ್ತು ಲಘು ನೀರಾವರಿ ಘಟಕ ಪ್ಯಾಕೇಜ್ ರೂಪದಲ್ಲಿ ಪಡೆಯಲು ಸಾಮಾನ್ಯ ವರ್ಗದ ರೈತರಿಗೆ 80 %ರಷ್ಟು ಮತ್ತು ಪರಿಶಿಷ್ಟ ಜಾತಿ ಪಂಗಡದ ರೈತರಿಗೆ 90% ರಷ್ಟು ರಿಯಾಯಿತಿ ದರದಲ್ಲಿ ಪಡೆಯಬಹುದು.

ಪ್ರಮುಖ ದಾಖಲೆಗಳು:
ಪಹಣಿ
ಆಧಾರ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ರೈತರು ಜಾತಿ ಪ್ರಮಾಣ ಪತ್ರ
ನಿರಪೇಕ್ಷಣಾ ಪ್ರಮಾಣ ಪತ್ರ
ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಇದನ್ನೂ ಓದಿ: ರಿಲಯನ್ಸ್‌ ಫೌಂಡೇಶನ್‌ ವತಿಯಿಂದ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ವಿದ್ಯಾರ್ಥಿವೇತನ

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment