ಯುವಕ, ಯುವತಿಯರಿಗೆ ಗುಡ್ ನ್ಯೂಸ್ ಉಚಿತ ಹೊಲಿಗೆ, ವಿಡಿಯೋಗ್ರಾಫಿ ತರಬೇತಿಗೆ ಅರ್ಜಿ ಅಹ್ವಾನ | Free Sewing Videography Training Karnataka

WhatsApp Group Join Now
Telegram Group Join Now

Free sewing videography training karnataka: ಯುವಜನರನ್ನು ಉತ್ತೇಜಿಸುವ ದೃಷ್ಠಿಯಿಂದ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯೋಜನೆಯಡಿಯಲ್ಲಿ ಯುವಕ, ಯುವತಿಯರಿಗೆ ಉಚಿತ ಹೊಲಿಗೆ ತರಬೇತಿ ಹಾಗೂ ವಿಡಿಯೋಗ್ರಾಫಿ ತರಬೇತಿ ಶಿಬಿರಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಯುವಕ, ಯುವತಿಯರನ್ನು ಸ್ವಾವಲಂಬಿಯಾಗಲು ಉತ್ತೇಜಿಸುವ ದೃಷ್ಠಿಯಿಂದ ಹೊಲಿಗೆ ತರಬೇತಿ (Sewing training) ಮತ್ತು ವಿಡಿಯೋಗ್ರಾಫಿ (Videography)ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ತರಬೇತಿ ವಿವರ:
ಹೊಲಿಗೆ ತರಬೇತಿ (Sewing Training) ಶಿಬಿರ:
2024ರ ನವೆಂಬರ್ 07 ರಿಂದ 26 ರವರೆಗೆ 20 ದಿನಗಳವರೆಗೆ (Government Free Tailoring Classes in Bangalore) ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ವಿಡಿಯೋಗ್ರಾಫಿ ತರಬೇತಿ ಶಿಬಿರ (Videography):
2024ರ ನವೆಂಬರ್ 15 ರಿಂದ 26ರ ವರೆಗೆ 12 ದಿನಗಳ ಕಾಲ (Government Free Videography Classes in Bangalore) ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಅರ್ಹತೆಗಳು:

  • ಹೊಲಿಗೆ ತರಬೇತಿಗೆ (Sewing training)ಎಸ್.ಎಸ್.ಎಲ್.ಸಿ ಪಾಸ್ ಅಥವಾ ಫೇಲ್ ಆದವರು ಅರ್ಜಿ ಸಲ್ಲಿಸಬಹುದು.
  • ವಿಡಿಯೋಗ್ರಾಫಿ (Videography) ತರಬೇತಿಗೆ ಪಿಯುಸಿ ಪಾಸ್ ಅಥವಾ ಫೇಲ್ ಆದ
  • ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರು ಆಗಿರಬೇಕು.
  • 18 ರಿಂದ 40 ವರ್ಷ ವಯೋಮಿತಿ ಹೊಂದಿರುವ ಯುವ ಜನರು ಅರ್ಜಿ ಸಲ್ಲಿಸಬಹುದು.
  • ಅರ್ಜಿಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದು ಈ ಕಚೇರಿಗೆ ಸಲ್ಲಿಸಲು ತಿಳಿಸಿದೆ. ಹಾಗೂ ಅರ್ಜಿದಾರರು ಅಯಾ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅರ್ಜಿ ಪಡೆದು ಸಲ್ಲಿಸಬಹುದು.

ಗಮನಿಸಿ:
ತರಬೇತಿ ಶಿಬಿರಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಊಟೋಪಹಾರ, ಪ್ರಮಾಣ ಪತ್ರ ಹಾಗೂ ಈ ಶಿಬಿರದಲ್ಲಿ ಭಾಗವಹಿಸುವ ಯುವತಿಯರಿಗೆ ಸಾಮಾನ್ಯ ವಸತಿ ವ್ಯವಸ್ಥೆ ಇರುತ್ತದೆ.

ಆಸಕ್ತ ಯುವಕ ಮತ್ತು ಯುವತಿಯರು ಇಲಾಖೆಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅಕ್ಟೋಬರ್ 30, 2024 ರೊಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:
0836-2447424, 9731251411, 08194-235635, 08192-237480 ಗೆ ಸಂಪರ್ಕಿಸಬಹುದು.

SSLC ಪಾಸಾದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ಕೇದಾರನಾಥ ಸೇರಿ ಚಾರ್‌ಧಾಮ್ ಯಾತ್ರೆ ಕೈಗೊಳ್ಳಲು ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

ಹೈನುಗಾರಿಕೆ ಆರಂಭಿಸಲು ಎಮ್ಮೆ, ಆಕಳು ಖರೀದಿಸಲು ಈ ಬ್ಯಾಂಕ್ ನೀಡುತ್ತಿದೆ ರೂ.10 ಲಕ್ಷ ಸಾಲ 

Leave a Comment