ದಸರಾ ಪ್ರಯುಕ್ತ ಗೃಹಲಕ್ಷ್ಮೀ ಫಲಾನುಭವಿಗಳಿಗೆ 2 ಕಂತಿನ ಹಣ ಒಟ್ಟಿಗೆ 4,000 ರೂ. ಈ ದಿನ ಜಮಾ ಆಗಲಿದೆ | Gruha Lakshmi Money installment

WhatsApp Group Join Now
Telegram Group Join Now

Gruha Lakshmi Money installment: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕವಾಗಿ ಸಾಕಷ್ಟು ಅನುಕೂಲ ಆಗಿದೆ. ಈ ಯೋಜನೆಯಡಿ ಈವರೆಗೂ ಬರೋಬ್ಬರಿ 1ಕೋಟಿ 24 ಲಕ್ಷಕ್ಕೂ ಹೆಚ್ಚು ಮನೆಯ ಯಜಮಾನಿಯರು ಗೃಹಲಕ್ಷ್ಮೀ ಯೋಜನೆ ನೊಂದಣಿ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೆ 13 ಕಂತುಗಳ ಹಣ ಫಲಾನುಭವಿಗಳ ಖಾತೆಗೆ ಬರೋಬ್ಬರಿ 26 ಸಾವಿರ ಪ್ರತಿಯೊಬ್ಬ ಮನೆ ಯಜಮಾನಿ ಅಕೌಂಟ್​ಗೆ ಜಮಾ ಮಾಡಲಾಗಿದೆ.

ದಸರಾ ಹಬ್ಬಕ್ಕೆ ರಾಜ್ಯ ಸರ್ಕಾರ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದೆ. ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) 2 ಕಂತಿನ ಹಣ ಬಿಡುಗಡೆ ಮಾಡುತ್ತಿದ್ದು, ಒಟ್ಟಿಗೆ ನಾಲ್ಕು ಸಾವಿರ ರೂ. ಮಹಿಳಾ ಅಕೌಂಟಗೆ ಜಮಾ ಮಾಡುವ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಜುಲೈ ಮತ್ತು ಆಗಸ್ಟ್‌ ಸೇರಿ ಎರಡು ತಿಂಗಳ ಗೃಹಲಕ್ಷ್ಮೀ ಕಂತಿನ ಹಣ ಜಮಾ ಆಗಿಲ್ಲ. ಹಲವು ತಾಂತ್ರಿಕ ದೋಷಗಳಿಂದ ಎರಡು ಕಂತಿನ ಹಣ (Gruha Lakshmi 4000 Money) ಜಮಾ ಆಗಿರಲಿಲ್ಲ. ಆದರೀಗ ಎರಡು ತಿಂಗಳ ಹಣ ದಸರಾ ಹಬ್ಬದಲ್ಲೇ ಜಮಾವಣೆ ಮಾಡಲಾಗುತ್ತಿದೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್ ನೀಡಿದ್ದಾರೆ.

ಎರಡು ಕಂತಿನ ಹಣವನ್ನ ಹಾಕಿಯೇ ಬೆಂಗಳೂರಿನಿಂದ ಬೆಳಗಾವಿಗೆ ಬಂದಿದ್ದೇನೆ ಅಂತಾ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ. ಜುಲೈ ತಿಂಗಳ ಕಂತಿನ ಹಣವನ್ನ ಅಕ್ಟೋಬರ್ ತಿಂಗಳ 7 ರಂದು ಮತ್ತು ಆಗಷ್ಟ್ ತಿಂಗಳ ಹಣವನ್ನ ಅಕ್ಟೋಬರ್ 9ರಂದು ವರ್ಗಾವಣೆ ಮಾಡಲಾಗುತ್ತದೆ. ಎರಡು ದಿನದ ಅಂತರದಲ್ಲಿ ನಾಲ್ಕು ಸಾವಿರ ರೂಪಾಯಿ ಹಣವನ್ನು ಫಲಾನುಭವಿಗಳಿಗೆ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ.

ಇದನ್ನೂ ಓದಿ:
ಸರ್ಕಾರದಿಂದ ಮಹಿಳೆಯರಿಗೆ 2.5 ಲಕ್ಷ ಸಹಾಯಧನ ಅರ್ಜಿ ಆಹ್ವಾನ 

ಈ 14 ಮಾನದಂಡಗಳ ಲಿಸ್ಟ್‌ನಲ್ಲಿ ನೀವಿದ್ದರೆ ನಿಮ್ಮ ರೇಷನ ಕಾರ್ಡ್ ರದ್ದಾಗಲಿದೆ, ಇಲ್ಲಿದೆ ಸಂಪೂರ್ಣ ಮಾಹಿತಿ 

Leave a Comment