Gruha Lakshmi Scheme : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಹಲವಾರು ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕೆ ಸಹಾಯವಾಗಿದೆ, ಆದರೆ ಕೆಲವು ತಿಂಗಳಿಂದ ಗೃಹಲಕ್ಷ್ಮಿ ಪೆಂಡಿಂಗ್ ಹಣ ಬಿಡುಗಡೆ ಆಗದೆ ಇರುವುದರಿಂದ ರಾಜ್ಯದ ಮಹಿಳೆಯರಲ್ಲಿ ಆತಂಕ ಹೆಚ್ಚಾಗಿದ್ದು, ಕೆಲವು ಫಲಾನುಭವಿಗಳಿಗೆ 15ನೇ, ಕಂತಿನ ಹಣ ಜಮಾ ಆಗಿಲ್ಲ, ಇನ್ನೋಳಿಂದ ಎರಡು ಕಂತು 16ನೇ ಮತ್ತು 17ನೇ ಕಂತಿನ ಹಣ ಇನ್ನೂ ಜಮಾ ಆಗಿಲ್ಲ, ಇದರಿಂದಾಗಿ ಮಹಿಳೆಯರು ತೀವ್ರ ನಿರೀಕ್ಷೆಯಲ್ಲಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar), ಸ್ಪಷ್ಟನೆ ನೀಡಿದ್ದಾರೆ. ಕಳೆದ ಎರಡು ಕಂತಿನ ಹಣ ಜಮಾ ಆಗದ ಹಿನ್ನೆಲೆ, 15ನೇ ಕಂತಿನ ಹಣ ಇನ್ನೂ ಕೆಲ ಜಿಲ್ಲೆಗಳಲ್ಲಿ ಉಳಿದುಕೊಂಡಿದೆ.
ಆದರೆ 16 ಮತ್ತು 17ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ ಎಂಬ ಪ್ರಶ್ನೆಗೆ, ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar), ಮುಂದಿನ ಹಂತದಲ್ಲಿ ಎಲ್ಲಾ ಜಿಲ್ಲೆಗಳಿಗೂ ಪೆಂಡಿಂಗ್ ಉಳದಿರುವ ಹಣ ಎಲ್ಲಾ ಖಾತೆಗೆ (Bank Account) ಸಂದಾಯ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
Gruha Lakshmi Scheme 16ನೇ ಮತ್ತು 17ನೇ ಕಂತಿನ ಪಾವತಿ ಯಾವಾಗ?
16 ಮತ್ತು 17ನೇ ಕಂತುಗಳ ಪಾವತಿ ಹಂತ ಹಂತವಾಗಿ ಮಾಡಲಾಗುತ್ತಿದ್ದು, ಫೆಬ್ರವರಿ (ದಿನಾಂಕ 20 ರಿಂದ 26) ಕೊನೆ ವಾರದೊಳಗೆ ಮಹಿಳೆಯರ ಖಾತೆಗೆ (Bank Account) ಸಂದಾಯವಾಗಲಿವೆ. ಈ ನಿರ್ಧಾರದಿಂದ ರಾಜ್ಯದ ಸಾವಿರಾರು ಮಹಿಳೆಯರು ನಿರೀಕ್ಷಿತ ಸಹಾಯ ಪಡೆಯಲಿದ್ದಾರೆ.
ಗೃಹಲಕ್ಷ್ಮಿ ಹಣ ಪಾವತಿ ವಿಧಾನದಲ್ಲಿ ಬದಲಾವಣೆ ?
ಈಗಾಗಲೇ ಸರ್ಕಾರದಿಂದ ಗೃಹಲಕ್ಷ್ಮಿ ಹಣ ಮಂಜೂರಾಗಿದ್ದು, ಜಿಲ್ಲಾ ಉಪ ನಿರ್ದೇಶಕರ ಮೂಲಕ ಫಲಾನುಭವಿಗಳ ಖಾತೆಗೆ ಹಣ ಸಂದಾಯ ಮಾಡಲು ಪ್ರಕ್ರಿಯೆ ನಡೆಯುತ್ತಿದೆ. ತಾಲ್ಲೂಕು ಪಂಚಾಯಿತಿಗಳ ಮೂಲಕ ಹಣ ಪಾವತಿಸುವ ವ್ಯವಸ್ಥೆ ಇರುವುದರಿಂದ, ಮಹಿಳೆಯರು ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಹಣ ಎಲ್ಲರ ಖಾತೆಗೆ (Bank Account) ಜಮಾವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಅನ್ನಭಾಗ್ಯ ಹಣ ಜಮಾ, ನಿಮ್ಮ ಖಾತೆಗೆ ಜಮಾ ಆಯ್ತಾ ಸ್ಟೇಟಸ್ ಚೆಕ್ ಮಾಡಿ