Hassan Ayush Department Recruitment 2024: ಹಾಸನ ಜಿಲ್ಲಾ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ತಜ್ಞವೈದ್ಯರು, ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಆಯುಷ್ ಇಲಾಖೆಯಲ್ಲಿ ತಜ್ಞವೈದ್ಯರು, ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ಹೆಸರು : ತಜ್ಞ ವೈದ್ಯರು (ಆಯುರ್ವೇದ), ತಜ್ಞ ವೈದ್ಯರು, ಸಮುದಾಯ ಆರೋಗ್ಯ ಅಧಿಕಾರಿ.
ಉದ್ಯೋಗದ ಸ್ಥಳ : ಹಾಸನ (ಕರ್ನಾಟಕ)
ಒಟ್ಟು ಹುದ್ದೆಗಳ ಸಂಖ್ಯೆ : 14
Hassan Ayush Department Recruitment 2024
ಹುದ್ದೆಗಳ ಮಾಹಿತಿ:
ತಜ್ಞ ವೈದ್ಯರು (ಆಯುರ್ವೇದ): 01
ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ): 01
ಔಷಧಿ ವಿತರಕರು: 06
ಮಸಾಜಿಸ್ಟ್: 0 2
ಮಲ್ಲಿಪರ್ಪಸ್ ವರ್ಕರ್: 01
ಸಮುದಾಯ ಆರೋಗ್ಯ ಅಧಿಕಾರಿ: 03
ಶೈಕ್ಷಣಿಕ ಅರ್ಹತೆ :
ತಜ್ಞ ವೈದ್ಯರು (ಆಯುರ್ವೇದ):
ಬಿ.ಎ.ಎಂ.ಎಸ್ ಪದವಿ, ಎಂ.ಎಸ್ ಇನ್ ಶಲ್ಯತಂತ್ರ/ ಎಂ.ಡಿ ಇನ್ ಪಂಚಕರ್ಮ/ ಕಾಯಚಿಕಿತ್ಸಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜೊತೆಗೆ 3 ವರ್ಷಗಳ ಅನುಭವವನ್ನು ಹೊಂದಿರಬೇಕು.
ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ):
ಬಿ.ಎನ್.ವೈ.ಎಸ್ ಪದವಿ, ಎಂ.ಎಸ್/ ಎಂ.ಡಿ ಸ್ನಾತಕೋತ್ತರ ಪದವಿ ಪಾಸಾಗಿರಬೇಕು. ಜೊತೆಗೆ 3 ವರ್ಷಗಳ ಅನುಭವ ಹೊಂದಿರಬೇಕು.
ಔಷಧಿ ವಿತರಕರು:
ಬಿ-ಫಾರ್ಮ ಪದವಿ. ಕಂಪ್ಯೂಟರ್ ಜ್ಞಾನ, ಆಯುಷ್ ಆಸ್ಪತ್ರೆ, ಚಿಕಿತ್ಸಾಲಯಗಳಲ್ಲಿ ಕನಿಷ್ಠ 2 ವರ್ಷ ಕರ್ತವ್ಯ ಅನುಭವ ಹೊಂದಿರಬೇಕು.
ಮಸಾಜಿಸ್ಟ್:
ಅರ್ಜಿದಾರರು SSLC ಪಾಸಾಗಿರಬೇಕು ಮತ್ತು ಆಯುಷ್ ಆಸ್ಪತ್ರೆ & ಚಿಕಿತ್ಸಾಲಯಗಳಲ್ಲಿ 2 ವರ್ಷ ಅನುಭವ ಹೊಂದಿರಬೇಕು.
ಮಲ್ಟಿಪರ್ಪಸ್ ವರ್ಕರ್:
ಅಭ್ಯರ್ಥಿಗಳ SSLC ಪಾಸಾಗಿರಬೇಕು. ಆಯುಷ್ ಆಸ್ಪತ್ರೆ/ ಚಿಕಿತ್ಸಾಲಯಗಳಲ್ಲಿ ಕನಿಷ್ಠ 1 ವರ್ಷದ ಅನುಭವ ಹೊಂದಿರಬೇಕು.
ಸಮುದಾಯ ಆರೋಗ್ಯ ಅಧಿಕಾರಿ:
ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲಿ ಪದವಿ (BAMS), ಯುನಾನಿ ವೈದ್ಯಕೀಯ ವಿಜ್ಞಾನದಲ್ಲಿ ಪದವಿ (BUMS) ಪಾಸಾಗಿರಬೇಕು.
ಇದನ್ನೂ ಓದಿ: 1130 ಫೈರ್ ಮ್ಯಾನ್ & ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ
Hassan Ayush Department Recruitment 2024 ವಯೋಮಿತಿ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷ
- ಪ್ರವರ್ಗ1, 2a, 2b, 3a, 3b ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷ
- SC/ST ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ
ವೇತನ ಶ್ರೇಣಿ:
ತಜ್ಞ ವೈದ್ಯರು (ಆಯುರ್ವೇದ): 57,550 ರೂ.
ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ): 57,550 ರೂ.
ಔಷಧಿ ವಿತರಕರು : 27,550 ರೂ.
ಮಸಾಜಿಸ್ಟ್ : 18,500 ರೂ.
ಮಲ್ಲಿಪರ್ಪಸ್ ವರ್ಕರ್: 16,900 ರೂ.
ಸಮುದಾಯ ಆರೋಗ್ಯ ಅಧಿಕಾರಿ : 40,000 ರೂ.
ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ಮೆರಿಟ್ ಲಿಸ್ಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ,
ಹೊಸಲೈನ್ ರಸ್ತೆ, ಹಾಸನ – 573201
ಇದನ್ನೂ ಓದಿ: ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ 10ನೇ, ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕಗಳು :
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 29 -08- 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-09- 2024
Hassan Ayush Department Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಫಾರ್ಮ್ ಗಾಗಿ: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: hassan.nic.in
ಇದನ್ನೂ ಓದಿ: ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ 50,000 ರೂ. ವೇತನ