Haveri District Court Recruitment 2024: SSLC ಪಾಸಾದವರು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವಂತಹ ಜವಾನ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ನೇಮಕಾತಿ ಮಾಡಿಕೊಳ್ಳಲು ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಕೆಳಗಿನಂತಿದೆ.
ಹಾವೇರಿ ಜಿಲ್ಲಾ ನ್ಯಾಯಾಲಯ (Haveri court recruitment 2024) ನೇಮಕಾತಿ ಅಧಿಸೂಚನೆ ಗೆ ಸಂಬಂಧಿಸಿದಂತೆ, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ವೇತನ, ಹುದ್ದೆಗಳ ವಿವರ, ಆಯ್ಕೆ ಪ್ರಕ್ರಿಯೆ, ಶುಲ್ಕ ಪಾವತಿಸುವ ವಿಧಾನ, ದಿನಾಂಕ, ಅರ್ಜಿ ಸಲ್ಲಿಕೆಗೆ ಡೈರೆಕ್ಟ್ ಲಿಂಕ್, ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
Haveri District Court Recruitment 2024 ಮಾಹಿತಿ:
ಹುದ್ದೆಗಳ ಹೆಸರು : ಜವಾನ್ (Peon)
ಒಟ್ಟು ಹುದ್ದೆಗಳ ಸಂಖ್ಯೆ : 26
ಉದ್ಯೋಗದ ಸ್ಥಳ : ಹಾವೇರಿ ಕರ್ನಾಟಕ
ಶೈಕ್ಷಣಿಕ ಅರ್ಹತೆ:
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಹಾವೇರಿ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಸಾಗಿರಬೇಕು. ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.
ವಯೋಮಿತಿ:
ನ್ಯಾಯಾಲಯ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿಯನ್ನು ವರ್ಗಗಳಿಗೆ ಅನುಗುಣವಾಗಿ ಕೆಳಗಿನಂತಿವೆ.
ಇದನ್ನೂ ಓದಿ: SSLC ಪರೀಕ್ಷೆ-2ರ ಫಲಿತಾಂಶ ಪ್ರಕಟ ಮೊಬೈಲ್ ನೋಡಿ ಡೈರೆಕ್ಟ್ ಲಿಂಕ್
ಗರಿಷ್ಠ ವಯೋಮಿತಿ ಸಡಿಲಿಕೆ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: 35 ವರ್ಷ
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 38 ವರ್ಷ
SC, ST ಹಾಗೂ ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ: 40 ವರ್ಷ
ವೇತನ ಶ್ರೇಣಿ:
ಹಾವೇರಿ ಜಿಲ್ಲಾ ನ್ಯಾಯಾಲಯ ನೇಮಕಾತಿ (haveri court recruitment) ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 17,000 ಯಿಂದ 28,950 ರೂ. ವೇತನವನ್ನು ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಹಾವೇರಿ ಜಿಲ್ಲಾ ನ್ಯಾಯಾಲಯ (haveri district court) ನೇಮಕಾತಿ ಪ್ರಕಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ SSLC ಅಂಕಗಳ ಆಧಾರದ ಮೇಲೆ ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: PUC, ಪದವಿ, ಡಿಪ್ಲೊಮಾ, ಓದುತ್ತಿರುವ ವಿದ್ಯಾರ್ಥಿಗಳಿಗೆ 12,000 ರೂ. ವಿದ್ಯಾರ್ಥಿವೇತನ
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು: 200 ರೂ.
ಪ್ರವರ್ಗ 2a, 2b, 3a, 3b ವರ್ಗದ ಅಭ್ಯರ್ಥಿಗಳು: 100 ರೂ.
SC, ST ವರ್ಗದ ಅಭ್ಯರ್ಥಿಗಳು: ಅರ್ಜಿ ಶುಲ್ಕವಿರುವುದಿಲ್ಲ
ಪ್ರಮುಖ ದಿನಾಂಕಗಳ:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 03/07/2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : 01/08/2024
Haveri district court recruitment 2024 ಲಿಂಕ್‌ಗಳು:
ಅಧಿಕೃತ ಅಧಿಸೂಚನೆ: Download
ಆನ್‌ಲೈನ್ ಅರ್ಜಿ ಸಲ್ಲಿಸಲು ಲಿಂಕ್: Apply Online
ವೆಬ್‌ಸೈಟ್ ವಿಳಾಸ: haveri.dcourt.gov.in