ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ, ಖಾಲಿ ಇರುವ (HESCOM Recruitment 2024) ಅಪ್ರೆಂಟಿಸ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ.
ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಅಗತ್ಯ ಮಾಹಿತಿ, ಹುದ್ದೆ ಸಂಖ್ಯೆ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವೇತನ, ಪ್ರಮುಖ ದಿನಾಂಕಗಳು, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಸೇರಿದಂತೆ ಸಂಪೂರ್ಣ ವಿವರವನ್ನು ಕೆಳಗೆ ನೀಡಲಾಗಿದೆ.
HESCOM Recruitment 2024
ನೇಮಕಾತಿ ಸಂಸ್ಥೆ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ
ಒಟ್ಟು ಹುದ್ದೆಗಳ ಸಂಖ್ಯೆ: 338
ಉದ್ಯೋಗದ ಸ್ಥಳ: ಹುಬ್ಬಳ್ಳಿ (ಕರ್ನಾಟಕ)
ಹುದ್ದೆಗಳ ಹೆಸರು: ಅಪ್ರೆಂಟಿಸ್
ಹುದ್ದೆಗಳ ಮಾಹಿತಿ Vacancy Details:
- ಪದವಿ ಪಾಸಾದವರಿಗೆ : 200
- ಡಿಪ್ಲೋಮಾ ಪಾಸಾದವರಿಗೆ: 138
ಶೈಕ್ಷಣಿಕ ಅರ್ಹತೆ Qualification:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಅಥವಾ ಎಲೆಕ್ಟಿಕಲ್ ಅಥವಾ ಎಲೆಕ್ಟ್ರಾನಿಕ್ಸ್ (Electrical/ Electronic Engineering) ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರಬೇಕು.
ವಯೋಮಿತಿ Age limits:
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ ಅಪ್ರೆಂಟಿಸ್ ಶಿಪ್ ಕಾಯ್ದೆಯ ಅನುಸಾರ ಅಭ್ಯರ್ಥಿಗಳು ವಯೋಮಿತಿಯನ್ನು ಹೊಂದಿರಬೇಕು.
ವೇತನ (ಸ್ಟೈಪಂಡ):
ಇಂಜಿನಿಯರಿಂಗ್ ಪದವಿ ಮುಗಿಸಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು: 9,000 ರೂ.
ಡಿಪ್ಲೋಮಾ ಮುಗಿಸಿರುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು: 8,000 ರೂ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ತಯಾರಿಸಿ, ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಇಮೇಲ್ ಮುಖಾಂತರ ಮಾಹಿತಿಯನ್ನು ಕಳುಹಿಸಲಾಗುತ್ತದೆ.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20, ಆಗಸ್ಟ್ 2024
- ಮೆರಿಟ್ ಲಿಸ್ಟ್ ಬಿಡುಗಡೆ ದಿನಾಂಕ: 27 ಆಗಸ್ಟ್, 2024
- ದಾಖಲೆಗಳ ಪರಿಶೀಲನೆ ದಿನಾಂಕ: 09 ಸೆಪ್ಟೆಂಬರ್, 2024
HESCOM Recruitment 2024 ಪ್ರಮುಖ ಲಿಂಕುಗಳು :
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಹೆಸ್ಕಾಂ ವೆಬ್‌ಸೈಟ್: ಇಲ್ಲಿ ಕ್ಲಿಕ್ ಮಾಡಿ